ಭಾನುವಾರ, ಜುಲೈ 6, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಮಿಲನಾ ಮುಂದೆ ನಿಂತು ಕದ್ದು ಕದ್ದು ಕೊಡು ಅಂತ ಕೇಳಿದ್ದೇನು ಪೃಥ್ವಿ?

Vishalakshi Pby Vishalakshi P
05/02/2024
in Majja Special
Reading Time: 1 min read
ಮಿಲನಾ ಮುಂದೆ ನಿಂತು ಕದ್ದು ಕದ್ದು  ಕೊಡು ಅಂತ ಕೇಳಿದ್ದೇನು ಪೃಥ್ವಿ?

“ಫಾರ್​ ರಿಜಿಸ್ಟ್ರೇಷನ್”​ ಸ್ಯಾಂಡಲ್​ವುಡ್​ನಲ್ಲಿ ನಾನಾ ವಿಚಾರಗಳಿಂದ ಸದ್ದು ಮಾಡುತ್ತಿರುವ ಹೊಸ ಸಿನಿಮಾ. ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ್‌ ನಟಿಸಿರುವ ಈ ಚಿತ್ರದ ಕದ್ದು ಕದ್ದು ಹಾಡನ್ನು ನಿರ್ದೇಶಕ ಕಂ ನಟರಾಗಿರುವ ಡಾರ್ಲಿಂಗ್ ಕೃಷ್ಣ ರಿಲೀಸ್ ಮಾಡಿ  ಶುಭ ಕೋರಿದ್ದಾರೆ.


ಹಾಡು ಬಿಡುಗಡೆ ಬಳಿಕ ಮಾತನಾಡಿದ ಡಾರ್ಲಿಂಗ್ ಕೃಷ್ಣ, ಬ್ಯೂಟಿಫುಲ್ ಸಾಂಗ್. ನನಗೆ ತುಂಬಾ ಇಷ್ಟವಾಯಿತು. ಮೇಕಿಂಗ್ ವಿಚಾರ ಇರಬಹುದು. ಪೃಥ್ವಿ ಹಾಗೂ ಮಿಲನಾ ಇಬ್ಬರು ತುಂಬಾ ಚೆನ್ನಾಗಿ ಕಾಣಿಸುತ್ತಿದ್ದಾರೆ. ಸಾಂಗ್ ಔಟ್ ಫುಟ್ ಚೆನ್ನಾಗಿ ಬಂದಿದೆ. ಎಲ್ಲಾ ಸಿನಿಮಾಗಳಿಗಿಂತ ಈ ಚಿತ್ರದಲ್ಲಿ ಮಿಲನಾ ತುಂಬಾ ಮುದ್ದಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪೃಥ್ವಿ ವಂಡರ್ ಫುಲ್ ಆಕ್ಟರ್. ಇವರಿಬ್ಬರ ಕಾಂಬಿನೇಷನ್ ಕ್ಲಿಕ್ ಆಗುತ್ತದೆ ಎಂದರು. ನಿರ್ಮಾಪಕರಾದ ನವೀನ್ ರಾವ್ ಮಾತನಾಡಿ, ಈ ಹಾಡು ಮಾಡುವುದು ತುಂಬಾ ಚಾಲೆಂಜಿಂಗ್ ಆಗಿ ಇತ್ತು. ಇರ್ಮಾನ್ ಸರ್ ಅವರನ್ನು ಕನ್ವೆನ್ಸ್ ಮಾಡಿ ಎಲ್ಲೆಲ್ಲೋ ಹೋಗಿ ಬಂದ್ವಿ. ಆ ನಂತರ ಇಲ್ಲೇ ಶೂಟಿಂಗ್ ಮಾಡುವ ಅವಕಾಶ ಸಿಕ್ಕಿತ್ತು. ಇದನ್ನು ಡಿಫರೆಂಟಾಗಿ ಮಾಡಬೇಕು ಎಂದು ಕೇಳಿಕೊಂಡಾಗ ಪ್ಲಾನ್ ಮಾಡಿ ಮಾಡಲಾಯಿತು. ಇಡೀ ಹಾಡಲ್ಲಿ ಪೃಥ್ವಿ ಹಾಗೂ ಮಿಲನಾ ಅಷ್ಟೇ ಕಾಣಬಹುದು. ಆದರೆ ತೆರೆ ಹಿಂದೆ 160 ಜನರ ಪರಿಶ್ರಮವಿದೆ. ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದರು.

ನಿರ್ದೇಶಕ ನವೀನ್ ದ್ವಾರಕನಾಥ್ ಮಾತನಾಡಿ, ಕಾಲೇಜ್ ಸಮಯದಲ್ಲಿ ಹಾಡು ಬರೆಯಲು ಯೋಚನೆ ಮಾಡುತ್ತಿದ್ದೇವು. ಆಗ ಸಮಯದಲ್ಲಿ ಬರೆದ ಹಾಡು ಇದು. ಈಗ ಅದನ್ನು ಬಳಸಿಕೊಂಡಿದ್ದೇವೆ. ನಕುಲ್ ಹಾಡಿಗೆ ಬೇರೆ ಆಯಾಮ ಕೊಟ್ಟಿದ್ದಾರೆ. ಪರ್ಫಾಮೆನ್ಸ್ ವಿಚಾರಕ್ಕೆ ಬಂದರೆ. ಯಾವ ರೀತಿ ಮಾಡುವುದು ಆದಾಗ ಸುಮಾರು ಐಡಿಯಾ ಬಂತು. ಅಂಡರ್ ವಾಟರ್ ಪ್ಲಾನ್ ಮಾಡಿದ್ದು ಇರ್ಮಾನ್ ಸರ್. ಅವರಿಗೆ ಕ್ರೆಡಿಟ್ ಸಲ್ಲಬೇಕು. ಇದೊಂದು ಒಳ್ಳೆ ಅನುಭವ. ಹಾಗೂ ಸಾಹಸ. ಮಿಲನಾ ಮತ್ತು ಪೃಥ್ವಿ ಬೆಂಬಲದಿಂದ ಹಾಡು ಚೆನ್ನಾಗಿ ಬಂದಿದೆ ಎಂದು ತಿಳಿಸಿದರು. ನಟಿ ಮಿಲನಾ ನಾಗರಾಜ್ ಮಾತನಾಡಿ, ನೆಲ ಹಾಗೂ ಸ್ನೊ ಮೇಲೆ ಸಾಂಗ್ ಮಾಡಿದ್ದೇವೆ. ಫೂಲ್ ಒಳಗಡೆ ಸಾಂಗ್ ಎಂದಾಗ ಡಿಫರೆಂಟ್ ಇರುತ್ತದೆ ಅನ್ನೋ ಎಕ್ಸೈಟ್ ಆಯ್ತು. ಆದರೆ ಸಿಕ್ಕ ಪಟ್ಟೆ ಕಷ್ಟವಾಯಿತು. ಕಾಸ್ಟ್ಯೂಮ್ ಹೇವಿ ಅನಿಸುತಿತ್ತು. ನನ್ನ ಇಷ್ಟು ವರ್ಷದ ಕರಿಯರ್ ನಲ್ಲಿ ಶೂಟಿಂಗ್ ಅಂತಾ ಕಷ್ಟಪಟ್ಟ ದಿನ ಅದು. ಅವತ್ತು ಔಟ್ ಫುಟ್ ಬಗ್ಗೆ ಚಿಂತೆ ಹೋಗಿತ್ತು. ಇವತ್ತು ಔಟ್ ಫುಟ್ ನೋಡ್ತಿದ್ದ ವರ್ತ್ ಅನಿಸುತ್ತದೆ. ಆರ್ಟಿಸ್ಟ್ ಎಲ್ಲಾ ಸಾಂಗ್ ಮಾಡುತ್ತಿದ್ದೇವು. ಎಲ್ಲಾ ಸೇಮ್ ಸಾಂಗ್ಸ್ ಮಾಡುತ್ತಿದ್ದೇವು. ಆದರೆ ಇದು ವಿಭಿನ್ನ ಎಂದರು.

ನಟ ಪೃಥ್ವಿ ಅಂಬಾರ್ ಮಾತನಾಡಿ, ಸಾಂಗ್ ತುಂಬಾ ಚೆನ್ನಾಗಿ ಮಾಡಿದ್ದಾರೆ. ನಿರ್ಮಾಪಕರು ಫ್ಯಾಷನೇಟೆಡ್ ಪ್ರೊಡ್ಯೂಸರ್. ಸದಾ ಅಭಿರುಚಿ ಸಿನಿಮಾ ಮಾಡಬೇಕು ಅನ್ನೋದು ನನ್ನ ಆಸೆ. ನವೀನ್ ಸರ್ ಐಟಿ ಬ್ಯಾಕ್ ಡ್ರಾಪ್ ನಿಂದ ಬಂದಿರೋದ್ರಿಂದ ಅವರ ಜೊತೆ ಕೆಲಸ ಮಾಡುವ ಟೈಫ್ ಬೇರೆ ಇದೆ. ಪೂರ್ತಿ ಸಿನಿಮಾ ಎಂಜಾಯ್ ಮಾಡಿಕೊಂಡು ಶೂಟ್ ಮಾಡಿದ್ದೇವೆ. ಕದ್ದು ಕದ್ದು ಹಾಡು ಎಲ್ಲರಿಗೂ ಹಾಡು ಇಷ್ಟವಾಗುತ್ತದೆ ಎಂದರು. ಕದ್ದು ಕದ್ದು ಹಾಡಿಗೆ ನಾಗಾರ್ಜುನ್ ಶರ್ಮಾ ಸಾಹಿತ್ಯ, ಆರ್ ಕೆ ಹರೀಶ್ ಸಂಗೀತ, ನಕುಲ್ ಅಭಯಂಕರ್ ಕಂಠ ಕುಣಿಸಿದ್ದಾರೆ. ಅಂಡರ್ ವಾಟರ್ ನಲ್ಲಿ ಹಾಡು ಮೂಡಿಬಂದಿದ್ದು, ಇರ್ಮಾನ್ ಸರ್ದಾರಿಯಾ ನೃತ್ಯ ಸಂಯೋಜನೆಯಲ್ಲಿ ಪೃಥ್ವಿ ಹಾಗೂ‌ ಮಿಲನಾ ಹೆಜ್ಜೆ ಹಾಕಿದ್ದಾರೆ.

ರವಿಶಂಕರ್‌, ತಬಲಾ ನಾಣಿ, ಸುಧಾ ಬೆಳವಾಡಿ, ಬಾಬು ಹಿರಣಯ್ಯ, ಸ್ವಾತಿ, ರಮೇಶ್‌ ಭಟ್‌, ಉಮೇಶ್‌ ಎಂಬ ದೊಡ್ಡ ತಾರಾ ಬಳಗವೇ ಇದೆ. ಚಿತ್ರದ ಚಿತ್ರಕಥೆ, ನಿರ್ದೇಶನ ದ್ವಾರಕನಾಥ್‌, ಸಂಗೀತ ಸಂಯೋಜನೆ ಆರ್‌.ಕೆ ಹರೀಶ್‌, ಅಭಿಲಾಷ್‌ ಕಲಾತಿ, ಅಭಿಷೇಕ್‌ ಜಿ.ಕಾಸರಗೋಡು ಛಾಯಾಗ್ರಹಣ, ಮನು ಶೇಡ್ಗರ್‌ ಸಂಕಲನ ಚಿತ್ರಕ್ಕಿದೆ. ರಂಗಭೂಮಿ ಹಿನ್ನೆಲೆ ಹಾಗೂ ಸಾಕಷ್ಟು ಕಿರುಚಿತ್ರಗಳನ್ನು ಮಾಡಿ ಅನುಭವ ಹೊಂದಿರುವ ನವೀನ್‌ ದ್ವಾರಕನಾಥ್‌ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು, ನಿಶ್ಚಲ್‌ ಫಿಲಂಸ್‌ ಬ್ಯಾನರ್‌ನಲ್ಲಿ ನವೀನ್‌ ರಾವ್‌ ಬಂಡವಾಳ ಹೂಡಿದ್ದಾರೆ. ಬಹಳ ದಿನಗಳ ನಂತರ ಮತ್ತೆ ವಿತರಣೆ ಅಖಾಡಕ್ಕೆ‌ ಇಳಿದಿರುವ ದೀಪಕ್ ಗಂಗಾಧರ್ ಫಿಲಂಸ್ ಫಾರ್ ರಿಜಿಸ್ಟ್ರೇಷನ್ ಸಿನಿಮಾವನ್ನು ಫೆಬ್ರವರಿ 23ರಂದು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಖಾಕಿ ಖದರ್‌ ತೋರಿಸಲು ಸಜ್ಜಾದ್ರು ಮಾಸ್‌ ಲೀಡರ್‌ ಶಿವಣ್ಣ!

ಖಾಕಿ ಖದರ್‌ ತೋರಿಸಲು ಸಜ್ಜಾದ್ರು ಮಾಸ್‌ ಲೀಡರ್‌ ಶಿವಣ್ಣ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.