ಸಿನಿಮಾ ಕ್ಷೇತ್ರದ ಸಾಧಕರಿಗೆ ಕೊಡಮಾಡುವ ಪ್ರತಿಷ್ಟಿತ ಪ್ರಶಸ್ತಿಗಳ ಪೈಕಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕೂಡ ಒಂದು. ಕೇಂದ್ರ ಸರ್ಕಾರ ನೀಡುವ, ಖುದ್ದು ರಾಷ್ಟ್ರಪತಿಗಳೇ ಪ್ರದಾನ ಮಾಡುವ ಈ ಪ್ರಶಸ್ತಿಗೆ ಬಹುಮುಖ್ಯವಾದ ಸ್ಥಾನವಿದೆ. ಅಂದ್ಹಾಗೇ, ಕರೋನಾ ಕಾರಣದಿಂದ ಈ ಪ್ರಶಸ್ತಿ ಘೋಷಣೆ ಮಾಡಲು ಸಾಧ್ಯವಾಗಿರಲಿಲ್ಲ. ಇಂದು 2021ರ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ಹಾಗಾದ್ರೆ, ಯಾರೆಲ್ಲಾ ನ್ಯಾಷನಲ್ ಅವಾರ್ಡ್‍ಗೆ ಭಾಜನರಾದರು? ಆ ಕುರಿತಾದ ಡೀಟೈಲ್ಸ್ ಇಲ್ಲಿದೆ
ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಕಣ್ಣು `ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ’ ಘೋಷಣೆಯತ್ತ ನೆಟ್ಟಿತ್ತು. ಆರ್ ಆರ್ ಆರ್ ಹಾಗೂ ಪುಷ್ಪ, ಜೈ ಭೀಮ್, ಕರ್ಣನ್, ಮಾನಾಡು, ಸರ್ಪಟ್ಟ ಪರಂಬರೈ, ನಾಯಟ್ಟು, ರಾಕೆಟ್ರಿ-ದಿ ನಂಬಿ ಎಫೆಕ್ಟ್ ಸೇರಿದಂತೆ ಹಲವು ಸೌತ್ ಸಿನಿಮಾಗಳು ಸ್ಪರ್ಧೆಯಲ್ಲಿದಿದ್ದರಿಂದ ದಕ್ಷಿಣ ಭಾರತೀಯ ಚಿತ್ರರಂಗ ಕಣ್ಣರಳಿ ಕಾದಿತ್ತು. ಫೈನಲೀ, 2021ರ ನ್ಯಾಷನಲ್ ಅವಾರ್ಡ್ ಪಟ್ಟಿ ಹೊರಬಿದ್ದಿದೆ. ಅತ್ಯುತ್ತಮ ನಟ ಪ್ರಶಸ್ತಿಗೆ ಅಲ್ಲು ಅರ್ಜುನ್ , ಅತ್ಯುತ್ತಮ ನಟಿ ಪ್ರಶಸ್ತಿಗೆ ಅಲಿಯಾ ಭಟ್ ಹಾಗೂ ಕೃತಿ ಸನಾನ್ ಪಾತ್ರರಾಗಿದ್ದಾರೆ. ಪುಷ್ಪ ಚಿತ್ರದ ಅಭಿನಯಕ್ಕಾಗಿ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್, ಗಂಗೂಬಾಯಿ ಕಾಠಿಯಾವಾಡಿ ಚಿತ್ರದ ನಟನೆಗಾಗಿ ಅಲಿಯಾ ಭಟ್ ಹಾಗೂ ಮಿಮಿ ಸಿನಿಮಾದ ಅಭಿನಯಕ್ಕಾಗಿ ನಟಿ ಕೃತಿ ಸನಾನ್ ನ್ಯಾಷನಲ್ ಅವಾರ್ಡ್‍ನ ಬಾಚಿಕೊಂಡಿದ್ದಾರೆ.
2020ರಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನ ಸೂರ್ಯ ಹಾಗೂ ಅಜಯ್ ದೇವಗನ್ ಇಬ್ಬರು ಕೂಡಿ ಹಂಚಿಕೊಂಡಿದ್ದರು. ಸುರರೈಪೊಟ್ರು ಸಿನಿಮಾಗಾಗಿ ಸೂರ್ಯ, ತಾನಾಜಿ ಚಿತ್ರದ ನಟನೆಗಾಗಿ ಅಜಯ್ ದೇವಗನ್ ಅವ್ರನ್ನ ಆಯ್ಕೆ ಮಾಡಿ ದಿ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿಯನ್ನ ನೀಡಲಾಗಿತ್ತು. ಸುರರೈಪೊಟ್ರು ಚಿತ್ರದ ಅಭಿನಯಕ್ಕಾಗಿ ನಟಿ ಅಪರ್ಣ ಬಾಲಮುರುಳಿ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.