ಫಸ್ಟ್ ಲುಕ್ ಟೈಟಲ್ ಟೀಸರ್ ಮೂಲಕ ಕಿಚ್ಚು ಹಚ್ಚಿರುವ ಕಾಂತಾರ ಮೊದಲ ಅಧ್ಯಾಯದ ಕ್ರೇಜ್ ಜೋರಾಗಿದೆ. ಯಾವ ಮಟ್ಟಿಗೆ ಅಂದ್ರೆ ಕಾಂತಾರ ಪ್ರೀಕ್ವೆಲ್ ನಲ್ಲಿ ನಟಿಸೋದಿಕ್ಕೆ ಬರೋಬ್ಬರಿ 25 ಸಾವಿರಕ್ಕೂ ಹೆಚ್ಚು ಅಪ್ಲಿಕೇಷನ್ ಡಿವೈನ್ ಸ್ಟಾರ್ ರಿಷಬ್ ಟೇಬಲ್ ಮುಂದೆ ಹಾಜರಾಗಿವೆ. ಕಾಂತಾರ ಫಸ್ಟ್ ಚಾಪ್ಟರ್ ನಲ್ಲಿ ನಟಿಸೋದಿಕ್ಕೆ ಕಲಾವಿದರಿಗೆ ಹೊಂಬಾಳೆ ಆಹ್ವಾನ ನೀಡಿತ್ತು. ಪುರುಷ ಹಾಗೂ ಮಹಿಳಾ ಕಲಾವಿದರಿಗೆ ಕಾಂತಾರ ವೆಬ್ ಸೈಟ್ ನಲ್ಲಿ ಹೆಸ್ರು ನೋಂದಾಣಿ ಮಾಡಲು ಅವಕಾಶ ನೀಡಲಾಗಿತ್ತು. ಅದರಂತೆ ಬರೋಬ್ಬರಿ 25 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿವೆ.
ಈಗಾಗಲೇ ಚಿತ್ರತಂಡವು ಅದನ್ನು ಪರಿಶೀಲಿಸುವ ಕೆಲಸವನ್ನು ನಡೆಸಿದೆ. ಸಾಮಾನ್ಯ ಕಲಾವಿದರು ಮಾತ್ರವಲ್ಲ, ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ನಾಯಕಿಯರು ಅವಕಾಶ ಕೇಳಿದ್ದಾರೆ ಎನ್ನವುದು ವಿಶೇಷ. ಕಾಂತಾರ ಸಿನಿಮಾದಲ್ಲಿ ನಟಿಸೋಕೆ ಆಸೆ ಇರುವುದಾಗಿ ಪಾಯಲ್ ರಜಪೂತ್ ಮತ್ತು ಕನ್ನಡದ ನಟಿ ಕಾರುಣ್ಯ ರಾಮ್ ಕೂಡ ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಆಸೆಯನ್ನು ವ್ಯಕ್ತಪಡಿಸಿರುವ ಕಾರುಣ್ಯ ರಾಮ್, ನನಗೂ ಕಾಂತಾರ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿ ಎಂದು ಅವರು ಕೇಳಿಕೊಂಡಿದ್ದರು.
ಕದಂಬರ ಕಥೆಯನ್ನು ಹೊಂದಿರುವ ಕಾಂತಾರ ಪ್ರೀಕ್ವೆಲ್ ನಲ್ಲಿ ಕನ್ನಡ ಕಲಾವಿದರಿಗೆ ಮೊದಲ ಆದ್ಯತೆ ಅಂತಾ ರಿಷಬ್ ಹೇಳಿದ್ದರು ಹೀಗಾಗಿ ನಿರೀಕ್ಷೆ ಇದೆ. ಈ ಹಿಂದೆ ಇದ್ದ ಒಂದಷ್ಟು ತಾರಾಬಳಗ ಮೊದಲ ಭಾಗದಲ್ಲಿಯೂ ಇರ್ತಾರಾ? ಇರಲ್ವಾ? ಗೊತ್ತಿಲ್ಲ. ಡಿಸೆಂಬರ್ ಅಥವಾ ಜನವರಿ ತಿಂಗಳಿನಿಂದ ಕಾಂತಾರ ಶೂಟಿಂಗ್ ಚಾಲುವಾಗಲಿದೆ. ಆ ನಂತ್ರ ಸ್ಟಾರ್ ಕಾಸ್ಟ್ ವಿಚಾರ ಬಹಿರಂಗವಾಗಬಹುದು.