ತೆಲುಗು ಚಿತ್ರರಂಗದ ತಾರಾಜೋಡಿಗಳ ಪೈಕಿ ಸಮಂತಾ ಹಾಗೂ ಅಕ್ಕಿನೇನಿ ನಾಗಚೈತನ್ಯ ಜೋಡಿ ಕೂಡ ಒಂದಾಗಿತ್ತು. ಆದರೆ, ಅದ್ಯಾವ ಕೆಟ್ಟ ಕಣ್ಣು ಈ ದಂಪತಿ ಮೇಲೆ ಬಿತ್ತೋ ಏನೋ ಗೊತ್ತಿಲ್ಲ. ಪರಸ್ಪರ ಪ್ರೀತಿಸಿ ಬಾಳಪಯಣದಲ್ಲಿ ಒಂದಾಗಿದ್ದ ಈ ಕ್ಯೂಟ್ ಕಪಲ್ಸ್, ನಾಲ್ಕೇ ವರ್ಷಕ್ಕೆ ತಮ್ಮ ದಾಂಪತ್ಯ ಜೀವನಕ್ಕೆ ಎಳ್ಳುನೀರು ಬಿಟ್ಟಿದ್ದಾರೆ. ಆದರೆ, ಇವರಿಬ್ಬರ ಫ್ಯಾನ್ಸ್ ಮಾತ್ರ ಈ ಕ್ಷಣಕ್ಕೂ ಸ್ಯಾಮ್-ಚೈ ಒಂದಾಗ್ಬೇಕು ಎನ್ನುವ ಕನಸು ಕಾಣ್ತಿದ್ದಾರೆ. ಆ ಕನಸು ಈಡೇರುತ್ತೋ ಇಲ್ಲವೋ ಗೊತ್ತಿಲ್ಲ. ಬಟ್, ತೆರೆಮೇಲೆ ಈ ಜೋಡಿನಾ ಮತ್ತೆ ಒಂದು ಮಾಡುವ ಪ್ರಯತ್ನವಂತೂ ಸಾಗ್ತಿದೆ.
ಹೌದು, ನಿರ್ದೇಶಕ ವಿಕ್ರಮ್ ಸ್ಯಾಮ್ ಹಾಗೂ ಚೈನಾ ಆನ್‌ಸ್ಕ್ರೀನ್ ಮೇಲೆ ಜೋಡಿ ಮಾಡೋದಕ್ಕೆ ಹೊರಟಿದ್ದಾರಂತೆ. ನಾಗಚೈತನ್ಯರನ್ನ ಹಾಕ್ಕೊಂಡು ಧೂತ ಅನ್ನೋ ವೆಬ್ ಸಿರೀಸ್ ಮಾಡಿ ಗೆಲವು ಕಂಡಿರೋ ವಿಕ್ರಮ್, ಧೂತ ಭಾಗ-2 ನಲ್ಲಿ ಚೈತನ್ಯ ಜೊತೆ ಸಮಂತಾರನ್ನ ಕರೆತರಬೇಕು ಅಂತ ನಿರ್ಧರಿಸಿದ್ದಾರಂತೆ. ಈ ಬಗ್ಗೆ ಸುದ್ದಿಯೊಂದು ಟಿಟೌನ್ ಫಿಲ್ಮ್ ನಗರದಲ್ಲಿ ಹರಿದಾಡುತ್ತಿದ್ದು, ಸೋಷಿಯಲ್ ಮೀಡಿಯಾ ಮೂಲಕ ಸುದ್ದಿ ಪ್ಯಾನ್ ಇಂಡಿಯಾ ತಲುಪಿದೆ.
ಈ ಹಿಂದೆ ವಿಕ್ರಮ್ ನಾಗಚೈತನ್ಯ ಮತ್ತು ಸಮಂತಾನ ಜೋಡಿ ಮಾಡಿ ʻಮನಂʼ ಪಿಕ್ಚರ್ ತೆಗೆದಿದ್ದರು. ಅನಂತರ ಒಟ್ಟಾಗಿ ಸಿನಿಮಾ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಇದೀಗ, ವೆಬ್ ಸಿರೀಸ್ ಮೂಲಕ ಕ್ಯೂಟ್ ಜೋಡಿನಾ ಒಂದು ಮಾಡಬೇಕು ಎನ್ನುವ ಪ್ರಯತ್ನಲ್ಲಿದ್ದಾರೆ. ಅವರ ಪ್ರಯತ್ನ ಫಲಿಸುತ್ತಾ? ನಾನೊಂದು ತೀರಾ, ನೀನೊಂದು ತೀರಾ ಅಂತ ಹೃದಯ ಭಾರ ಮಾಡಿಕೊಂಡು ವಿರಹಗೀತೆ ಆಡ್ತಿರೋ ಸಮಂತಾ ಹಾಗೂ ನಾಗ ಚೈತನ್ಯ, ವೈವಾಹಿಕ ಬದುಕಿನ ಮನಸ್ತಾಪ ಮರೆತು ಒಟ್ಟಿಗೆ ನಟಿಸ್ತಾರಾ? ಧೂತ ಮೂಲಕ ಧಾಮ್ ಧೂಮ್ ಅಂತ ಮೆರವಣಿಗೆ ಹೊರಡ್ತಾರಾ ಕಾದುನೋಡಬೇಕು.