ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನೆಮಾ ಮೂಲಕ ಕನ್ನಡ ಶಾಲೆಗಳ ಉಳಿವಿನ ಬಗ್ಗೆ ಜಾಗೃತಿಮೂಡಿಸಿ ಹಲವಾರು ಕನ್ನಡ ಶಾಲೆಗಳ ಉಳಿವಿಗೆ ಕಾರಣನಾಗಿರುವ ನಟ ನಿರ್ದೇಶಕ ರಿಷಭ್ ಶೆಟ್ಟಿ ಕೇವಲ ಸಿನೆಮಾದಲ್ಲಿ ಮಾತ್ರವಲ್ಲದೇ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ರಿಷಭ್ ಶೆಟ್ಟಿ ಫೌಂಡೇಶನ್ ಮೂಲಕ ಅಳಿವಿನಂಚಿನಲ್ಲಿದ್ದ ತಾನು ಓದಿದ ಕೆರಾಡಿಯ ಸರ್ಕಾರಿ ಕನ್ನಡ ಶಾಲೆಯನ್ನು ದತ್ತು ಪಡೆದಿದ್ದಾರೆ. ಕೆರಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಲೆಗೆ ಭೇಟಿನೀಡಿ ಕನ್ನಡ ಶಾಲೆ ಉಳಿಸುವ ಮತ್ತು ಬೆಳೆಸುವ ತನ್ನ ಕನಸನ್ನು ಬಿಚ್ಚಿಟ್ಟರು ಈ ಸಂದರ್ಭದಲ್ಲಿ ಊರ ಪ್ರಮುಖರು,ಹಿರಿಯರು ಉಪಸ್ಥಿತರಿದ್ದು ಹುಟ್ಟೂರಿನ ಶಾಲೆಯ ದತ್ತು ರಿಷಭ್ ಶೆಟ್ಟಿ ಯವರನ್ನು ಅಭಿನಂದಿಸಿದರು.
ರಿಷಬ್ ಸದ್ಯ ಕಾಂತಾರ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ರಿಷಬ್ ಹುಟ್ಟೂರಿನಲ್ಲಿಯೇ ʻಕಾಂತಾರʼ ಪ್ರೀಕ್ವೆಲ್ ಮಹೂರ್ತ ನೆರವೇರಿತು. ಟೈಟಲ್ ಟೀಸರ್ ಜೊತೆಗೆ ಡಿವೈನ್ ಸ್ಟಾರ್ ಲುಕ್-ಗೆಟಪ್ ರಿಲೀಸ್ ಮಾಡೋ ಮೂಲಕ ಹೊಂಬಾಳೆ ಸಂಸ್ಥೆ ಸಮಸ್ತ ಸಿನಿಮಾ ಪ್ರೇಮಿಗಳಿಗೆ ಸಖತ್ ಸರ್‌ಪ್ರೈಸ್ ಕೊಟ್ಟರು. ಅಚ್ಚರಿ ಅಂದರೆ ಚಿತ್ರಪ್ರೇಮಿಗಳ ಜೊತೆಗೆ ಇಡೀ ಚಿತ್ರಜಗತ್ತು ಈಗ ಕಾಂತಾರ ಮೊದಲ ಅಧ್ಯಾಯಕ್ಕಾಗಿ ಎದುರುನೋಡ್ತಿದೆ. ರಿಲೀಸ್ ಆಗಿರೋ ಟೈಟಲ್ ಟೀಸರ್ ಮಿಲಿಯನ್ ಗಟ್ಟಲೇ ವೀವ್ಸ್ ಪಡೆದು ಯೂಟ್ಯೂಬ್ ಲೋಕವನ್ನ ಶೇಕ್ ಮಾಡಿದೆ.
ಫಸ್ಟ್ ಲುಕ್ ಟೀಸರ್ ರಿಲೀಸ್ ಆದ್ಮೇಲೆ ಕಾಂತಾರ ಚಾಪ್ಟರ್ 1 ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಕಾಡುಬೆಟ್ಟು ಶಿವಪ್ಪನ ನಯಾ ಲುಕ್ಕು ಹಾಗೂ ಗೆಟಪ್ ಸಮಸ್ತ ಸಿನಿಮಾ ಪ್ರೇಮಿಗಳನ್ನು ದಂಗು ಬಡಿಸಿದೆ. ಕಾಂತಾರ ಶಿವನ ಹೊಸ ಅವತಾರ ಕುತೂಹಲದ ಕೋಟೆಯನ್ನೇ ನಿರ್ಮಿಸಿದೆ. ಒಂದು ಕೈಲಿ ಕೈಯಲ್ಲಿ ತ್ರಿಶೂಲ, ಇನ್ನೊಂದು ಕೈಯಲ್ಲಿ ಜಮದಗ್ನಿಯ ಕೊಡಲಿ ಹಿಡಿದು ದಟ್ಟ ಕಾಡೊಳಗೆ ದರ್ಶನ ನೀಡುವ ಡಿವೈನ್ ಸ್ಟಾರ್ ಪಾತ್ರ, ಅಘೋರಿಯಾ ರೂಪವಾ ಅಥವಾ ಸಾಕ್ಷಾತ್ ಪರಶಿವನ ದರ್ಶನವಾ ಎನ್ನುವ ಅನುಮಾನ ಪ್ರೇಕ್ಷಕರನ್ನ ಒಂಟಿಕಾಲಿನಲ್ಲಿ ನಿಲ್ಲಿಸಿದೆ.
ಚಿತ್ರದ ಮೊದಲ ನೋಟದಲ್ಲಿ ‘ಇದು ಕದಂಬರ ಆಳ್ವಿಕೆಯ ಸಂದರ್ಭದಲ್ಲಿ ಹುಟ್ಟಿಕೊಂಡ ದಂತಕಥೆ’ ಎಂಬುದನ್ನು ತಿಳಿಸಲಾಗಿದೆ. ಕದಂಬರು ಮೂರನೇ ಶತಮಾನದಿಂದ ಆರನೇ ಶತಮಾನದವರೆಗೆ ಆಳ್ವಿಕೆ ನಡೆಸಿದ್ದರು. ಕದಂಬರ ಬಗ್ಗೆ ಹಲವು ದಂತಕಥೆಗಳಿವೆ. ಅದರಲ್ಲಿ ಮುಖ್ಯವಾಗಿ, ರಾಜ ತ್ರಿಲೋಚನ ಕದಂಬ ಶಿವನ ಬೆವರಿನಿಂದ ಹುಟ್ಟಿದವನು ಎಂದು ಹೇಳಲಾಗುತ್ತದೆ. ಇನ್ನೊಂದೆಡೆ ರಾಜ ಮಯೂರವರ್ಮ, ಕದಂಬ ಮರಗಳಿಂದ ಕೂಡಿದ ದಟ್ಟಾರಣ್ಯದಲ್ಲಿ ಜನಿಸಿದ ಎಂಬ ಕಥೆಯೂ ಇದೆ. ಆದರೆ, ಇದು ಇವೆರಡು ಕಥೆಗಳ ಕಾಲಘಟ್ಟದ್ದಾ? ಅಥವಾ ಇನ್ನೂ ವಿಶೇಷವಾಗಿ ಏನಾದರೂ ನಿರೀಕ್ಷಿಸಬಹುದೇ? ಎನ್ನುವ ಕುತೂಹಲ ಹುಟ್ಟಿಸಿದೆ.
‘ಕಾಂತಾರ’ ಚಿತ್ರದಲ್ಲಿ ಶಿವ, ಪಂಜುರ್ಲಿ ಮತ್ತು ಗುಳಿಗ ದೈವದ ಭಿನ್ನ ವಿಭಿನ್ನ ಲುಕ್ ಮತ್ತು ಶೇಡ್ ಗಳಲ್ಲಿ ರಿಷಬ್ ಕಾಣಿಸಿಕೊಂಡಿದ್ದರು. ಇದೀಗ ಪ್ರೀಕ್ವೆಲ್ ನಲ್ಲೂ ಮೊದಲ ಚಿತ್ರವನ್ನೂ ಮೀರಿದ ಹೊಸ ಬಗೆಯ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಗ್ನಿಪರ್ವತದೊಳಗೆ ರಕ್ತಸಿಕ್ತ ಮೈಯಲ್ಲಿ, ಕೈಯಲ್ಲಿ ಕೊಡಲಿ, ತ್ರಿಶೂಲ ಹಿಡಿದು ಹೋರಾಟಕ್ಕೆ ನಿಂತಂತೆ ಕಾಣಿಸಿಕೊಂಡಿರುವ ರಿಷಬ್ ಅವತಾರ ಪರಶುರಾಮನಂತೆ ಕಾಣಿಸುವಂತಿದೆ. ತುಳುನಾಡನ್ನು ಸಮುದ್ರದಿಂದ ಮರಳಿ ಪಡೆದ ಪರಶುರಾಮನ ಕಥೆಯೇ ರೋಮಾಂಚನಕಾರಿ! ಇದೇನಾದರು ಅದಕ್ಕೆ ಸಂಬಂಧ ಪಟ್ಟಿದ್ದಾ? ದೈವಗಳ ಮೂಲಗಳಿಗೆ ಸಂಬಂಧಪಟ್ಟಿದ್ದಾ? ಎಂದು ಯೋಚಿಸುವಂತೆ ಮಾಡಿದೆ.
ಈ ಚಿತ್ರಕ್ಕೆ ‘ಅಧ್ಯಾಯ 1’ ಎಂಬ ಅಡಿಬರಹ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಇದು ಅಧ್ಯಾಯ 1 ಆದರೆ, ಇನ್ನೂ 2,3 ಹೀಗೆ ಮುಂದುವರಿಯಬಹುದಾ? ಎಂಬ ಪ್ರಶ್ನೆಗೂ ಕಾರಣವಾಗಿದೆ. ಈ ಬಗ್ಗೆ ರಿಷಬ್ ಶೆಟ್ಟಿ, ‘ನೀವೆಲ್ಲ ಈಗಾಗಲೇ ನೋಡಿರುವುದು ಎರಡನೇ ಭಾಗ. ಈಗ ಬರುತ್ತಿರುವುದು ಮೊದಲನೇ ಭಾಗ. ಹೀಗಾಗಿ ‘ಅಧ್ಯಾಯ 1′. ಈ ಸಿನಿಮಾ ಕರಾವಳಿ ಭಾಗಕ್ಕೆ ಸಂಬಂಧಿಸಿದ್ದರಿಂದ ಇಲ್ಲಿಯೇ ಚಿತ್ರೀಕರಣ ಮಾಡುವ ಯೋಚನೆಯಿದೆ. ಜತೆಗೆ ಉಳಿದ ಪಾತ್ರಗಳಿಗೆ ಕಾಸ್ಟಿಂಗ್ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರೀಕರಣ ಶುರು ಮಾಡಲಿದ್ದೇವೆ’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳ ಜತೆಗೆ ಬೆಂಗಾಲಿ ಮತ್ತು ಇಂಗ್ಲೀಷ್ ಸೇರಿ ಒಟ್ಟು ಏಳು ‘ಅಧ್ಯಾಯ 1’ ಬಿಡುಗಡೆಯಾಗಲಿದೆ.