SouthMovies: ಸೌತ್ ಸಿನಿ ದುನಿಯಾದಲ್ಲಿ ಸಾಲು ಸಾಲು ಸ್ಟಾರ್ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಆದರೆ ಈ ಬಾರಿ ಲೋಕಸಭೆ ಚುನಾವಣೆ ಇರುವುದರಿಂದ ಬೇಸಿಗೆ ರಜೆಯಲ್ಲಿ ಸಿನಿಮಾ ನೋಡುವ ಆಸೆ ಕೈ ಬಿಡಬೇಕಿದೆ. ಆದರೆ ಈ ಬಾರಿಯ ಮುಂಗಾರಿನಿಂದ ಸಿನಿಮಾದೋಕುಳಿಯಲ್ಲಿ ಮಿಂದೇಳಬಹುದು.
ಚುನಾವಣೆ ಪ್ರಯುಕ್ತ ಏಪ್ರಿಲ್, ಮೇನಲ್ಲಿ ಬಿಡುಗಡೆಯಾಗಬೇಕಿದ್ದ ಸೂಪರ್ ಸ್ಟಾರ್ ಸಿನಿಮಾಗಳು ಜೂನ್, ಜುಲೈನಲ್ಲಿ ಬಿಡುಗಡೆಯಾಗುತ್ತಿವೆ. ಈ ಬಾರಿ ಸೌತ್ ಸಿನಿ ದುನಿಯಾದ ದಿಗ್ಗಜ ನಟರ ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದ್ದು, ಬಿಡುಗಡೆ ದಿನಾಂಕವನ್ನು ಫೈನಲ್ ಮಾಡಿವೆ. ಬಿಟೌನ್ನಲ್ಲೂ ಹೇಳಿಕೊಳ್ಳೋ ಸಿನಿಮಾಗಳಿಲ್ಲ ಆದ್ರಿಂದ ಈ ಬಾರಿ ಬಾಕ್ಸ್ ಆಫೀಸ್ನಲ್ಲಿ ಸೌತ್ ಸೂಪರ್ ಸ್ಟಾರ್ಗಳದ್ದೇ ದರ್ಬಾರ್.
ಪ್ರಭಾಸ್ ಅಭಿನಯದ ಕಲ್ಕಿ(Kalki), ಚಿಯಾನ್ ವಿಕ್ರಮ್ ‘ತಂಗಳನ್’(Thangaalan) ಸಿನಿಮಾ ಮೇ ನಲ್ಲಿ ತೆರೆ ಕಾಣಲಿದೆ ಎಂದು ಹೇಳಲಾಗ್ತಿದೆ. ಆದ್ರೆ ಎಲೆಕ್ಷನ್ ಬಿಸಿ ಮೇ ಎಂಡ್ವರೆಗೂ ಇರುವುದರಿಂದ ಬಿಡುಗಡೆ ಮುಂದೂಡುವ ಸಾಧ್ಯತೆ ಹೆಚ್ಚು. ಕಮಲ್ ಹಾಸನ್ ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ ‘ಇಂಡಿಯನ್2’(Indian-2) ಹಾಗೂ ಮಮ್ಮುಟ್ಟಿ ಅಭಿನಯದ ‘ಟರ್ಬೋ’ ಜೂನ್ ನಲ್ಲಿ ತೆರೆ ಕಾಣುತ್ತಿದೆ. ಜುಲೈನಲ್ಲಿ ದುಲ್ಕರ್ ಸಲ್ಮಾನ್ ಅಭಿನಯದ ‘ಲಕ್ಕಿ ಭಾಸ್ಕರ್’(Lucky Bhaskar) ತೆರೆಕಂಡ್ರೆ ಆಗಸ್ಟ್ನಲ್ಲಿ ‘ಪುಷ್ಪ-2’(Pushpa2) ಹಾಗೂ ಶಿವಣ್ಣ ಅಭಿನಯದ ‘ಬೈರತಿ ರಣಗಲ್’ ತೆರೆ ಕಾಣುತ್ತಿದೆ.
ಸೆಪ್ಟೆಂಬರ್ ನಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ‘ಓಜಿ’(OG) ಹಾಗೂ ವಿಜಯ್ ‘ಗೋಟ್’(GOAT) ಬಿಡುಗಡೆಯಾಗುತ್ತಿದೆ. ಅಕ್ಟೋಬರ್ ತಿಂಗಳು ಜೂ.ಎನ್ಟಿಆರ್, ರಜನೀಕಾಂತ್, ದರ್ಶನ್, ಅಜಿತ್, ರಾಮ್ ಚರಣ್ ಪಾಲಾಗಿದ್ದು, ಕ್ರಮವಾಗಿ ‘ದೇವರ’(Devara), ‘ವೆಟ್ಟೈಯನ್’(Vettaiyan), ‘ಡೆವಿಲ್’(Devil), ́ವಿದಾಮುಯರ್ಚಿ(Vidaamuyarchi), ‘ಗೇಮ್ ಚೇಂಜರ್’(Game Chenger) ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಸೂರ್ಯ ಅಭಿನಯದ ‘ಕಂಗುವಾ’(Kanguva), ಬಾಲಯ್ಯ ನಟನೆಯ ಸಿನಿಮಾಗಳು ಡಿಸೆಂಬರ್ನಲ್ಲಿ ತೆರೆ ಕಾಣುತ್ತಿವೆ.