ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್. ಈ ಚಿತ್ರಕ್ಕಾಗಿ ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವರ್ಲ್ಡ್ ಎದುರುನೋಡ್ತಿದೆ. ಟಾಕ್ಸಿಕ್ ಚಿತ್ರದ ಒಂದೊಂದೆ ಅಪ್‌ಡೇಟ್‌ಗಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತಿದೆ. ಹೀಗಿರುವಾಗ ಸಿನಿದುನಿಯಾದಲ್ಲಿ ಗಾಳಿಸುದ್ದಿಯೊಂದು ತೇಲಿಬಂದಿತ್ತು. ಬಾಲಿವುಡ್ ಬಾದ್ ಷಾ ಟಾಕ್ಸಿಕ್ ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಾರೆನ್ನುವ ಸುದ್ದಿ ಕೇಳಿಬಂದಿತ್ತು. ಇದಕ್ಕೀಗ ಸ್ವತಃ ಮಾನ್‌ಸ್ಟರ್ ಯಶ್ ಉತ್ತರ ಕೊಟ್ಟಿದ್ದಾರೆ.
‘ಟಾಕ್ಸಿಕ್’ ಶೂಟಿಂಗ್ ಸದ್ಯದಲ್ಲೇ ಶುರುವಾಗಲಿದೆ. ದೊಡ್ಡ ಮಟ್ಟದ ಪ್ಲಾನ್ ನಡೀತಿದೆ. ‘ಟಾಕ್ಸಿಕ್’ ಚಿತ್ರದ ಬಗ್ಗೆ ಯಾವುದೇ ಕಾಂಪ್ರಮೈಸ್ ಇಲ್ಲದೇ ಮಾಡುತ್ತಿರುವ ಸಿನಿಮಾ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡ್ತೇವೆ. ಅಂದ್ಹಾಗೇ, ಟಾಕ್ಸಿಕ್ ಚಿತ್ರದಲ್ಲಿ ಕಿಂಗ್ ಖಾನ್ ಶಾರುಖ್ ನಟಿಸ್ತಾರೆನ್ನುವ ಸುದ್ದಿ ಸುಳ್ಳು. ಹಾಗೇನಾದ್ರೂ ಇದ್ದರೆ ನಾವೇ ತಿಳಿಸ್ತೇವೆ ಎಂದಿದ್ದಾರೆ ನಟ ಯಶ್
ಇನ್ನೂ ಕನ್ನಡ ಸಿನಿಮಾರಂಗವನ್ನು ಪರಭಾಷಿಗರು ನೋಡುತ್ತಿರುವ ರೀತಿ ಬಗ್ಗೆ ಯಶ್ ಪ್ರತಿಕ್ರಿಯಿಸಿ, ಹೌದು ಇಂದು ಬೇರೇ ಚಿತ್ರರಂಗದವರು ನಮ್ಮನ್ನು ನೋಡುವ ರೀತಿ ಬದಲಾಗಿದೆ. ನನ್ನಿಂದ ಕನ್ನಡ ಚಿತ್ರರಂಗ ಅಲ್ಲ. ಚಿತ್ರರಂಗಕ್ಕಾಗಿ ನಾನು ಏನು ಮಾಡ್ಬೇಕು ಅಂತಾ ಸದಾ ಯೋಚನೆ ಮಾಡ್ತಿದ್ದೀನಿ. ಹೊಸ ಹೀರೋಗಳಿಗೆ ಬೆಂಬಲಿಸಿ. 4 ಜನ ಹೀರೋಗಳಿಗಷ್ಟೇ ಸಿನಿಮಾ ಮಾಡಿ ಅಂತಾ ಹೇಳೋದಲ್ಲ. ಮಾಡಿರುವ ಸಿನಿಮಾಗಳೆಲ್ಲ ಹಿಟ್ ಆಗಲ್ಲ. ಬರುತ್ತಿರುವ ಸಿನಿಮಾಗಳಿಗೆ ಸಪೋರ್ಟ್ ಮಾಡಿ ಎಂದು ಯಶ್ ಹೇಳಿದ್ದಾರೆ. ಚಾನಲ್ ಸ್ಯಾಟಲೈಟ್ ರೈಟ್ಸ್ ತಗೋಬೇಕು. ಆಗ ಸಿನಿಮಾಗಳ ಸಂಖ್ಯೆ ಜಾಸ್ತಿ ಆಗುತ್ತದೆ. ಚಿತ್ರರಂಗದವರು ನೆಗೆಟಿವ್ ಆಗಿ ಥಿಂಕ್ ಮಾಡಬೇಡಿ. ಪ್ರಶಾಂತ್ ನೀಲ್ ‘ಉಗ್ರಂ’ ಸಿನಿಮಾ ಮಾಡಿದಾಗ ಯಾರೂ ಸ್ಯಾಟಲೈಟ್ ರೈಟ್ಸ್ ತೆಗೆದುಕೊಂಡಿಲ್ಲ. ರಿಲೀಸ್ ಆದ್ಮೇಲೆ ಎಲ್ಲಾ ಆ ಚಿತ್ರದ ಮಾತನಾಡಿದ್ದರು. ಪ್ರತಿಭೆ ಇರೋರನ್ನು ಬೆಳೆಸಿ, ಹೊಸಬರ ಸಿನಿಮಾಗಳಿಗೂ ಪ್ರೋತ್ಸಾಹ ನೀಡಿ ಎಂದು ಯಶ್ ಮನವಿ ಮಾಡಿದ್ದಾರೆ.
ಅಂದ್ಹಾಗೇ, ಟಾಕ್ಸಿಕ್ ಚಿತ್ರದ ನಿರೀಕ್ಷೆ ಬೆಟ್ಟದಷ್ಟಲ್ಲ ಸಾಗರ ಸಮುದ್ರದಷ್ಟಿದೆ. ಮಲಯಾಳಂನ ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ ಡೈರೆಕ್ಷನ್‌ನಲ್ಲಿ ಟಾಕ್ಸಿಕ್ ಚಿತ್ರ ಮೂಡಿಬರುತ್ತಿದೆ. ಸಿನಿಮಾ ಶೀರ್ಷಿಕೆ ಘೋಷಣೆಯ ಟೀಸರ್ ಹೊರತುಪಡಿಸಿ ಮತ್ಯಾವ ಪಟವೂ ಟಾಕ್ಸಿಕ್ ಅಂಗಳದಿಂದ ಹೊರಬಿದ್ದಿಲ್ಲ. ಚಿತ್ರಕ್ಕೆ ಯಾರೆಲ್ಲಾ ವರ್ಕ್ ಮಾಡ್ತಿದ್ದಾರೆ. ಚಿತ್ರದ ತಾರಾಬಳಗದಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವ ಕುತೂಹಲಕ್ಕೆ ಟಾಕ್ಸಿಕ್ ಟೀಮ್ ಬ್ರೇಕ್ ಹಾಕಿಲ್ಲ. ಹೀಗಾಗಿ, ಚಿತ್ರದ ಮೇಲೆ ಕುತೂಹಲ ಹೆಚ್ಚೇಯಿದೆ. ಡ್ರಗ್ ಮಾಫಿಯಾ ಕುರಿತಾದ ಟಾಕ್ಸಿಕ್‌ಗಾಗಿ ಪ್ಯಾನ್ ವರ್ಲ್ಡ್ ಕೂಡ ಎದುರುನೋಡ್ತಿದೆ. ಕೆವಿಎನ್ ಸಂಸ್ಥೆ ಹಾಗೂ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ಅದ್ದೂರಿಯಾಗಿ ಮೂಡಿಬರಲಿದೆ.