ಪ್ರಿಯಾಂಕ ಕಾಮತ್ ‘ಮಜಾ ಭಾರತ’- ‘ಗಿಚ್ಚಿ ಗಿಲಿಗಿಲಿ’ ರಿಯಾಲಿಟಿ ಶೋಗಳಿಂದ ಕರುನಾಡಿನ ಮನೆಮಾತಾದ ಹೆಣ್ಣುಮಗಳು. ತರಹೇವಾರಿ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿ ಕಿರುತೆರೆ ಪ್ರೇಕ್ಷಕರಿಂದ ಜೈಕಾರ ಹಾಕಿಸಿಕೊಂಡ ಪ್ರಿಯಾಂಕ, ಪ್ರೀತಿಸಿದ ಹುಡುಗ ಅಮಿತ್ ನಾಯಕ್ ಕೈನಿಂದ ಹೂಮಾಲೆ ಹಾಕಿಸಿಕೊಳ್ತಿದ್ದಾರೆ. ಯಸ್, ಪಿಂಕಿ ಹಾಗೂ ಅಮಿತ್ ಬಾಳಬಂಧನಕ್ಕೆ ಒಳಗಾಗುತ್ತಿದ್ದಾರೆ. ಇಬ್ಬರ ಮನೆಯಲ್ಲಿ ಮದುವೆ ಸಂಭ್ರಮ ಮನೆಮಾಡಿದ್ದು, ಈಗಾಗಲೇ ಸಂಗೀತ ಕಾಯಕ್ರಮ, ಮೆಹಂದಿ ಸೆರಮನಿ ಗ್ರ್ಯಾಂಡ್ ಆಗಿ ನಡೆದಿದೆ. ಮದುವೆ ಕೂಡ ಅದ್ದೂರಿಯಾಗಿ ನೆರವೇರಲಿದ್ದು, ಕಿರುತೆರೆ ಹಾಗೂ ಬೆಳ್ಳಿತೆರೆ ತಾರೆಯರು ಇವರಿಬ್ಬರ ಮದುವೆಗೆ ಸಾಕ್ಷಿಯಾಗಲಿದ್ದಾರೆ.
ಅಂದ್ಹಾಗೇ, ಈ ಜೋಡಿ ಕಳೆದ ಜನವರಿಯಲ್ಲಿ ಪುತ್ತೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಈ ಡಿಸೆಂಬರ್‌ನಲ್ಲಿ ಮದುವೆಯಾಗುವುದಾಗಿ ಅಂದೇ ಹೇಳಿಕೊಂಡಿದ್ದರು. ಅದರಂತೇ, ಕುಟುಂಬಸ್ಥರು, ಬಂಧು-ಮಿತ್ರರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಪರಸ್ಪರ ಪ್ರೀತಿಸಿ ಕುಟುಂಬದ ಒಪ್ಪಿಗೆ ಪಡೆದ ಈ ಜೋಡಿ ಅದ್ದೂರಿಯಾಗಿಯೇ ಸಪ್ತಪದಿ ತುಳಿಯುತ್ತಿದ್ದಾರೆ. ಅಚ್ಚರಿ ಅಂದರೆ ನಟಿ ಪ್ರಿಯಾಂಕ ಸಾವಿಗೆ ಸೆಡ್ಡು ಹೊಡೆದಿದ್ದು. ವೈದ್ಯರು ಬದುಕೋದೇ ಡೌಟ್ ಎಂದು ಹೇಳಿದಾಗಲೂ ಆತ್ಮವಿಶ್ವಾಸ ಕಳೆದುಕೊಳ್ಳದೇ ಸಾವು-ಬದುಕಿನ ಮಧ್ಯೆ ಹೋರಾಡಿ ಗೆದ್ದೇಬಿಟ್ಟರು. ಈ ಟೈಮ್‌ನಲ್ಲಿ ಪಿಂಕಿಗೆ ಬೆನ್ನೆಲುಬಾಗಿ ನಿಂತಿದ್ದು ಅಮಿತ್. ಇದೀಗ ಅದೇ ಅಮಿತ್ ಪಿಂಕಿನಾ ಕೈ ಹಿಡಿಯುತ್ತಿದ್ದಾರೆ. ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ಹೊಸಬಾಳಿಗೆ ಕಾಲಿಡುತ್ತಿದ್ದಾರೆ.

ಅಷ್ಟಕ್ಕೂ, ಏನಾಗಿತ್ತು ಪಿಂಕಿಗೆ ಅಂತೀರಾ? ಹೇಳ್ತೀವಿ ಕೇಳಿ. ಕಿರುತೆರೆ ಲೋಕದಲ್ಲಿ ಶೈನ್ ಆಗಿ ತಮ್ಮದೇ ಆದ ಅಭಿಮಾನಿಗಳನ್ನ ಸಂಪಾದಿಸಿದ ಪ್ರಿಯಾಂಕ, ಪ್ರೀತಿಸಿದ ಹುಡುಗನ ಜೊತೆ ಹಸೆಮಣೆ ಏರುವ ಕನಸು ಕಂಡರು. ಇನ್ನೇನು ನಿಶ್ಚಿತಾರ್ಥ ಮಾಡಿಕೊಳ್ಳಬೇಕು ಎನ್ನುವಾಗ ಅವರಿಗೆ ಅನಾರೋಗ್ಯ ಉಂಟಾಗಿ 2 ಸರ್ಜರಿ ಮಾಡಬೇಕಾಗಿ ಬರುತ್ತೆ. ಆಗ ವೈದ್ಯರು 50% ಮಾತ್ರ ಪಿಂಕಿ ಬದುಕುವ ಚಾನ್ಸ್ ಇದೆ ಎಂದು ಹೇಳ್ತಾರೆ. ಈ ಟೈಮ್‌ನಲ್ಲಿ ಅಮಿತ್ ಪಿಂಕಿನಾ ಬಿಟ್ಟೋಗಲಿಲ್ಲವಂತೆ. ನನ್ನನ್ನು ಬಿಟ್ಟು, ಬೇರೆಯವರನ್ನು ಮದುವೆಯಾಗು ಅಂತ ಹೇಳಿದ್ರೂ ಕೂಡ ಪಿಂಕಿನಾ ಕೈ ಬಿಡದ ಅಮಿತ್, ಆಪರೇಷನ್ ಮಾಡಿಸಿಕೊಂಡು ಹಾಸಿಗೆ ಮೇಲೆ ಮಲಗಿದ್ದ ಪಿಂಕಿನಾ ಮಗು ಥರ ನೋಡಿಕೊಂಡಿದ್ದಾರೆ. ಪ್ಯಾಡ್, ಡೈಪರ್ ಬದಲಾಯಿಸೋದ್ರಿಂದ ಹಿಡಿದು ಎಲ್ಲಾ ತರಹದ ಸೇವೆ ಮಾಡಿ ಪ್ರೀತಿಸಿದ ಹುಡುಗಿನಾ ಬದುಕಿಸಿಕೊಂಡು ಬಾಳಬಂಧನಕ್ಕೆ ಒಳಗಾಗುತ್ತಿದ್ದಾರೆ.
ಅಂದ್ಹಾಗೇ, ಈ ಬಗ್ಗೆ ಖುದ್ದು ಪಿಂಕಿನೇ ಹೇಳಿಕೊಂಡಿದ್ದರು. ಆಪರೇಷನ್ ಮಾಡಿಸಿಕೊಂಡು ಹಾಸಿಗೆ ಮೇಲೆ ಮಲಗಿದ್ದಾಗ ಅಮಿತ್ ಹೇಗೆಲ್ಲಾ ನೋಡಿಕೊಂಡ ಅನ್ನೋದನ್ನ ವಿಡಿಯೋ ಮಾಡಿ ಹಂಚಿಕೊಂಡಿದ್ದರು. ಅದನ್ನ ನೋಡಿ ಎಲ್ಲಾ ಹುಡುಗೀರ್ ಸಿಕ್ಕರೆ ಅಮಿತ್‌ನಂತಹ ಹುಡುಗ ಸಿಗಬೇಕು ಅಂತ ತಮ್ಮ ತಮ್ಮ ಮನೆದೇವರಿಗೆ ಬೇಡಿಕೊಂಡಿದ್ದರು. ಆದರೆ, ಎಲ್ಲಾ ಹುಡುಗೀರ್‌ಗೆ ಅಮಿತ್‌ನಂತಹ ಹುಡುಗ ಸಿಗಲ್ಲ. ಎಲ್ಲಾ ಸರಿ ಇದ್ದಾಗಲೇ ಕೆಲವರು ಕೈ ಕೊಟ್ಟು ಹೋಗ್ತಾರೆ. ಅಂತದ್ರಲ್ಲಿ ಎಂಗೇಜ್‌ಮೆಂಟ್‌ಗೂ ಮೊದಲೇ ಎರಡೆರಡು ಭಾರಿ ಆಪರೇಷನ್ ಆಗಿದೆ. ಬದುಕೋದೇ ಕಷ್ಟ ಅಂದರು ಕೂಡ ಜೊತೆಗೆ ನಾನಿದ್ದೀನಿ, ನಾನಿರ್ತೀನಿ ಅಂತ ಧೈಯ ತುಂಬಿ, ಸಾಯುವ ಪಿಂಕಿನಾ ಉಳಿಸಿಕೊಂಡು ಕೊರಳಿಗೆ ತಾಳಿ ಕಟ್ಟುತ್ತಿರುವ ಅಮಿತ್‌ಗೆ ಅಶ್ವಿನಿ ದೇವತೆಗಳು ಅಸ್ತು ಎಂದಿರೋದ್ರಲ್ಲಿ ನೋ ಡೌಟ್ . ಎನಿವೇ, ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ಅಮಿತ್ ಹಾಗೂ ಪಿಂಕಿಗೆ ಒಳ್ಳೆದಾಗಲಿ. ಅವರಿಬ್ಬರ ದಾಂಪತ್ಯ ಜೀವನ ಸುಖಮಯವಾಗಿರಲಿ ಅನ್ನೋದೇ ಎಲ್ಲರ ಆಶಯ.





