ಬುಧವಾರ, ಜುಲೈ 2, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಜಿಯೋ ಸ್ಟೂಡಿಯೋಸ್ ಕನ್ನಡ ವಿಭಾಗದ ಹೊಣೆಗಾರಿಕೆ ಪರಮ್ ಪಾಲಿಗೆ..!

Vishalakshi Pby Vishalakshi P
04/04/2023
in Majja Special
Reading Time: 1 min read
ಜಿಯೋ ಸ್ಟೂಡಿಯೋಸ್ ಕನ್ನಡ ವಿಭಾಗದ ಹೊಣೆಗಾರಿಕೆ ಪರಮ್ ಪಾಲಿಗೆ..!

The responsibility of Jio Studios Kannada department is for the utmost..!

ಕನ್ನಡ ಕಿರುತೆರೆ ಜಗತ್ತಿನಲ್ಲಿ ವಿಭಿನ್ನ ಪ್ರಯೋಗಗಳ ಮೂಲಕ ಸಂಚಲನ ಸೃಷ್ಟಿ ಸಿರುವ ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥ ಪರಮ್ ಗುಂಡ್ಕಲ್ ಅವರು ವಾಹಿನಿಗೆ ರಾಜೀನಾಮೆ ಕೊಡ್ಟಿರುವುದು ಗೊತ್ತಿರೋ ವಿಚಾರ. ಈ ಸಂಗತಿಯನ್ನ ಅವರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದರು. ಈವರೆಗೂ ಸಾಕಷ್ಟು ಹಿಟ್ ರಿಯಾಲಿಟಿ ಶೋ,ಮನರಂಜನಾ ಕಾರ್ಯಕ್ರಮಗಳು,ದಾರಾವಾಹಿಗಳನ್ನ ನೀಡಿ ಕಿರುತೆರೆ ಪ್ರೇಕ್ಷಕರ ಫೇವರೀಟ್ ಆಗಿದ್ದ ಕಲರ್ಸ್ ಕನ್ನಡ ವಾಹಿನಿಗೆ ಮುಂದ್ಯಾರು ಜವಾಬ್ದಾರಿ? ಅದರ್ಲಿ ಪರಮ್ ಈ ಸ್ಥಾನ ಬಿಟ್ಟುಕೊಟ್ಟ ನಂತ್ರ ಮುಂದೇನು ಮಾಡ್ತಾರೆ ಅನ್ನೂ ಕ್ಯೂ ರಿಯಾ ಸಿಟಿ ಬಹಳಷ್ಟಿತ್ತು. ಆದ್ರೆ ಅದಕ್ಕೀಗ ಉತ್ತರ ಸಿಕ್ಕಿದೆ.

ಹೌದು ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರಾಗಿದ್ದ ಪರಮ್, ವಾಹಿನಿಯ ಕೆಲಸಕ್ಕೆ ರಾಜೀನಾಮೆ ನೀಡಿದ್ದರೂ ಅದೇ ಮಾತೃಸಂಸ್ಥೆಯ ಮತ್ತೊಂದು ವಿಭಾಗಕ್ಕೆ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ. ಇಂದಿನಿಂದ ಜಿಯೋ ಸ್ಟುಡಿಯೋಸ್ ನ ಕನ್ನಡ ಬ್ಯುಸಿನೆಸ್ ಹೆಡ್ ಆಗಿ ಕೆಲಸ ಆರಂಭಿಸಿದ್ದು, ಮತ್ತೆದೇ ಹೊಸ ಹುರುಪು, ಹೊಸ ಕನಸುಗಳೊಂದಿಗೆ ಈ ಜವಾಬ್ದಾರಿಯನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿರುವಾಗಲೇ ಸಿನಿಮಾ ನಿರ್ಮಾಣ ಮತ್ತು ನಿರ್ದೇಶನದ ಕನಸು ಕಂಡಿದ್ದ ಪರಮ್ ಹೊಸ ಹೊಸ ಯೋಜನೆ ಹಾಕೋದ್ರಲ್ಲಿ ನಿಸ್ಸೀಮರು. ಕನ್ನಡ ಕೋಟ್ಯಧಿಪತಿ, ಬಿಗ್ ಬಾಸ್ ಸೇರಿದಂತೆ ಹಲವು ಕಾರ್ಯಕ್ರಮಗಳ ಹಿಂದೆಯೂ ಮುಖ್ಯವಾಗಿ ನಿಂತಿದ್ದ,ಅತ್ಯುತ್ತಮ ಬರಹಗಾರ ಮತ್ತು ಕನಸುಗಾರ ಪರಮ್ ಅವರ ಈ ಕ್ರೀಯಾಶಿಲತೆಯನ್ನ ಪ್ರತ್ಯಕ್ಷವಾಗಿ ನೋಡಿದ್ದರಿಂದಲೇ ವಯಾಕಾಮ್ 18 ಮುಖ್ಯಸ್ಥರು ಪರಮ್ ಅವರಿಗೆ ಈ ನೂತನ ಜವಬ್ದಾರಿ ನೀಡಿದ್ದಾರೆ ಎನ್ನುವುದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ. ಈ ಮೂಲಕ ಜಿಯೋ ಸ್ಟುಡಿಯೋಸ್ ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ಮತ್ತೊಂದು ಹೊಸ ದಿಕ್ಕು ತೋರುವ ಯೋಜನೆಯನ್ನೂ ಅವರು ಸಿದ್ಧ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದೇ ಮೊದಲ ಬಾರಿಗೆ ಜಿಯೋ ಸ್ಟುಡಿಯೋಸ್‍ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುತ್ತಿದ್ದು ಸಿನಿಮಾ ನಿರ್ಮಾಣ, ವೆಬ್ ಸಿರೀಸ್ ತಯಾರಿಕೆ ಸೇರಿದಂತೆ ಮನರಂಜನೆಯ ನಾನಾ ಮಜಲುಗಳಲ್ಲಿ ಅದು ಕೆಲಸ ಮಾಡಲಿದೆಯಂತೆ. ಈ ನೂತನ ಪ್ರಯತ್ನಕ್ಕೆ ಪರಮ್ ಬ್ಯುಸಿನೆಸ್ ಹೆಡ್ ಆಗಿ ಕಾರ್ಯ ನಿರ್ವಹಿಸ್ತಿದ್ದಾರೆ ಅನ್ನೋ ಸುದ್ದಿಗಳು ಹರಿದಸಡುತ್ತಿದ್ದಂತೆಯೇ ಜಿಯೋ ಸ್ಟೂಡಿಯೋ ಮೂಲಕ ವಿಭಿನ್ನ ಪ್ರಯೋಗಗಳು ನಡೆಯುವುದನ್ನ ಕಣ್ತುಂಬಿಕೊಳ್ಳಲು ಕಾತುರಾಗಿದ್ದಾರೆ ಪ್ರೇಕ್ಷಕ ವರ್ಗ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಅರ್ಜನ್ ಜನ್ಯ ಚೊಚ್ಚಲ ನಿರ್ದೇಶನದ ‘45’ ಗೆ ನಾಯಕಿ ಫಿಕ್ಸ್…

ಅರ್ಜನ್ ಜನ್ಯ ಚೊಚ್ಚಲ ನಿರ್ದೇಶನದ ‘45’ ಗೆ ನಾಯಕಿ ಫಿಕ್ಸ್…

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.