Aarya: ಆರ್ಯ(Arya)…ಈ ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ. ಸಿನಿಮಾ ತೆಲುಗಿನಲ್ಲಿ ತೆರೆಕಂಡಿರಬಹುದು ಆದ್ರೆ ಆಂಧ್ರ ಗಡಿ ದಾಟಿ ಮ್ಯಾಜಿಕ್ ಕ್ರಿಯೇಟ್ ಮಾಡಿತ್ತು. ಪ್ರತಿ ಚಿತ್ರರಂಗದ ಸಿನಿರಸಿಕರನ್ನು, ಯುವ ಪೀಳಿಗೆಯನ್ನು ತನ್ನತ್ತ ಸೆಳೆದುಕೊಂಡ ಸಿನಿಮಾ. ಈಗ್ಯಾಕೆ ಈ ಸಿನಿಮಾ ಬಗ್ಗೆ ಮಾತು ಅಂದ್ಕೋಬೇಡಿ. ಇದಕ್ಕೆ ಕಾರಣ ಸಿನಿಮಾ ತೆರೆಕಂಡು ಎರಡು ದಶಕ.
ಆರ್ಯ(Aarya).. 2004 ಮೇ 7ರಂದು ತೆರೆಕಂಡ ಸಿನಿಮಾ. ಅಂದರೆ ಇವತ್ತಿಗೆ ಸರಿಯಾಗಿ ಈ ಸಿನಿಮಾ ತೆರೆಕಂಡು ಬರೋಬ್ಬರಿ 20 ವರ್ಷ. ಈಗಲೂ ಸಿನಿಪ್ರಿಯರ ಮನದಲ್ಲಿ ಹಚ್ಚ ಹಸಿರಾಗಿರುವ, ಎಲ್ಲರ ಫೇವರೇಟ್ ಲಿಸ್ಟ್‌ನಲ್ಲಿರುವ ಸಿನಿಮಾ̤ ಫ್ರೆಶ್ ಕಥೆ, ಪ್ರತಿ ಫ್ರೇಮ್‌ನಲ್ಲಿದ್ದ ಫ್ರೆಶ್‌ನೆಸ್, ಕ್ರಿಯೇಟಿವಿಟಿ, ಅಲ್ಲು ಅರ್ಜುನ್ ಚಾರ್ಮ್, ಸುಕುಮಾರ್ ಹೆಣೆದ ನವಿರಾದ ಪ್ರೇಮ್ ಕಹಾನಿ, ಒಂದಕ್ಕಿಂತ ಒಂದು ಸೂಪರ್ ಎನಿಸೋ ಹಾಡುಗಳು, ಅಬ್ಬಬ್ಬಾ ಒಂದಾ, ಎರಡಾ, ಹೇಳ್ತಾ ಹೋದ್ರೆ ಮುಗಿಯೋದಿಲ್ಲ. ಯೂತ್ಸ್ ಪಲ್ಸ್ ಸೆಳೆದ, ಮತ್ತೆ, ಮಗದೊಮ್ಮೆ ನೋಡುವಂತೆ ಮ್ಯಾಜಿಕ್ ಕ್ರಿಯೇಟ್ ಮಾಡಿದ ಸಿನಿಮಾ ಆರ್ಯ.
ಆರ್ಯ(Aarya) ತೆರೆಕಂಡು ಇಪ್ಪತ್ತು ವರ್ಷ ಕಳೆದಿದೆ, ಇದೇ ಸಂಭ್ರಮದಲ್ಲಿ ನಟ ಅಲ್ಲು ಅರ್ಜುನ್ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಇದು ಕೇವಲ ಸಿನಿಮಾ ಮಾತ್ರವಲ್ಲ. ನನ್ನ ವೃತ್ತಿ ಜೀವನದ ದಿಕ್ಕನ್ನೇ ಬದಲಿಸಿದ ಸಿನಿಮಾ ಎಂದಿದ್ದಾರೆ. ಈ ಚಿತ್ರಕ್ಕೆ ಎಂದೆಂದಿಗೂ ಕೃತಘ್ಞನಾಗಿರುವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಸುಕುಮಾರ್ ಚೊಚ್ಚಲ ನಿರ್ದೇಶನದ ಸಿನಿಮಾವಿದು. ಅಲ್ಲು ಅರ್ಜುನ್(Allu Arjun) ಆರ್ಯನಾಗಿ ಮೋಡಿ ಮಾಡಿದ್ರು. ಗಂಗೋತ್ರಿ ಸಿನಿಮಾ ನಂತರ ಅಲ್ಲು ವೃತ್ತಿ ಜೀವನದ ಎರಡನೇ ಸಿನಿಮಾವಿದು. ಬಿಗ್ ಬ್ರೇಕ್‌ಗಾಗಿ ಕಾದಿದ್ದ ಅಲ್ಲು ಅರವಿಂದ್ ಪುತ್ರನಿಗೆ ‘ಆರ್ಯ’(Aarya) ಹೇಳಿ ಮಾಡಿಸಿದಂತ್ತಿತ್ತು. ಲವರ್ ಬಾಯ್ ಆಗಿ ಅಲ್ಲು ಅರ್ಜುನ್ ಅಕ್ಷರಶಃ ಮ್ಯಾಜಿಕ್ ಕ್ರಿಯೇಟ್ ಮಾಡಿದ್ರು, ಎಲ್ಲರೂ ಫಿದಾ ಆದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿತ್ತು. ತೆಲುಗು ಚಿತ್ರರಂಗದಲ್ಲಿ ವಿಶೇಷ ಸ್ಥಾನ ಪಡೆದಿತ್ತು.
ಆರ್ಯ ಅಲ್ಲು ಅರ್ಜುನ್(Allu Arjun) ಸಿನಿ ಕೆರಿಯರ್‌ಗೆ ಬಿಗ್ಗೆಸ್ಟ್ ಬ್ರೇಕ್ ನೀಡಿತ್ತು. ಅಲ್ಲಿಂದೀಚೆ ಪುಷ್ಪರಾಜ್ ತಿರುಗಿ ನೋಡಿದ್ದಿಲ್ಲ. ತೆಲುಗು ಸಿನಿರಂಗದಲ್ಲಿ ತನ್ನದೇ ಸಿಗ್ನೇಚರ್ ಸ್ಟೈಲ್ ಸೃಷ್ಟಿಸಿಕೊಂಡಿರುವ ಅಲ್ಲು ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಸುಕುಮಾರ್ ಹಾಗೂ ಅಲ್ಲು ಅರ್ಜುನ್ ಬಾಂಡಿಂಗ್ ಕೂಡ ಮುಂದುವರೆದಿದೆ. ಆರ್ಯ2 ನಲ್ಲೂ ಜೊತೆಯಾದ ಈ ಜೋಡಿ ಪುಷ್ಪ(Pushpa) ಸಿನಿಮಾ ಮೂಲಕ್ ವರ್ಲ್ಡ್ ವೈಡ್ ಮ್ಯಾಜಿಕ್ ಕ್ರಿಯೇಟ್ ಮಾಡ್ತಿದ್ದಾರೆ.