ಸ್ಯಾಂಡಲ್ ವುಡ್ ಬಾದ್ ಷಾ,ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಧ್ಯ ಬ್ರೇಕ್ ತೆಗೆದುಕೊಂಡಿದ್ದಾರೆ ಅನ್ನೋ ವಿಚಾರ ಎಲ್ಲರಿಗೂ ಗೊತ್ತು.ಕಿಚ್ಚನ 46ನೇ ಸಿನಿಮಾ ಯಾವುದು ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಎದ್ದಿತ್ತು. ವಿಕ್ರಾಂತ್ ರೋಣ ಸಿನಿಮಾ ಬಳಿಕ ಸುದೀಪ್ ಯಾವುದೇ ಸಿನಿಮಾ ಅನೌನ್ಸ್ ಮಾಡಿರಲಿಲ್ಲ.ಕ್ರಿಕೇಟ್ ಬಿಗ್ ಬಾಸ್ ಹೀಗೆ ಬ್ಯುಸಿಯಾಗಿದ್ದ ಸುದೀಪ್ ಬಗ್ಗೆ ಇದ್ದ
ತಮ್ಮ ನೆಚ್ಚಿನ ನಟ ಯಾವ ಚಿತ್ರದ ಮೂಲಕ,ಯಾವಾಗ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಕ್ಯೂರಿಯಾಸಿಟಿ ಗೆ ಮಾತ್ರ ಈವರೆಗೂ ಬ್ರೇಕ್ ಬಿದ್ದಿರಲಿಲ್ಲ.ಆದ್ರೆ ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಕುರಿತು ಸ್ವತಃ ಕಿಚ್ಚನೇ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಎಸ್..ಅವರೇ ಹೇಳಿರುವಂತೆ ಇಷ್ಟು ದೊಡ್ಡ ಬ್ರೇಕ್ ಯಾವುತ್ತು ಪಡೆದಿರಲಿಲ್ಲ. ಇದು ತನ್ನ ಮೊದಲ ಬ್ರೇಕ್ ಎಂದಿರುವ ಸುದೀಪ್ ಮೂರು ಸಿನಿಮಾಗಳನ್ನು ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಪತ್ರ ಬರೆದಿದ್ದಾರೆ. ಹಾಗು ಅಭಿಮಾನಿಗಳಿಗೆ ತ್ರಿಬಲ್ ಧಮಕಾ ಕೊಟ್ಟಿದ್ದಾರೆ.ಅದೇನಂದ್ರೆ, ಮೂರು ಸಿನಿಮಾಗಳನ್ನು ಫೈನಲ್ ಮಾಡಿರುವುದಾಗಿ ಸುದೀಪ್ ಹೇಳಿದ್ದಾರೆ. ಮೂರು ಸಿನಿಮಾಗಳ ಕೆಲಸ ಭರ್ಜರಿಯಾಗಿ ನಡೆಯುತ್ತಿದೆ. ಬಿಗ್ ಬಜೆಟ್ ನಲ್ಲಿ ಸಿನಿಮಾ ತಯಾರಾಗುತ್ತಿದೆ. ಹಗಲು ರಾತ್ರಿ ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ. ಸದ್ಯದಲ್ಲೇ ಮೂರು ಸಿನಿಮಾಗಳ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.
ತುಂಬ ಶ್ರಮವಹಿಸಿ, ಬಹಳ ಸಮಯ ತೆಗೆದುಕೊಂಡು ವಿಕ್ರಾಂತ್ ರೋಣ ಶೂಟಿಂಗ್ ಮಾಡಿದ್ದರಿಂದ ಹಾಗೂ ಸತತವಾಗಿ ಬಿಗ್ಬಾಸ್ ಒಟಿಟಿ ಮತ್ತು ಟಿವಿ ಸೀಸನ್ನಲ್ಲಿ ಪಾಲ್ಗೊಂಡಿದ್ದರಿಂದ ಈ ಬ್ರೇಕ್ನ ಅವಶ್ಯಕತೆ ಇತ್ತು. ನನ್ನನ್ನು ಹೆಚ್ಚು ಖುಷಿಯಾಗಿಸುವ ರೀತಿಯಲ್ಲಿ ಈ ದಿನಗಳನ್ನು ಕಳೆಯಬೇಕು ಎನಿಸಿತು. ಕ್ರಿಕೆಟ್ನಿಂದ ನನಗೆ ರಿಲ್ಯಾಕ್ಸ್ ಸಿಗುತ್ತದೆ. ಕೆಸಿಸಿಯಲ್ಲಿ ತೊಡಗಿಕೊಂಡು ಸಮಯ ಕಳೆದಿದ್ದು ತುಂಬ ಖುಷಿ ನೀಡಿತು’ ಎಂದು ಸುದೀಪ್ ಬರೆದುಕೊಂಡಿದ್ದಾರೆ.
‘ಈ ಬ್ರೇಕ್ನಲ್ಲಿ ಹೊಸ ಸ್ಕ್ರಿಪ್ಟ್ ಬಗ್ಗೆ ಚರ್ಚೆ ಮತ್ತು ಮೀಟಿಂಗ್ಗಳು ಪ್ರತಿದಿನದ ಆಗುತ್ತಿತ್ತು. ಮೂರು ಸ್ಕ್ರಿಪ್ಟ್ಗಳನ್ನು ಫೈನಲ್ ಮಾಡಿದ್ದೇನೆ. ಅಂದರೆ, 3 ಸಿನಿಮಾಗಳನ್ನು ಆಯ್ಕೆ ಮಾಡಿದ್ದೇನೆ. ಇವುಗಳಿಗೆ ದೊಡ್ಡ ಮಟ್ಟದ ತಯಾರಿ ಬೇಕು. ಮೂರೂ ಚಿತ್ರಗಳಿಗೆ ಹೋಮ್ವರ್ಕ್ ನಡೆಯುತ್ತಿದೆ. ಆ ತಂಡದವರು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಅನೌನ್ಸ್ ಮಾಡುತ್ತೇನೆ’ ಎಂದು ಸುದೀಪ್ ಅವರು ಸುದೀರ್ಘವಾದ ಪತ್ರ ಬರೆಯುವ ಮೂಲಕ ಅಭಿಮಾನಿಗಳಿಗೆ, ತಮ್ಮ ಇದ್ದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.ಈ ಮೂಲಕ ಕಿಚ್ಚನ ಹೊಸ ೩ ಸಿನೆಮಾಗಳು ಸಧ್ಯದಲ್ಲೇ ಬರಲಿವೆ ಎಂಬ ಮಾಹಿತಿಯಿಂದ ಅಭಿಮಾನಿಗಳಿಗೆ ಹಬ್ಬದೂಟ ಮಾಡಿದ ಖುಷಿಯಾಗಿರೋದಂತು ನಿಜ.