ಬುಧವಾರ, ಜುಲೈ 2, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಅಭಿರಾಮಚಂದ್ರ ನಿಗೆ ಭೇಶ್ ಎಂದ ಹ್ಯಾಟ್ರಿಕ್ ಹೀರೋ ಶಿವಣ್ಣ

Vishalakshi Pby Vishalakshi P
04/04/2023
in Majja Special
Reading Time: 1 min read
ಅಭಿರಾಮಚಂದ್ರ ನಿಗೆ ಭೇಶ್ ಎಂದ ಹ್ಯಾಟ್ರಿಕ್ ಹೀರೋ ಶಿವಣ್ಣ

Hat-trick hero Sivanna is a bhesh for Abhiramchandra

ನಾಗೇಂದ್ರ ಗಾಣಿಗ ಡೈರೆಕ್ಷನ್ ನಲ್ಲಿ ಮೂಡಿಬರ್ತಿರುವ ಅಭಿರಾಮಚಂದ್ರ ಸಿನೆಮಾದ ಟೀಸರ್ ರಿಲೀಸ್ ಆಗಿದೆ.
ರಥ ಕಿರಣ್, ಸಿದ್ದು ಮೂಲಿಮನಿ, ಮತ್ತು ನಾಟ್ಯ ರಂಗ,ಶಿವಾನಿ ರೈ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಅಭಿರಾಮಚಂದ್ರ’ ಟೀಸರ್ ಅನ್ನು ಕರುನಾಡ ಚಕ್ರವರ್ತಿ ಶಿವಣ್ಣ ಬಿಡುಗಡೆ ಮಾಡುವ ಮೂಲಕ ಇಡೀ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.
ಟೀಸರ್ ನೋಡಿ ಮೆಚ್ಚಿರುವ ಶಿವಣ್ಣ ಅದನ್ನ ಬಿಡುಗಡೆ ಗೊಳಿಸಿ ತಂಡದ ಪ್ರಯತ್ನಕ್ಕೆ ಭೇಷ್ ಅಂದಿದ್ದಾರೆ.ನಂತರ ಮಾತನಾಡಿದ ಅವರು
‘ಅಭಿರಾಮಚಂದ್ರ’ ಟೀಸರ್ ರಿಲೀಸ್ ಮಾಡಿದ್ದು, ಬಹಳ ಖುಷಿಯಾಯ್ತು. ಬ್ಯೂಟಿಫುಲ್ ವಿಷ್ಯೂವಲ್ಸ್ ಟ್ರೀಟ್ ಕೊಡುವ ಬರೀ ಮಕ್ಕಳ ಕಥೆ ಇರುವ ಈ ಸ್ಟೋರಿಯಲ್ಲಿ ಬೇರೆ ಬೇರೆ ತಿರುವು ಕಾಣುತ್ತಿದೆ. ಅದನ್ನು ನಾವು ಹೇಳೋದಕ್ಕಿಂತ ಡೈರೆಕ್ಟರ್ ಹೇಳಿದರೆ ಒಳ್ಳೆಯದು.
ಟೀಸರ್ ನೋಡ್ತಿದ್ರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೆನಪಾಯ್ತು. ಆ ಸಿನಿಮಾ ಥರ ಹಿಟ್ ಆಗಲಿ, ಟೈಟಲ್ ತುಂಬಾ ಪಾಸಿಟಿವ್ ಆಗಿದೆ. ಸಿನಿಮಾ ಮೇ ನಲ್ಲಿ ರಿಲೀಸ್ ಆಗ್ತಿದ್ದು, ನಾನು ನೋಡ್ತೇನೆ. ನೀವು ನೋಡಿ, ರವಿಬಸ್ರೂರ್ ಮ್ಯೂಸಿಕ್ ಮಾಡಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಶಿವಣ್ಣ ಅಭಿರಾಮಚಂದ್ರ ತಂಡಕ್ಕೆ ಹಾರೈಸಿದ್ರು.

ಕುಂದಾಪುರ, ಬೆಂಗಳೂರು, ಮೈಸೂರು ಭಾಗದಲ್ಲಿ ಶೂಟಿಂಗ್ ನಡೆಸಲಾಗಿರುವ ಈ ಚಿತ್ರದ ಟೀಸರ್ ನಮ್ಮನ್ನ ಶಾಲೆಯ ದಿನಗಳ ನೆನಪನ್ನ ತರಿಸುತ್ತೆ. ಆ ದಿನಗಳ ಪ್ರೀತಿ,ಸ್ನೇಹ,ತುಂಟಾಟ,ತರ್ಲೆ,ತಮಾಷೆಗಳನ್ನ ಮೆಲುಕು ಹಾಕಿಸುವಂತಿದೆ. ಟೀಸರ್ ನೋಡಿದ್ರೆ ಸಿನೆಮಾವುವ ನ್ಯಾಚುರಲ್ ಆಗಿ ಮೂಡಿ ಬಂದಿರುವಂತೆ ಕಾಣುತ್ತಿದ್ದು,ಟೀಸರ್ ನೋಡಿದ ಪ್ರೇಕ್ಷಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಈ ಹಿಂದೆ ‘ಕಿರಿಕ್ ಪಾರ್ಟಿ’ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ನಾಗೇಂದ್ರ ಗಾಣಿಗ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡ್ತಿದ್ದಾರೆ. AGS Entertainment ಹಾಗೂ ರವಿ ಬಸ್ರೂರು ಮ್ಯೂಸಿಕ್ ಮತ್ತು ಮೂವೀಸ್ ಬ್ಯಾನರ್‌ನಲ್ಲಿ ಎ.ಜಿ.ಸುರೇಶ್ ಹಾಗೂ ಮಲ್ಲೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು,ರವಿ ಬಸ್ರೂರು ಸಂಗೀತ ನಿರ್ದೇಶನ ಚಿತ್ರಕ್ಕಿರಲಿದ್ದು, ಅವರ ಪುತ್ರ ಪವನ್ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ., ಇನ್ನುಳಿದಂತೆ ಸಂದೀಪ್ ವಲ್ಲೂರಿ ಛಾಯಾಗ್ರಹಣ, ಸುರೇಶ್ ಆರುಮುಗಂ ಸಂಕಲನವಿರುವ ಅಭಿರಾಮಚಂದ್ರ ಚಿತ್ರದಲ್ಲಿ ವೀಣಾ ಸುಂದರ್, ಸುಂದರ್, ಎಸ್.ನಾರಾಯಣ್, ಪ್ರಕಾಶ್ ತೂಮಿನಾಡು ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.
ಸದ್ಯ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ‘ಅಭಿರಾಮಚಂದ್ರ’ದ ಟೀಸರ್ ನೋಡಿ ಮೆಚ್ಚಿರುವ ಪ್ರೇಕ್ಷಕರು ಸಿನಿಮಾ ಮೇ ತಿಂಗಳಲ್ಲಿ ತೆರೆಗೆ ಬರುವ ದಿನಾಂಕವನ್ನ ಎದುರುನೋಡ್ತಿದ್ದಾರೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಕಾಂತಾರ-೨ ಚಿತ್ರದ ಸೀಕ್ವೇಲ್ ಅನ್ನು ಅಭಿಮಾನಿಗಳೇ ಬೇಡವೆಂದಿದ್ಯಾಕೆ ?

ಕಾಂತಾರ-೨ ಚಿತ್ರದ ಸೀಕ್ವೇಲ್ ಅನ್ನು ಅಭಿಮಾನಿಗಳೇ ಬೇಡವೆಂದಿದ್ಯಾಕೆ ?

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.