ತೇಜ ಸಜ್ಜ…ಈ ಹೀರೋ ಬಗ್ಗೆ ಹೆಚ್ಚು ಇಂಟ್ರುಡಕ್ಷನ್ ಬೇಕಿಲ್ಲ ಅನ್ಸುತ್ತೆ. ಯಾಕಂದ್ರೆ, ತೆಲುಗು ಹೀರೋ ತೇಜ ಸಜ್ಜ ಈಗ ಬರೀ ಟಿಟೌನ್ ಪ್ರೇಕ್ಷಕರ ನಾಯಕನಾಗಿ ಉಳಿದಿಲ್ಲ ಬದಲಾಗಿ ಪ್ಯಾನ್ ಇಂಡಿಯಾ ಸಿನಿಪ್ರೇಮಿಗಳಿಗೆಲ್ಲಾ ಚಿರಪರಿಚಿತರಾಗಿದ್ದಾರೆ. ʻಹನುಮಾನ್ʼ ಸಿನಿಮಾದಿಂದ ಸೆನ್ಸೇಷನಲ್ ಹೀರೋ ಆಗಿ ಗುರ್ತಿಸಿಕೊಂಡಿದ್ದಾರೆ. ಇದೀಗ ಕೆಲ ಸೂಪರ್ ಸ್ಟಾರ್ಗಳನ್ನ ಸರಿಗಟ್ಟೋ ಮೂಲಕ ಸುದ್ದಿಯಾಗಿದ್ದಾರೆ.
ಹೌದು, ಟಾಲಿವುಡ್ ನ ಯುವನಟ ತೇಜ ಸಜ್ಜಾ, ದಕ್ಷಿಣದ ಕೆಲ ಸ್ಟಾರ್ ನಟರನ್ನ ಹಿಂದಿಕ್ಕಿದ್ದಾರೆ. ವಿಕ್ಕಿಪೀಡಿಯಾದಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳ ಪೈಕಿ ತೇಜ ಟಾಪ್ನಲ್ಲಿದ್ದಾರೆ. ಬಹುಭಾಷಾ ನಟ ಕಮಲ್ ಹಾಸನ್, ವಿಜಯ್, ಮಹೇಶ್ ಬಾಬು, ಪ್ರಭಾಸ್ ಟಾಪ್ 5 ಲಿಸ್ಟ್ನಲ್ಲಿದ್ದರೆ, ಮೆಗಾಸ್ಟಾರ್ ಚಿರಂಜೀವಿ, ಮಮ್ಮೂಟಿ, ಧನುಷ್, ಪೃಥ್ವಿರಾಜ್ ಸುಕುಮಾರನ್, ನಾನಿ ಟಾಪ್ 10 ಪಟ್ಟಿ ಸೇರಿಕೊಂಡಿದ್ದಾರೆ. ಅಚ್ಚರಿ ಅಂದರೆ ಬಹುತೇಕ ಈ ಎಲ್ಲಾ ಸೆಲೆಬ್ರಿಟಿಗಳ ಸಿನಿಮಾದಲ್ಲಿ ನಟ ತೇಜ ಬಾಲನಟನಾಗಿ ಮಿಂಚಿದ್ದರು. ಇದೀಗ ಅವರೆಲ್ಲರನ್ನೂ ಹಿಂದಿಕ್ಕಿದ್ದಾರೆ. ಜನವರಿ ತಿಂಗಳಲ್ಲಿ ಜನರು ಅತೀ ಹೆಚ್ಚು ಹುಡುಕಲ್ಪಟ್ಟ ಸೌತ್ ಸ್ಟಾರ್ ಎನ್ನುವ ಖ್ಯಾತಿಗೆ ಭಾಜನರಾಗಿದ್ದಾರೆ. ಅಂದ್ಹಾಗೇ, ಒಬ್ಬ ಯುವನಟನಿಗೆ ಇದು ಗ್ರೇಟ್ ಅಚೀವ್ಮೆಂಟೇ ಸರೀ
ಅಷ್ಟಕ್ಕೂ, ನಟ ತೇಜಗೆ ಇಂತಹ ಜನಪ್ರಿಯತೆ ರಾತ್ರೋರಾತ್ರಿ ಸಿಕ್ಕಿದ್ದಲ್ಲ. ಕಳೆದ 26 ವರ್ಷಗಳಿಂದ ಸಿನಿಮಾರಂಗದಲ್ಲಿದ್ದಾರೆ. ಎರಡನೇ ವಯಸ್ಸಿಗೆ ಬಣ್ಣ ಹಚ್ಚಿ ಬಾಲನಟನಾಗಿ ಮಿಂಚಿದ ತೇಜ, ಚಿರಂಜೀವಿ, ವೆಂಕಟೇಶ್, ಪ್ರಭಾಸ್, ಮಹೇಶ್ ಬಾಬು, ಅಲ್ಲು ಅರ್ಜುನ್ , ಪವನ್ ಕಲ್ಯಾಣ್, ಜೂನಿಯರ್ ಎನ್ಟಿಆರ್ ಸಿನಿಮಾಗಳಲ್ಲಿ ಚೈಲ್ಟ್ ಆರ್ಟಿಸ್ಟ್ ಆಗಿ ನಟಿಸಿದ್ದಾರೆ. Choodalani Vundi ಚಿತ್ರದಿಂದ ಶುರುವಾದ ಸಿನಿಜರ್ನಿ ಈಗ ಹನುಮಾನ್ವರೆಗೂ ಬಂದು ನಿಂತಿದೆ. ಬಾಲನಟನಾಗಿ ಕರಿಯರ್ ಶುರು ಮಾಡಿ ಸಪೋರ್ಟಿಂಗ್ ಕ್ಯಾರೆಕ್ಟರ್ಗೆ ಬಣ್ಣ ಹಚ್ಚಿ, Zombie Reddy ಚಿತ್ರದಿಂದ ಹೀರೋ ಆದ ತೇಜ ಸಜ್ಜಾ, ಹನುಮಾನ್ ಚಿತ್ರದಿಂದ ಸಂಚಲನ ಮೂಡಿಸಿದ್ದಾರೆ. ಲೀಡ್ ಹೀರೋ ಆಗಿ ನಟಿಸಿದ ಮೂರನೇ ಸಿನಿಮಾದಲ್ಲೇ ತನ್ನ ತಾಕತ್ತೇನು ಅನ್ನೋದನ್ನ ಪ್ರೂ ಮಾಡಿದ್ದಾರೆ. ಇದೀಗ ಯುವನಟ ತೇಜ ಬರೀ ನಟನಲ್ಲ ಬದಲಾಗಿ ಸೆನ್ಸೇಷನಲ್ ಸ್ಟಾರ್ ಅಂದರೆ ಬಹುಷಃ ತಪ್ಪಾಗಲಿಕ್ಕಿಲ್ಲ.
ಇನ್ನೂ ಹನುಮಾನ್ ಚಿತ್ರಕ್ಕೆ ಬರೋದಾದರೆ, ತೇಜ ಸಜ್ಜಾ ಹಾಗೂ ಪ್ರಶಾಂತ್ ವರ್ಮಾ ಕಾಂಬಿನೇಷನ್ನಲ್ಲಿ ಬಂದಂತಹ ಒಂದು ಅಮೋಘ ಚಿತ್ರ ಹನುಮಾನ್. ಮಾರುತಿಯ ಕೃಪಕಟಾಕ್ಷದೊಂದಿಗೆ ಸೂಪರ್ ಹೀರೋ ಚಿತ್ರ ತೆರೆಗೆ ತಂದು ಸಿನಿಮಾ ಪ್ರೇಮಿಗಳಿಂದ ಸೈ ಎನಿಸಿಕೊಂಡ ಈ ಜೋಡಿ, ಸಂಕ್ರಾಂತಿ ಸಮರದಲ್ಲಿ ಸ್ಟಾರ್ ಹೀರೋ ಸಿನಿಮಾಗಳ ಜೊತೆ ಪೈಪೋಟಿ ನಡೆಸಿ ಗೆಲುವಿನ ಗದ್ದುಗೆ ಏರಿಕುಳಿತರು. 40 ಕೋಟಿ ಖರ್ಚು ಮಾಡಿ ಪಿಕ್ಚರ್ ತೆಗೆದು 300 ಕೋಟಿ ಕಮಾಯಿ ಮಾಡುವ ಮೂಲಕ ಗಲ್ಲಾಪೆಟ್ಟಿಗೆನಾ ಶೇಕ್ ಮಾಡಿದರು. ವರ್ಷದ ಆರಂಭದಲ್ಲಿ ಬಾಕ್ಸ್ ಆಫೀಸ್ನಲ್ಲಿ ಬಂಗಾರದಂತಹ ಬೆಳೆ ಬೆಳೆದರು. ಇದೇ ಹುತ್ಸಾಹದಲ್ಲಿ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ದಿನ ʻಜೈ ಹನುಮಾನ್ʼ ಅಂತ ಹನುಮಾನ್ ಸೀಕ್ವೆಲ್ ಘೋಷಣೆ ಮಾಡಿದರು. ಇದೀಗ ಇಡೀ ಪ್ಯಾನ್ ಇಂಡಿಯಾ ಹನುಮಾನ್ ಪಾರ್ಟ್2 ಗಾಗಿ ಎದುರು ನೋಡ್ತಿದೆ.