ಕಾಂತಾರ…ಸಧ್ಯ ಎಲ್ಲೆಲ್ಲೂ ಸದ್ದು ಮಾಡಿ ಅಂತೆಯೇ ಹಿಟ್ ಆಗಿರುವ ಚಿತ್ರ. ಸ್ಯಾಂಡಲ್ ವುಡ್ ಮಾತ್ರವಲ್ಲದೇ ಇತರ ಭಾಷೆಯವರೂ ನೋಡಿ ಮೆಚ್ಚಿದ ತುಳು ನಾಡಿನ ದೈವಾರಾಧನೆಯ ಕುರಿತ ಕಾಂತಾರ ಚಿತ್ರದ ಸ್ವೀಕ್ವೆಲ್ ಗಳು ಬರಲು ತಯಾರಿ ನಡೆಸಿರುವ ಚಿತ್ರತಂಡಕ್ಕೆ ಕಾಂತಾರ-2 ಚಿತ್ರ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಹೌದು ಕಾಂತಾರ ಚಿತ್ರದ ಯಶಸ್ಸು ರಿಷಭ್ ಶೆಟ್ಟಿ ಅವರನ್ನು ದೇಶದ ಜನಪ್ರಿಯ ನಿರ್ದೇಶಕರ ಪಟ್ಟಿಯಲ್ಲಿ ನಿಲ್ಲಿಸಿದೆ. ಆದರೆ, ಭಾನುವಾರ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯವಾದ ಬೆನ್ನಲ್ಲಿಯೇ, ಕರಾವಳಿ ಕನ್ನಡಿಗರು ಹಾಗೂ ತುಳುವರು ರಿಷಭ್ ಶೆಟ್ಟಿಗೆ ಪ್ಲೀಸ್ ಕಾಂತಾರ-2 ಚಿತ್ರ ಮಾಡಬೇಡಿ ಎಂದು ಸೋಶಿಯಲ್ ಮೀಡಿಯಾ ಮೂಲಕ ಮನವಿ ಮಾಡಿದ್ದಾರೆ. ಅದಕ್ಕೆ ಕಾರಣವಿದೆ.ಕಾಂತಾರ ಬಿಡುಗಡೆಯಾದ ಸಂದರ್ಭದಲ್ಲಿ ಹಲವೆಡೆ ದೈವನರ್ತಕರು ಮಾತ್ರವೇ ಧರಿಸುವಂಥ ವಸ್ತ್ರಗಳನ್ನು ಧರಿಸಿಕೊಂಡು, ಅವರಂತೆಯೇ ನಟಿಸಲು ಪ್ರಯತ್ನ ಮಾಡಿದ ಘಟನೆಗಳು ನಡೆದಿದ್ದವು.ಇದ್ರಿಂದ ಈ ದೈವಾರಾಧನೆಯನ್ನ ನಂಬಿ ಬದುಕುತ್ತಿದ್ದ ಕರಾವಳಿ ಕರ್ನಾಟಕ ಹಾಗೂ ದಕ್ಷಿಣ ಕನ್ನಡ ಭಾಗದ ಜನರ ನಂಬಿಕೆಗಳಿಗೆ ಅವಮಾನ ವಾದಂತಾಗಿತ್ತು. ಆಗ ತಿಷಬ್ ಮತ್ತು ತಂಡ ಹಾಗು ಹಲವರು ತಿದ್ದಿ ಬುದ್ದಿ ಹೇಳಿದ್ದರು. ಹೀಗೆ ಅನುಕರಣೆ ಮಾಡದಂತೆ ಮನವಿಮಾಡಿದ್ದರು.ಆದ್ರೆ ಮತ್ತದೇ ತಪ್ಪು ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಅಭಿಮಾನಿಯೊಬ್ಬ ಮಾಡಿ ದೊಡ್ಡ ಚರ್ಚೆಯಲ್ಲಿದ್ದಾನೆ.
ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಅಭಿಮಾನಿಯೊಬ್ಬ ಕಾಂತಾರ ಚಿತ್ರದಲ್ಲಿ ರಿಷಭ್ ಶೆಟ್ಟಿಯ ದೈವನರ್ತಕನ ಪಾತ್ರದ ರೀತಿ ವಸ್ತ್ರ ಧರಿಸಿ ಬಂದಿದ್ದ. ಇದನ್ನು ಸ್ವತಃ ಆರ್‌ಸಿಬಿ ಟೀಮ್ ಕೂಡ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಪ್ರಕಟ ಮಾಡಿತ್ತು. ಇದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ದುರ್ಗಾದಾಸ್ ರಾಮದಾಸ್ ಕಟೀಲ್ ಎನ್ನುವವರು, ಇಂಥ ಚಿತ್ರಗಳನ್ನು ನೋಡೋದಕ್ಕೆ ಬಹಳ ಬೇಸರವಾಗುತ್ತದೆ ಎಂದಿದ್ದಾರೆ.ನಾವು ತುಳುವರು ಈ ಸಂಪ್ರದಾಯವನ್ನು ಗೌರವದಿಂದ ಪರಿಗಣಿಸುತ್ತೇವೆ’ ಎಂದು ದುರ್ಗಾದಾಸ್ ಕಟೀಲ್ ಬರೆದುಕೊಂಡಿದ್ದಾರೆ.
ಹಾಗೇಯೆ . ‘ಕಾಂತಾರದ ಯಾವುದೇ ಪ್ರೀಕ್ವೆಲ್ ಅಥವಾ ಸೀಕ್ವೆಲ್‌ಅನ್ನು ಮಾಡಬೇಡಿ ಎಂದು ನಿಮ್ಮನ್ನು ವಿನಂತಿಸುತ್ತೇನೆ … ಇಲ್ಲದಿದ್ದರೆ ಈ ಪವಿತ್ರ ಸಂಪ್ರದಾಯವು ಪ್ರಪಂಚದ ಮುಂದೆ ತಮಾಷೆಯಾಗಿ ಕೊನೆಗೊಳ್ಳುತ್ತದೆ’ ಎಂದು ರಿಷಬ್ ಶೆಟ್ಟಿಗೆ ಟ್ಯಾಗ್ ಮಾಡಿ ಸುದೀಪ್ ಶೆಟ್ಟಿ ಮತ್ತು ಪವನಜ ಶೆಟ್ಟಿ ಎನ್ನುವವರು ಟ್ವೀಟ್ ಮಾಡಿದ್ದಾರೆ.
ಇನ್ನೂ ಕೆಲವರು ರಿಷಭ್ ಶೆಟ್ಟಿಯವರೆ ನೀವು ಕಾಂತಾರದ 2ನೇ ಭಾಗದ ಚಿತ್ರವನ್ನು ಮಾಡೋದು ಬೇಡ ಇದು ನಮ್ಮ ಕಳಕಳಿಯ ಮನವಿ ಎಂದು ಬರೆದುಕೊಂಡಿದ್ದಾರೆ.
‘ಭೂತಕೋಲಕ್ಕೆ ಸಂಬಂಧಿಸಿದ ಅಂಶಗಳನ್ನು ಮನರಂಜನೆಗಾಗಿ ಬಳಸಬೇಡಿ ಎಂದು ಬಲವಾಗಿ ಜನರನ್ನು ಒತ್ತಾಯಿಸಿ….ಇದು ಕಾಂತಾರರಿಂದ ಪ್ರಾರಂಭವಾಗಿದೆ. ಇದನ್ನು ಜನರಿಗೆ ನೀವೇ ಹೇಳಬೇಕು’ ಎಂದು ರಿಷಭ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂ ಅವರನ್ನು ಟ್ಯಾಗ್ ಮಾಡಿ ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
‘ದೈವಾರಾಧನೆ ಎಲ್ಲಿಬೇಕಾದ್ರೆ ಅಲ್ಲಿ ಬಳಸಬಹುದಾದ ಜಾನಪದ ನೃತ್ಯವಲ್ಲ. ಇದು ತನ್ನದೇ ಆದ ಶ್ರೀಮಂತ ಸಂಪ್ರದಾಯವನ್ನು ಹೊಂದಿದೆ. ಮತ್ತು ಇದು ಧಾರ್ವಿುಕ ಆಚರಣೆಗಳೊಂದಿಗೆ ಸಂಪರ್ಕ ಹೊಂದಿದೆ. ದಯವಿಟ್ಟು ಆರಾಧನೆಯನ್ನು ಅಗೌರವಗೊಳಿಸಬೇಡಿ’ ಎಂದು ಕರಾವಳಿ ಭಾಗದ ಇನ್ನೊಬ್ಬರು ಬರೆದಿದ್ದಾರೆ. ‘.
ಕೆಲವರು ಈ ಟ್ವೀಟ್ ಗೆ ಪ್ರತ್ಯುತ್ತರ ನೀಡಿದ್ರೆ,ಕೆಲವರು ಕಾಮೆಂಟ್ ನಲ್ಲೇ ಸಮರ್ಥಿದಿಕೊಂಡಿದ್ದಾರೆ.
ಈ ಚಿತ್ರ ಯಶಸ್ಸು ಮಾಡಿದವರು ನೀವೇ ಅಲ್ಲವೇ? ಆದರೆ, ಇಷ್ಟು ದೈವೀ ರೂಪದ ವಿಚಾರವಾಗಿದ್ದರೆ ಅದನ್ನು ಸಿನಿಮಾ ಮಾಡಲು ಬಿಟ್ಟಿದ್ದೇಕೆ’ ಎಂದು ಗಣೇಶ್ ಎನ್ನುವವರು ಹಾಗು ‘ಅಣ್ಣಾ ನಿನ್ನ ಈ ಪ್ರಶ್ನೆಗೆ ಖಂಡಿತವಾಗಿ ಉತ್ತರ ಪಡೆದುಕೊಳ್ಳುತ್ತೀರಿ. ಕೊರಗಜ್ಜ ದೇವಸ್ಥಾನದಲ್ಲಿ ಚೇಷ್ಟೆ ಮಾಡಿದವರು ಅನುಭವಿಸಿದಂತೆಯೇ ನೀನು ಪಾಠ ಕಲಿಯುತ್ತೀಯ’ ಎಂದು ಟ್ವೀಟ್ ಮಾಡಿದ್ದಾರೆ. ಒಟ್ನಲ್ಲಿ ದೇಶ ವಿದೇಶಗಳಲ್ಲಿ ಸುದ್ದಿಯಾಗಿ ಸೂಪರ್ ಹಿಟ್ ಆಗಿದ್ದ ಕಾಂತಾರದ ಬಗ್ಗೆ ಹಾಗು ಅದರ ಸೀಕ್ವೇಲ್ – ಪ್ರೀಕ್ವೆಲ್ ಮತ್ತು ದೈವಾರಾಧನೆ ಎಸಗುತ್ತಿರುವ ಅವಮಾನದ ನಗ್ಗೆ ಹಾಟ್ ಹಾಟ್ ಚರ್ಚೆಗಳು ನಡೀತಿರೋದಂತು ನಿಜ.