ಸಲಾರ್ ಮುಂದೆ ಡಂಕಿ ಡಲ್ ಆಯ್ತಾ? ಖಂಡಿತ..ಹೌದು ಅನ್ನುತ್ತಿದೆ ಬಾಕ್ಸಾಫೀಸ್ ರಿಪೋರ್ಟ್..ಝೀರೋ ಅಟ್ಟರ್ ಫ್ಲಾಪ್ ಬಳಿಕ ಮಂಕಾಗಿದ್ದ ಶಾರುಖ್ ಖಾನ್ ಗೆ ಪಠಾಣ್ ಹಾಗೂ ಜವಾನ್ ಸಿನಿಮಾ ಗೆಲುವಿನ ಬೂಸ್ಟ್ ಡೋಸ್ ಕೊಟ್ಟಿದ್ದವು. ಈ ಎರಡು ಮಾಸ್ ಚಿತ್ರಗಳು ಕಿಂಗ್ ಖಾನ್ ಸುಲ್ತಾನನಂತೆ ಮೆರೆಸಿಬಿಟ್ಟಿದ್ವು. ಬಟ್ ಮಾಸ್ ಸಲಾರ್ ಮುಂದೆ ಕ್ಲಾಸ್ ಡಂಕಿ ಕ್ಲಾಸಿಕ್ ಸಿನಿಮಾವಾಗಿ ಉಳಿಯದೇ ಕಳೆದುಹೋಗ್ತಿದೆ.
ಹ್ಯಾಟ್ರಿಕ್ ಬಾರಿಸುವ ಹುಮ್ಮಸ್ಸಿನಲ್ಲಿದ್ದ ಡಂಕಿಗೆ ಸಲಾರ್ ಸುನಾಮಿ ಶಾಕ್ ಕೊಟ್ಟಂತಿದೆ. ಡೈನೋಸಾರ್ ಅಬ್ಬರದ ಮುಂದೆ ಡಂಕಿ ಸೋತಂತೆ ಕಾಣ್ತಿದೆ. ಜವಾನ್ ಹಾಗೂ ಪಠಾಣ್ ಸಿನಿಮಾಗಳ ಕಲೆಕ್ಷನ್ ಗೆ ಹೋಲಿಕೆ ಮಾಡಿದ್ರೆ ಕೊಂಚ ಡಲ್ ಆಗಿದೆ ಡಂಕಿ ಕಲೆಕ್ಷನ್..ಮೊದಲ ದಿನ 30ಕೋಟಿಯಷ್ಟೇ ಬಾಚಿಕೊಂಡಿದ ಬಾಲಿವುಡ್ ಬಾದ್ ಷಾ ಹಾಗೂ ರಾಜ್ ಕುಮಾರ್ ಹಿರಾನಿ ಸಿನಿಮಾ.. ಜವಾನ್ ಸಿನಿಮಾ ಮೊದಲ ದಿನ 75 ಕೋಟಿ ರೂಪಾಯಿ ಬಾಚಿಕೊಂಡಿತ್ತು. ದೊಡ್ಡ ಮಟ್ಟದಲ್ಲಿ ಫ್ಲಾಪ್ ಆದ ಆದಿಪುರುಷ್ ಚಿತ್ರ ಕೂಡ ಮೊದಲ ದಿನ 36 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಆದ್ರೆ, ಈ ಚಿತ್ರಗಳಂತೆ ಪರ್ಫಾರ್ಮ್ ಮಾಡಲು ಡಂಕಿ ಸಾಧ್ಯವಾಗಿಲ್ಲ.
ಸಲಾರ್ ಸುನಾಮಿ ಎದುರು ಡಂಕಿ ಕೊಚ್ಚಿ ಹೋಗ್ತಿದೆ ಅನ್ನೋದು ಗೊತ್ತಾಗ್ತಿದೆ. ಕ್ರಿಸ್ಮಸ್ ಹಾಗೂ ವೀಕೆಂಡ್ ಇರೋದ್ರಿಂದ ಡಂಕಿ ಕಲೆಕ್ಷನ್ ನಲ್ಲಿ ಪಿಕಪ್ ಆಗುವ ಸಾಧ್ಯತೆಯೂ ಇದೆ. ಯಾವುದನ್ನೂ ತಳ್ಳಿ ಹಾಕುವ ಆಗಿಲ್ಲ. ಇದು ಬಣ್ಣದ ಲೋಕ ಕಣ್ರಿ. ಇಲ್ಲಿ ಏನಾಗುತ್ತೋ ಯಾವುದನ್ನೂ ಊಹೆ ಮಾಡೋದಿಕ್ಕೆ ಆಗಲ್ಲ. ಎಲ್ಲವೂ ಪ್ರೇಕ್ಷಕಪ್ರಭುವಿನ ಕೈಯಲ್ಲಿದೆ ಇರೋದು. ಏನಂತೀರಾ..?