69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಇಂದು ದೆಹಲಿಯಲ್ಲಿ ಘೋಷಣೆ ಮಾಡಲಾಗಿದೆ. 2021ರಲ್ಲಿ ಬಿಡುಗಡೆ ಆದ ಅಥವಾ ಸೆನ್ಸಾರ್ ಆದ ಸಿನಿಮಾಗಳಲ್ಲಿ ಅತ್ಯುತ್ತಮವಾದ ಸಿನಿಮಾ, ನಟ-ನಟಿ ಹಾಗೂ ತಂತ್ರಜ್ಞರನ್ನು ಗುರುತಿಸಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಪ್ರಶಸ್ತಿ ಘೋಷಿಸಲಾಗಿದೆ. 2021ರಲ್ಲಿ ರಿಲೀಸ್ ಆದಂತಹ ಹಾಗೂ ಸೆನ್ಸಾರ್ ಆದಂತಹ ಸಿನಿಮಾಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ವು. ಪ್ರಾದೇಶಿಕ ಭಾಷೆಯ ಸಿನಿಮಾಗಳು ಮಾತ್ರವಲ್ಲದೇ ಆಲ್ ಓವರ್ ಇಂಡಿಯಾದ ಚಿತ್ರಗಳು `ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ’ ಕಣದಲ್ಲಿ ಸ್ಪರ್ಧೆಗಿಳಿದಿದ್ವು.
ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಕಣ್ಣು `ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ’ ಘೋಷಣೆಯತ್ತ ನೆಟ್ಟಿತ್ತು. ಆರ್ ಆರ್ ಆರ್ ಹಾಗೂ ಪುಷ್ಪ, ಜೈ ಭೀಮ್, ಕರ್ಣನ್, ಮಾನಾಡು, ಸರ್ಪಟ್ಟ ಪರಂಬರೈ, ನಾಯಟ್ಟು, ರಾಕೆಟ್ರಿ-ದಿ ನಂಬಿ ಎಫೆಕ್ಟ್ ಸೇರಿದಂತೆ ಹಲವು ಸೌತ್ ಸಿನಿಮಾಗಳು ಸ್ಪರ್ಧೆಯಲ್ಲಿದಿದ್ದರಿಂದ ದಕ್ಷಿಣ ಭಾರತೀಯ ಚಿತ್ರರಂಗ ಕಣ್ಣರಳಿ ಕಾದಿತ್ತು. ಫೈನಲೀ, 2021ರ ನ್ಯಾಷನಲ್ ಅವಾರ್ಡ್ ಪಟ್ಟಿ ಹೊರಬಿದ್ದಿದೆ. ಅತ್ಯುತ್ತಮ ನಟ ಪ್ರಶಸ್ತಿಗೆ ಅಲ್ಲು ಅರ್ಜುನ್ , ಅತ್ಯುತ್ತಮ ನಟಿ ಪ್ರಶಸ್ತಿಗೆ ಅಲಿಯಾ ಭಟ್ ಹಾಗೂ ಕೃತಿ ಸನಾನ್ ಪಾತ್ರರಾಗಿದ್ದಾರೆ. ಪುಷ್ಪ ಚಿತ್ರದ ಅಭಿನಯಕ್ಕಾಗಿ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್, ಗಂಗೂಬಾಯಿ ಕಾಠಿಯಾವಾಡಿ ಚಿತ್ರದ ನಟನೆಗಾಗಿ ಅಲಿಯಾ ಭಟ್ ಹಾಗೂ ಮಿಮಿ ಸಿನಿಮಾದ ಅಭಿನಯಕ್ಕಾಗಿ ನಟಿ ಕೃತಿ ಸನಾನ್ ನ್ಯಾಷನಲ್ ಅವಾರ್ಡ್‍ನ ಬಾಚಿಕೊಂಡಿದ್ದಾರೆ. 2021ನೇ ಸಾಲಿ ಅತ್ಯುತ್ತಮ ಸಿನಿಮಾ ಮಾಧವನ್ ನಟನೆಯ ‘ ರಾಕೆಟ್- ದಿ ನಂಬಿ ಎಫೆಕ್ಟ್’ ಚಿತ್ರಕ್ಕೆ ಸಂದಿದೆ.
ವಿಶೇಷ ಅಂದರೆ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪೈಕಿ ಕರ್ನಾಟಕಕ್ಕೆ ಒಟ್ಟು 4 ಪ್ರಶಸ್ತಿಗಳು ಲಭಿಸಿವೆ. ಅತ್ಯುತ್ತಮ ಪ್ರಾದೇಶಿಕ ಚಿತ್ರಕ್ಕಾಗಿ ಮೀಸಲಿಟ್ಟ ರಾಷ್ಟ್ರೀಯ ಪ್ರಶಸ್ತಿಯು ಈ ಬಾರಿ ರಕ್ಷಿತ್ ಶೆಟ್ಟಿ (Rakshit Shetty) ನಟನೆಯ, ಕಿರಣ್ ರಾಜ್ ನಿರ್ದೇಶನದ ಚಾರ್ಲಿ 777 (Charlie 777) ಚಿತ್ರಕ್ಕೆ ದೊರೆತಿದೆ. ನಾನ್ ಫೀಚರ್ ಫಿಲ್ಮ್ ವಿಭಾಗದಲ್ಲಿ ಕನ್ನಡದ ಅನಿರುದ್ಧ ಜತ್ಕರ್ ನಿರ್ದೇಶನದ ಬಾಳೆ ಬಂಗಾರ (Bale bangara ) ಪ್ರಶಸ್ತಿ ಪಡೆದಿದೆ.
ಸಿನಿಮಾ ಪತ್ರಕರ್ತರಿಗೆ ನೀಡುವ ‘ಅತ್ಯುತ್ತಮ ಸಿನಿಮಾ ವಿಮರ್ಶಕ (ಸ್ಪೆಷಲ್ ಮೆನ್ಷನ್ ಕ್ರಿಟಿಕ್) ಪ್ರಶಸ್ತಿಯು ಕನ್ನಡದ ಚಲನಚಿತ್ರ ಪತ್ರಕರ್ತರ ಪಾಲಾಗಿದೆ. ಹಿರಿಯ ಸಿನಿಮಾ ಪತ್ರಕರ್ತ ಸುಬ್ರಮಣ್ಯ ಬಾಡೂರು (Subramanya Badoor) ಅವರಿಗೆ ದೊರೆತಿದೆ. ಕನ್ನಡ ಸಿನಿಮಾ ರಂಗಕ್ಕೆ ಬಾ.ನಾ.ಸುಬ್ರಮಣ್ಯ ಎಂದೇ ಖ್ಯಾತರಾಗಿರುವ ಅವರು ಹಲವು ದಶಕಗಳಿಂದ ಸಿನಿಮಾ ಪತ್ರಿಕೋದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನಾನ್ ಫೀಚರ್ ಫಿಲ್ಮ್(ಬೆಸ್ಟ್ ಎಕ್ಸ್‍ಫ್ಲೋರೇಷನ್/ ಅಡ್ವೆಂಚರ್ ಫಿಲ್ಮ್) ವಿಭಾಗದಲ್ಲಿ ಜೇಕಬ್ ವರ್ಗೀಸ್ ನಿರ್ದೇಶನದ, ಮ್ಯಾಥ್ಯೂ ವರ್ಗೀಸ್, ದಿನೇಶ್ ರಾಜ್ಕುಮಾರ್ ಎನ್, ನವೀನ್ ಫ್ರಾನ್ಸಿಸ್‍ನಿರ್ಮಾಣದ ಆಯುಷ್ಮಾನ್ ಚಿತ್ರಕ್ಕೆ ನ್ಯಾಷನಲ್ ಅವಾರ್ಡ್ ಸಿಕ್ಕಿದೆ.