ಶ್ರೇಷ್ಟ ಬಿಟ್ಟೋಗ್ಬೇಡ ಶ್ರೇಷ್ಟ, ಅರ್ಧಕ್ಕೆ ಕೈ ಕೊಡಬೇಡ ಶ್ರೇಷ್ಠ. ನಿನ್ನ ಜಾಗದಲ್ಲಿ ಬೇರೆಯವರನ್ನ ಕಲ್ಪಿಸಿಕೊಳ್ಳೋದಕ್ಕೂ ಕಷ್ಟ ಆಗುತ್ತೆ ಶ್ರೇಷ್ಠ. ಪ್ಲೀಸ್ ಅರ್ಥ ಮಾಡ್ಕೊ ಶ್ರೇಷ್ಠ, ನಿನ್ನ ನಿರ್ಧಾರ ಬದಲಾಯಿಸಿಕೊ ಶ್ರೇಷ್ಠ ಅಂತ ಕೇಳಿಕೊಂಡಿದ್ದೇನೋ ಸತ್ಯ. ಅಷ್ಟರಲ್ಲಿ ಶ್ರೇಷ್ಠ ತೀರ್ಮಾನ ಮಾಡಿದ್ದಳು. ವೈಯಕ್ತಿಕ ಕಾರಣಗಳಿಂದ, ಅನಿವಾರ್ಯ ಪರಿಸ್ಥಿತಿಯಿದ, ಒಲ್ಲದ ಮನಸ್ಸಿಂದ ಅಲ್ಲಿಂದ ಎದ್ದುಹೋಗುವ ನಿರ್ಧಾರಕ್ಕೆ ಬಂದಿದ್ದಳು. ಅದರಂತೇ ಅಲ್ಲಿಂದ ಹೊರನಡೆದೇಬಿಟ್ಟಳು. ಅಷ್ಟಕ್ಕೂ ಯಾರು ಈ ಶ್ರೇಷ್ಠ ಅಂತ ಕನ್ಫ್ಯೂಸ್ ಆಗ್ತಿದೆಯಾ? ನಿಮ್ಮ ಗೊಂದಲಕ್ಕೆ ಮತ್ತು ಕುತೂಹಲಕ್ಕೆ ಉತ್ತರ ಕೊಡುವ ಸ್ಟೋರಿ ಇಲ್ಲಿದೆ ನೋಡಿ
ದಿನಬೆಳಗಾದರೆ, ರಾತ್ರಿಯಾದರೆ ಸೀರಿಯಲ್ ನೋಡುವವರಿಗೆ ಈ ಶ್ರೇಷ್ಠ ಬಗ್ಗೆ ಗೊತ್ತಿರುತ್ತೆ. ಆದರೆ, ಸೀರಿಯಲ್ ಪ್ರಿಯರಲ್ಲದವರಿಗೆ ಈ ಶ್ರೇಷ್ಠ ಬಗ್ಗೆ ಅಷ್ಟಾಗಿ ತಿಳಿದಿರಲ್ಲ. ಹೀಗಾಗಿ, ಶ್ರೇಷ್ಠ ಪರಿಚಯ ಮಾಡಿಕೊಡಬೇಕು ಅಂದರೆ ಆ ಧಾರಾವಾಹಿಯ ಹೆಸರು ಹೇಳಲೆಬೇಕು. ಯಸ್, ಅದು ಕಲರ್ಸ್ ಕನ್ನಡದ ಧಾರವಾಹಿ. ಹೆಸರು ಭಾಗ್ಯಲಕ್ಷ್ಮಿ ಅಂತ. ಬಹುಷಃ ಈ ಹೆಸರು ಕೇಳಿದಾಕ್ಷಣ ಶ್ರೇಷ್ಠ ಚಹರೆ ಸೀರಿಯಲ್ ಪ್ರಿಯರ ಕಣ್ಣಮುಂದೆ ಬಂದಿರುತ್ತೆ. ಅವರಿಗೂ ಶ್ರೇಷ್ಠ ಯಾಕೇ ಸಡನ್ನಾಗಿ ಕಣ್ಮರೆಯಾದಳು. ಅದ್ಯಾಕೆ ಅರ್ಧಕ್ಕೆ ಈ ಸೀರಿಯಲ್ ನ ಬಿಟ್ಟು ಹೋದಳು ಎನ್ನುವ ಪ್ರಶ್ನೆ ಕಾಡಿರುತ್ತೆ. ಅದಕ್ಕೆ ಉತ್ತರ ಕೊಡುವುದರ ಜೊತೆಗೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡುವವರು ಶ್ರೇಷ್ಠನ ಎಷ್ಟು ಮಿಸ್ ಮಾಡಿಕೊಳ್ತಿದ್ದಾರೆ. ಆಕೆ ಧಾರವಾಹಿಯಿಂದ ಹೊರನಡೆಯುವ ಹೊತ್ತಲ್ಲಿ ಯಾವ ಪರಿ ಅವರು ಬೇಡಿಕೊಂಡಿದ್ದರು ಅನ್ನೋದನ್ನ ಹೇಳ್ತಾ ಹೋಗ್ತೀವಿ ಕೇಳಿ.
ಶ್ರೇಷ್ಠ.. ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಬರುವ ಖಳನಾಯಕಿಯ ಪಾತ್ರ. ಈ ಪಾತ್ರಕ್ಕೆ ನಟಿ ಗೌತಮಿಗೌಡ ಜೀವತುಂಬಿದ್ದರು. ಶ್ರೇಷ್ಠ ಹೆಸರಿಂದ ಗುರ್ತಿಸಿಕೊಂಡಿದ್ದರು. ಖಳನಾಯಕಿ ಪಾತ್ರವಾದರೂ ಕೂಡ ಜನಮನ್ನಣೆ ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಹೋದಲ್ಲಿ, ಬಂದಲ್ಲಿ ಜನ ಶ್ರೇಷ್ಠ ನೋಡೋದಕ್ಕೆ ಮುಗಿಬೀಳುತ್ತಿದ್ದರು, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದರು. ಈ ಮಟ್ಟಗೆ ಜನಪ್ರಿಯತೆ ಗಳಿಸಿಕೊಂಡ ಶ್ರೇಷ್ಠ ಅದ್ಯಾಕೋ ಏನೋ ಗೊತ್ತಿಲ್ಲ ಭಾಗ್ಯಲಕ್ಷ್ಮಿ ಸೀರಿಯಲ್ನಿಂದ ಹೊರನಡೆಯುವ ನಿರ್ಧಾರ ಕೈಗೊಳ್ಳುತ್ತಾರೆ. ಅದ್ರಂತೆ ಧಾರವಾಹಿಯಿಂದ ಹೊರಗಡೆ ಹೋಗುತ್ತಾರೆ. ಅವರ ಜಾಗಕ್ಕೆ ಈಗ ಕಾವ್ಯಗೌಡ ಎನ್ನುವ ನಾಯಕಿ ಬಂದು ಕೂತಿದ್ದಾರೆ. ಅಷ್ಟಕ್ಕೂ, ಶ್ರೇಷ್ಠ ಉರುಫ್ ಗೌತಮಿಗೌಡ ಭಾಗ್ಯಲಕ್ಷ್ಮಿ ಧಾರವಾಹಿನಾ ಅರ್ಧಕ್ಕೆ ಬಿಟ್ಟೋಗೋದಕ್ಕೆ ಕಾರಣ ಏನು? ಈ ಪ್ರಶ್ನೆಗೆ ಅವರೇ ತಮ್ಮ ಸೋಷಿಯಲ್ ಬರೆದುಕೊಂಡಿದ್ದಾರೆ. ಅದನ್ನು ನಿಮ್ಮ ಮುಂದೆ ಇಡುತ್ತೇವೆ ಓದಿ.
ಎಲ್ಲರಿಗೂ ನಮಸ್ಕಾರ, ವೈಯಕ್ತಿಕ ಕಾರಣಗಳಿಂದ ಭಾಗ್ಯಲಕ್ಷ್ಮಿ ಇಂದ ಹೊರಬರಬೇಕಾಯಿತು. ಇಷ್ಟು ದಿನ ನೆಗಟೀವ್ ಪಾತ್ರದಲ್ಲೂ ನನ್ನ ಒಪ್ಪಿ ಹರಸಿದ ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳು. ತುಂಬಾ ಕಷ್ಟದ ನಿರ್ಧಾರ ಆದರೆ ಅನಿವಾರ್ಯ ಪರಿಸ್ಥಿತಿ, ಆದಷ್ಟು ಬೇಗ ನಿಮಗೆ ಹೇಳುತ್ತೇನೆ.. ನಗುನಗುತ್ತಾ ಧಾರವಾಹಿಯಿಂದ ಹೊರಬಂದಿದ್ದೇನೆ. ಬೇರೆ ಯಾವುದೇ ಕಾರಣ ಇಲ್ಲ. ಇನ್ನು ಮುಂದೆಯೂ ನಿಮ್ಮ ಪ್ರೀತಿ ಪ್ರೋತ್ಸಾಹ ಹೀಗೆ ಇರಲಿ ಎಂದು ಕೇಳಿಕೊಳ್ಳುತ್ತೇನೆ. ಇದಿಷ್ಟು ಗೌತಮಿ ಗೌಡ ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಬರೆದುಕೊಂಡಿರುವ ಮಾಹಿತಿಯಾದರೆ ಅದಕ್ಕೆ ಹಲವಾರು ಜನ ಹಲವು ರೀತಿ ಕಮೆಂಟ್ ಮಾಡಿದ್ದಾರೆ.
ಹೌದು, ಶ್ರೇಷ್ಟ ಬಿಟ್ಟೋಗ್ಬೇಡ ಶ್ರೇಷ್ಟ, ಅರ್ಧಕ್ಕೆ ಕೈ ಕೊಡಬೇಡ ಶ್ರೇಷ್ಠ. ನಿನ್ನ ಜಾಗದಲ್ಲಿ ಬೇರೆಯವರನ್ನ ಕಲ್ಪಿಸಿಕೊಳ್ಳೋದಕ್ಕೂ ಕಷ್ಟ ಆಗುತ್ತೆ ಶ್ರೇಷ್ಠ. ಪ್ಲೀಸ್ ಅರ್ಥ ಮಾಡ್ಕೊ ಶ್ರೇಷ್ಠ, ನಿನ್ನ ನಿರ್ಧಾರ ಬದಲಾಯಿಸಿಕೊ ಶ್ರೇಷ್ಟ ಹೀಗೆ ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಶ್ರೇಷ್ಟ ಕ್ಯಾರೆಕ್ಟರ್ನ ಇಷ್ಟ ಪಡುತ್ತಿದ್ದ ವೀಕ್ಷಕರು ಟ್ವೀಟ್ ಮೂಲಕ ಪರಿಪರಿಯಾಗಿ ಕೇಳಿಕೊಂಡಿದ್ದಾರೆ. ನೀವಿದ್ದಾಗ ಆ ಪಾತ್ರಕ್ಕೆ ಒಂದು ತೂಕ ಇತ್ತು ಮೇಡ. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಮೇಡಂ ಅಂತೆಲ್ಲಾ ಕಮೆಂಟ್ ಮಾಡ್ತಿದ್ದಾರೆ. ಆದಷ್ಟು ಬೇಗ ಒಳ್ಳೆ ಪಾತ್ರದ ಮೂಲಕ ಕಂಬ್ಯಾಕ್ ಮಾಡಿ. ನಿಮ್ಮ ಅಭಿನಯಕ್ಕಾಗಿ ನಾವೆಲ್ಲರೂ ಕಾತುರದಿಂದ ಕಾಯುತ್ತಿದ್ದೇವೆ ಅಂತೆಲ್ಲಾ ಟ್ವೀಟ್ ಮಾಡುತ್ತಿದ್ದಾರೆ
ಸದ್ಯಕ್ಕೆ ಶ್ರೇಷ್ಠ ಉರುಫ್ ಗೌತಮಿ ಗೌಡ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ ಅನ್ನೋದು ಗೊತ್ತಾಗಿಲ್ಲ. ಏಪ್ರಿಲ್ 03ರಂದು ಟ್ವೀಟ್ ಮಾಡಿದ್ದು ಬಿಟ್ರೆ ಬೇರಾವುದರ ಬಗ್ಗೆಯೂ ಗೌತಮಿ ಅಪ್ಡೇಟ್ ನೀಡಿಲ್ಲ. ಹಿಂದೊಮ್ಮೆ ಚಿ ಸೌ ಸಾವಿತ್ರ ಸೀರಿಯಲ್ ನಂತರ ಬ್ರೇಕ್ ತೆಗೆದುಕೊಂಡಿದ್ದ ಹಾಗೇ ಈ ಭಾರಿಯೂ ಸಣ್ಣದೊಂದು ವಿರಾಮ ಪಡೆದರಾ? ಫ್ಯಾಮಿಲಿ ಜೊತೆ ಟೈಮ್ಸ್ಪೆಂಡ್ ಮಾಡಲು ಮಲೇಷಿಯಾಗೆ ಹಾರಿದರಾ? ಈ ಕುತೂಹಲದ ಪ್ರಶ್ನೆಗೆ ಖುದ್ದು ಗೌತಮಿಯೇ ಉತ್ತರ ಕೊಡಬೇಕು.
ಅಂದ್ಹಾಗೇ, ಗೌತಮಿ ಬರೀ ಕಿರುತೆರೆಯಲ್ಲಿ ಮಾತ್ರ ಗುರ್ತಿಸಿಕೊಂಡಿಲ್ಲ. ಬೆಳ್ಳಿತೆರೆಯಲ್ಲೂ ಕಮಾಲ್ ಮಾಡಿದ್ದಾರೆ. ತಾಯ್ಯವ್ವ, ಚೆಲುವಿ, ಚಲಿಸುವ ಮೋಡಗಳು, ಅಮ್ಮ ನಿನಗಾಗಿ, ಮುತ್ತಿನ ಪಲ್ಲಕ್ಕಿ, ಮಳೆ ಸೇರಿದಂತೆ ಹಲವು ಧಾರವಾಹಿಗಳಲ್ಲಿ ಮಿಂಚಿದ್ದಾರೆ.
ಗುರು, ಕೋಟಿಗೊಬ್ಬ-2. ಅಂಬಿ ನಿಂಗೆ ವಯಸ್ಸಾಯ್ತೋ, ಪೂರ್ಣಸತ್ಯ, ಶಾದಿಭಾಗ್ಯ ಸೇರಿದಂತೆ ಒಂದಿಷ್ಟು ಸಿನಿಮಾಗಳಲ್ಲೂ ಅಭಿನಯಿಸಿ ಹೆಸರು ಮಾಡಿದ್ದಾರೆ. ಕುಣಿಯೋಣು ಬಾ, ಡ್ಯಾನ್ಸಿಂಗ್ ಸ್ಟಾರ್, ಯಾರಿಗುಂಟು ಯಾರಿಗಿಲ್ಲ ಹೀಗೆ ರಿಯಾಲಿಟಿ ಶೋಗಳಲ್ಲಿ ಮಿಂಚಿ ಪ್ರಖ್ಯಾತಿ ಗಳಿಸಿದ್ದಾರೆ. ಬಿಗ್ಬಾಸ್ ಮನೆಗೂ ಹೋಗಿಬಂದು ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಮೂಲತಃ ಇಂಜಿನಿಯರ್ ಆಗಿದ್ದ ಗೌತಮಿ, ಬಣ್ಣದ ಲೋಕ ಕೈ ಬೀಸಿ ಕರೆದಿದ್ದರಿಂದ, ಭರತನಾಟ್ಯದಲ್ಲಿ ಪ್ರವೀಣೆಯೂ ಆಗಿದ್ದರಿಂದ ಸ್ಮಾಲ್ ಸ್ಕ್ರೀನ್ ಹಾಗೂ ಬಿಗ್ ಸ್ಕ್ರೀನ್ ಎರಡಲ್ಲೂ ಶೈನ್ ಆಗಿ ಅಭಿಮಾನಿಗಳನ್ನ ಸಂಪಾದನೆ ಮಾಡಿದ್ದಾರೆ.