Kiran Raj: ‘777 ಚಾರ್ಲಿ’ ಸಿನಿಮಾ ಮೂಲಕ ಖ್ಯಾತಿ ಗಳಿಸಿದ ಸ್ಯಾಂಡಲ್ ವುಡ್ ಯುವ ನಿರ್ದೇಶಕ ಕಿರಣ್ ರಾಜ್ (Kiran Raj). ಈ ಸಿನಿಮಾ ನಂತರ ಪ್ರಶಸ್ತಿ ಬಾಚಿಕೊಳ್ಳೋದ್ರಲ್ಲೇ ಬ್ಯುಸಿಯಾಗಿದ್ದರು. ಹಾರಾರ್, ಕಾಮಿಡಿ ಫ್ಯಾಂಟಸಿ ಸಿನಿಮಾ ಮಾಡುವತ್ತ ಅಪ್ಡೇಟ್ ನೀಡಿದ್ದ ನಿರ್ದೇಶಕರು ಅದಾದ ನಂತರ ಸುದ್ದಿಯಲ್ಲಿರಲಿಲ್ಲ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಫೋಟೋ ಮೂಲಕ ಬಝ್ನಲ್ಲಿದ್ದಾರೆ.
ರಕ್ಷಿತ್ ಶೆಟ್ಟಿ ಸಿನಿಮಾ ನಂತರ ಕಿರಣ್ ರಾಜ್(Kiran Raj) ಮುಂದಿನ ಸಿನಿಮಾ ಹಾದಿಯೇನು ಅನ್ನೋವಾಗಲೇ ಬಿಗ್ ಅಪ್ಡೇಟ್ ನೀಡೋ ಸೂಚನೆ ನೀಡಿದ್ದಾರೆ. ಬಿಟೌನ್ ಮಸಲ್ ಮ್ಯಾನ್ ಜಾನ್ ಅಬ್ರಾಹಂ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಭೇಟಿಯ ಸಂತಸವನ್ನು ಬರೆದುಕೊಂಡಿದ್ದಾರೆ. ಈ ಫೋಟೋ ನೋಡಿ ಅವನೇ ಶ್ರೀಮನ್ನಾರಾಯಣ ಸಿನಿಮಾ ನಿರ್ದೇಶಕ ಸಚಿನ್ರಂತೆ ಇವ್ರು ಕೂಡ ಬಿಟೌನ್ ಅಂಗಳಕ್ಕೆ ಹಾರಿಬಿಟ್ರಾ ಎಂಬ ಟಾಕ್ ಜೋರಾಗಿದೆ.
ಹಾರಾರ್ ಫ್ಯಾಂಟಸಿ ಸಿನಿಮಾವನ್ನು ಕೈಗೆತ್ತಿಕೊಂಡಿದ್ದ ಕಿರಣ್ ರಾಜ್(Kiran Raj) ಬಿಗ್ ಬಜೆಟ್ನಲ್ಲಿ ಸಿನಿಮಾ ಮಾಡೋದಾಗಿ ಹೇಳಿದ್ರು. ಆ ನಂತರ ಸಿನಿಮಾ ಬಗ್ಗೆ ಸುಳಿವಿರಲಿಲ್ಲ. ನಂತರ VFX ಕೋರ್ಸ್ಗಾಗಿ ಲಂಡನ್ ಫ್ಲೈಟ್ ಹತ್ತಿದ್ರು. ಕಂ ಬ್ಯಾಕ್ ಮಾಡಿದ ಮೇಲೂ ಸಿನಿಮಾ ಕೆಲಸ ಆರಂಭಿಸುವ ಸೂಚನೆ ಕಂಡುಬಂದಿಲ್ಲ. ಈಗಲೂ ಸಿನಿಮಾ ವಿಚಾರವಾಗಿ ಯಾವುದೇ ಸುಳಿವು ಕೊಡದೇ ಜಾನ್ ಅಬ್ರಾಹಂ ಭೇಟಿಯ ಸಂತಸವನ್ನು ಮಾತ್ರ ಹಂಚಿಕೊಂಡು ಕ್ಯೂರಿಯಾಸಿಟಿ ಮೂಡಿಸಿದ್ದಾರೆ ಕಿರಣ್ ರಾಜ್.
‘777 ಚಾರ್ಲಿ’ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿ ಗೆದ್ದಿತ್ತು. ಈ ಸಮಯದಲ್ಲಿ ಜಾನ್ ಅಬ್ರಾಹಂ ಹಿಂದಿ ಬೆಲ್ಟ್ ನಲ್ಲಿ ಚಿತ್ರತಂಡಕ್ಕೆ ಸಾಥ್ ನೀಡಿದ್ದರು. ಇದರಿಂದ ಸಹಜವಾಗಿ ಕಿರಣ್ ರಾಜ್(Kiran Raj)ಗೆ ಜಾನ್ ಅಬ್ರಾಹಂ ಮೇಲೆ ಗೌರವವಿದೆ. ಇದೀಗ ಮತ್ತೆ ಜಾನ್ ಅಬ್ರಾಹಂ ಭೇಟಿ ಮಾಡಿರೋದು ಸಹಜವಾಗಿ ಕುತೂಹಲಕ್ಕೆ ಕಾರಣವಾಗಿದೆ. ಇದು ಕೃತಘ್ನತೆಯಾ ಭೇಟಿಯಾ..? ಅಥವಾ ಸಿನಿಮಾ ವಿಚಾರದ ಭೇಟಿಯಾ..? ನಿರ್ದೇಶಕರೇ ತಿಳಿಸಬೇಕಿದೆ.