ಬಾಲಿವುಡ್ ಹೀರೋ ಗ್ರೀಕ್ ಗಾಡ್ ಹೃತಿಕ್ ರೋಷನ್ಗೆ ಹಾಟ್ ಬ್ಯೂಟಿ ಡಿಪ್ಪಿ ಲಕ್ಕಿ ಗರ್ಲ್ ಆಗ್ತಾಳಾ? ಮಸ್ತಾನಿ ಕಾಲ್ಗುಣದಿಂದ ಕ್ರಿಷ್ ಹೀರೋಗೆ ಅದೃಷ್ಟ ಖುಲಾಯಿಸುತ್ತಾ?ಪದ್ಮಾವತಿ ಪಕ್ಕದಲ್ಲಿ ಇರೋದ್ರಿಂದ ಅಗ್ನಿಪತ್ ಹೀರೋ ಸೋಲೆಂಬ ಅಗ್ನಿಪರೀಕ್ಷೆಯನ್ನ ಎದುರಿಸಿ ನಿಲ್ತಾರಾ? ಧೂಮ್ ಹೀರೋ `ಫೈಟರ್’ ಆಗಿ ಗೆಲ್ತಾರಾ? ಬೆಂಗಳೂರು ಚೆಲುವೆ ಜೊತೆ ಸೇರಿ ಬ್ಯಾಂಗ್ ಹೀರೋ ಬಾಕ್ಸ್ ಆಫೀಸ್ನ ಬ್ಯಾಂಗ್ ಮಾಡ್ತಾರಾ? ಹೀಗೆ ಎಲ್ಲಾ ಪ್ರಶ್ನೆಗಳು ಏಕಾಏಕಿ ಹುಟ್ಟಿಕೊಳ್ಳೋದಕ್ಕೆ ಕಾರಣ `ಫೈಟರ್’ ಟೀಸರ್

ಯಸ್, ಹೃತಿಕ್ ಹಾಗೂ ದೀಪಿಕಾ ಕಾಂಬೋದಲ್ಲಿ ಬರ್ತಿರೋ `ಫೈಟರ್’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಪೈಲಟ್ ಗಳಾಗಿ ಕಾಣಿಸಿಕೊಂಡಿರುವ ಹೃತಿಕ್ ಮತ್ತು ದೀಪಿಕಾ, ಜೆಟ್ ವಿಮಾನವೇರಿ ಸಾಹಸ ಪ್ರದರ್ಶಿಸಿದ್ದಾರೆ. ಫೈಟರ್ ಜೆಟ್ನ ಸಾಹಸವೇನೋ ರೋಮಾಂಚನಗೊಳಿಸುವಂತಿದೆ. ಇದಕ್ಕೂ ಮೀರಿ ಈ ಜೋಡಿಯ ಇಂಟಿಮೇಟ್ ಸೀನ್ಗಳು ಹೈಲೈಟ್ ಆಗಿವೆ.ಇದನ್ನ ನೋಡಿ ಇವರಿಬ್ಬರ ಫ್ಯಾನ್ಸ್ ಏನೋ ಕೇಕೆ ಹೊಡೆಯುತ್ತಿದ್ದಾರೆ. ಆದರೆ, ಕೆಲ ನೆಟ್ಟಿಗರು ದೇಶಭಕ್ತಿ ಮೆರೆವ ಈ ಸಿನಿಮಾದಲ್ಲಿ ಡಿಪ್ಪಿ ಇಷ್ಟು ಬೋಲ್ಡ್ ಆಗುವ ಅನಿವಾರ್ಯತೆ ಇದೆಯಾ ಅಂತ ಪ್ರಶ್ನೆ ಮಾಡ್ತಿದ್ದಾರೆ. ಇನ್ನೂ ಕೆಲವರು ಡಿಪ್ಪಿ ಬಿಕಿನಿ ಹಾಕ್ಕೊಂಡು ಪಠಾಣ್ ಕೈಹಿಡಿದ್ಳು. ಹಾಗೆಯೇ, ಫೈಟರ್ ಕೈ ಹಿಡಿಯೋದಕ್ಕೆ ಹೊರಟಿದ್ದಾಳೆ ಅಂತ ಕಮೆಂಟ್ ಮಾಡ್ತಿದ್ದಾರೆ. ಈಗಾಗಲೇ ಬಾಲಿವುಡ್ ಬಾದ್ ಷಾಗೆ ಡಿಪ್ಪಿ ಲಕ್ಕಿ ಗರ್ಲ್ ಅನ್ನೋದು ಪ್ರೂ ಆಗಿದೆ. ಇನ್ನೇನಿದ್ರೂ ಹೃತಿಕ್ಗೆ ದೀಪಿಕಾ ಲಕ್ಕಿ ಚಾರ್ಮ್ ಅನ್ನೋದು ಗೊತ್ತಾಗಬೇಕಿದೆ.
ಪಠಾಣ್ ನಂತಹ ಫೈಟರ್ ಚಿತ್ರದಲ್ಲೂ ಆ್ಯಕ್ಷನ್, ರೊಮ್ಯಾನ್ಸ್, ಎಮೋಷನ್, ದೇಶಭಕ್ತಿ ಸೇರಿ ಎಲ್ಲವೂ ಅಡಕವಾಗಿದೆ. ಸೋಲಿನ ಸುಳಿಗೆ ಸಿಕ್ಕಿ ಒದ್ದಾಡ್ತಿದ್ದ ಕಿಂಗ್ ಖಾನ್ಗೆ ಪಠಾಣ್ ನಂತಹ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ಸಿದ್ದಾರ್ಥ್ ಆನಂದ್ ಫೈಟರ್ ಮೂಲಕ ಮತ್ತೆ ಅಖಾಡಕ್ಕೆ ಇಳಿಯುತ್ತಿದ್ದಾರೆ. ವಾರ್, ಬ್ಯಾಂಗ್ ಬ್ಯಾಂಗ್ ನಂತರ ಗ್ರೀಕ್ ಗಾಡ್ ಹೃತಿಕ್ ಜೊತೆ ಕೈ ಜೋಡಿಸಿರೋದ್ರಿಂದ `ಫೈಟರ್’ ಮೇಲೆ ನಿರೀಕ್ಷೆ ಹೆಚ್ಚಿದೆ. ಸದ್ಯ, ಗ್ರೀಕ್ ಗಾಡ್ ಗೆ ಕೂಡ ಬಿಗ್ ಬ್ರೇಕ್ ಬೇಕಿದೆ. ಪಠಾಣ್, ಗದ್ದರ್-೨, ಜವಾನ್, ಅನಿಮಲ್ ಚಿತ್ರಗಳಂತೆ ಫೈಟರ್ ಪವರ್ ತೋರಿಸ್ತಾನಾ? ಅದೃಷ್ಟ ಅನ್ನೋ ಅಶ್ವಮೇಧ ಕುದುರೆ ಏರಿ ಧೂಮ್ ಹೀರೋ ವಲ್ಡ್ ವೈಡ್ ಮೆರವಣಿಗೆ ಹೋಗಿಬರ್ತಾನಾ ಅನ್ನೋದನ್ನ ಕಾದುನೋಡಬೇಕಿದೆ.

‘ವಾರ್’ ಸಿನಿಮಾ ಶೂಟಿಂಗ್ ಸಮಯದಲ್ಲೇ ನಿರ್ದೇಶಕ ಸಿದ್ದಾರ್ಥ್ ಆನಂದ್ ಫೈಟರ್ ಜೆಟ್ ಸುತ್ತಾ ಆಕ್ಷನ್ ಎಂಟರ್ಟೈನರ್ ಸಿನಿಮಾ ಮಾಡುವುದಾಗಿ ಹೇಳಿದ್ದರು. ಆದರೆ ಕೊರೊನಾ ಹಾವಳಿಯಿಂದ ಸಿನಿಮಾ ತಡವಾಯಿತು. ಜನವರಿ 10, 2021ರಲ್ಲಿ ಅಧಿಕೃತವಾಗಿ ಸಿನಿಮಾ ಘೋಷಣೆಯಾಗಿತ್ತು. ಇದು ಸರಣಿಯ ಮೊದಲ ಸಿನಿಮಾ. ಇದೇ ಜಾನರ್ನಲ್ಲಿ ಮತ್ತೊಂದು ಸಿನಿಮಾಗಳನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ಅಂದಾಜು 250 ಕೋಟಿ ರೂ. ಬಜೆಟ್ನಲ್ಲಿ ‘ಫೈಟರ್’ ಸಿನಿಮಾ ನಿರ್ಮಾಣವಾಗಿದೆ. ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾದಲ್ಲಿ,ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್, ಅಕ್ಷಯ್ ಓಬೆರಾಯ್ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿದ್ದಾರೆ. 2024ರ ಜನವರಿ 26ರ ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಗಲಿದೆ. ಸದ್ಯ ಬಿಡುಗಡೆಯಾಗಿರುವ ಟೀಸರ್ನ ಕಿರು ಝಲಕ್ ನೋಡುಗರ ಗಮನ ಸೆಳೆದಿದೆ. ಈಗಾಗಲೇ ಪಠಾಣ್ ಮೂಲಕ 1000 ಕೋಟಿಯ ಹಿಟ್ ಸಿನಿಮಾ ನೀಡಿರುವ ಸಿದ್ಧಾರ್ಥ್ ಆನಂದ್, ಫೈಟರ್ ಮೂಲಕ ಮತ್ತೊಂದು ಹಿಟ್ ನೀಡುವ ಕಾತರದಲ್ಲಿದ್ದಾರೆ. ಐಮ್ಯಾಕ್ಸ್ ತ್ರೀಡಿ ವರ್ಷನ್ನಲ್ಲೂ ಈ ಚಿತ್ರವನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳಬಹುದು.





