ದಕ್ಷಿಣ ಭಾರತದ ಜನಪ್ರಿಯ ನಟಿ, ಲೇಡಿ ಸೂಪರ್ ಸ್ಟಾರ್ ಅಂತಾನೇ ಕರೆಸಿಕೊಳ್ಳುವ ನಯನತಾರಾ ಮತ್ತೆ ಸುದ್ದಿಯಲ್ಲಿದ್ದಾರೆ. ಪತಿ ವಿಘ್ನೇಶ್ ಶಿವನ್‌ಗೆ ಬಿಗ್ ಶಾಕ್ ನೀಡಿದ್ದಾರೆನ್ನುವ ವಿಚಾರಕ್ಕೆ ಗಾಸಿಪ್ ಲೋಕಕ್ಕೆ ಎಂಟ್ರಿಕೊಟ್ಟಿದ್ದಾರೆ. ಅಷ್ಟಕ್ಕೂ, ಏನದು ಶಾಕ್ ಅಂತೀರಾ ಹೇಳ್ತೀವಿ ಕೇಳಿ. ನಟಿ ನಯನತಾರಾ ಬಹುಬೇಡಿಕೆಯ ನಟಿ. ಅಟ್ ದಿ ಸೇಮ್ ಟೈಮ್ ಕಾಸ್ಟ್ಲೀಯಸ್ಟ್ ಬ್ಯೂಟಿ ಕೂಡ ಹೌದು. ಒಂದು ಪಿಕ್ಚರ್‌ಗೆ 10 ಕೋಟಿಗಿಂತ ಅಧಿಕ ಸಂಭಾವನೆ ಪಡೆಯೋ ದರ್ಬಾರ್ ಹೀರೋಯಿನ್, ಪತಿ ನಿರ್ಮಾಣದ ಸಿನಿಮಾಗೆ ಸಂಭಾವನೆ ಕಡಿಮೆ ಎನ್ನುವ ವಿಚಾರಕ್ಕೆ ಚಿತ್ರ ರಿಜೆಕ್ಟ್ ಮಾಡಿದ್ದಾರಂತೆ. ಸದ್ಯ, ಹೀಗೊಂದು ಸುದ್ದಿ ಕಾಲಿವುಡ್ ಅಂಗಳದಿಂದ ಹೊರಟು ಕರುನಾಡಿನ ಗಾಂಧಿನಗರವನ್ನೂ ಮುಟ್ಟಿದೆ.
ಅಷ್ಟಕ್ಕೂ, ಯಾವ್ ಸಿನಿಮಾ? ಏನ್ ಕಥೆ ಅನ್ನೋದನ್ನ ನೋಡೋದಾದರೆ ಆ ಸಿನಿಮಾದ ಹೆಸರು ಎಲ್‌ಐಸಿ. ಈಗಾಗಲೇ ಶೀರ್ಷಿಕೆ ವಿಚಾರಕ್ಕೆ ಈ ಚಿತ್ರ ಸುದ್ದಿಯಾಗಿದ್ದಲ್ಲದೇ, ಕಾಂಟ್ರವರ್ಸಿಗೆ ಕೂಡ ಗುರಿಯಾಗಿತ್ತು. ಲೈಫ್ ಇನ್ಶೂರೆನ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಟೈಟಲ್ ವಿರುದ್ದ ಗುಡುಗಿ ಸಿನಿಮಾ ತಂಡಕ್ಕೆ ನೋಟಿಸ್ ಜಾರಿಮಾಡಿತ್ತು. ಆ ಶಾಕ್‌ನಿಂದ ಫಿಲ್ಮ್ ಟೀಮ್ ಹೊರಬರುವಷ್ಟರಲ್ಲಿ ಲೇಡಿ ಸೂಪರ್ ಸ್ಟಾರ್ ಬಿಗ್ ಶಾಕ್ ಕೊಟ್ಟಿದ್ದಾರೆ. ಕಡಿಮೆ ಸಂಭಾವನೆಗೆ ಬಣ್ಣ ಹಚ್ಚೋಕೆ ರೆಡಿಯಿಲ್ಲವೆಂದು ಎಲ್‌ಐಸಿ ಟೀಮ್‌ಗೆ ಗುಡ್ ಬೈ ಹೇಳಿದ್ದಾರಂತೆ. ಅಷ್ಟಕ್ಕೂ ಈ ಸುದ್ದಿ ಎಷ್ಟು ನಿಜಾನೋ? ಸುಳ್ಳೋ ಗೊತ್ತಿಲ್ಲ. ಆದರೆ, ಪತಿಗೆ ಬಿಗ್ ಶಾಕ್ ಕೊಟ್ಟಿದ್ದಾರೆನ್ನುವುದು ಮಾತ್ರ ಸೌತ್ ಸಿನಿದುನಿಯಾದಲ್ಲಿ ಜೋರಾಗಿ ಸುದ್ದಿಯಾಗ್ತಿದೆ. ಇದಕ್ಕೆ, ರೈಟರ್, ಡೈರೆಕ್ಟರ್, ಆಕ್ಟರ್ ಕಮ್ ಪ್ರೊಡ್ಯೂಸರ್ ಆಗಿರುವ ವಿಘ್ನೇಶ್ ಶಿವನ್ ಏನೆಂದು ಉತ್ತರ ಕೊಡ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.
ಅಚ್ಚರಿ ಅಂದರೆ ಮದುವೆಯಾದ್ಮೇಲೆ ಕೆಲ ನಟಿಮಣಿಯರು ಡಿಮ್ಯಾಂಡ್ ಕಳೆದುಕೊಳ್ತಾರೆ. ಆದರೆ, ಸೂಪರ್ ಚೆಲುವೆಗೆ ಬೇಡಿಕೆ ಕಮ್ಮಿಯಾಗಿಲ್ಲ. ಎರಡು ದಶಕಗಳ ಕಾಲ ಬೆಳ್ಳಿತೆರೆಯನ್ನಾಳಿರುವ ಬಿಗಿಲ್ ಬ್ಯೂಟಿ, ಈಗಲೂ ಸಿಲ್ವರ್ ಸ್ಕ್ರೀನ್ ಮೇಲೆ ಲೀಡ್ ಹೀರೋಯಿನ್ನಾಗಿ ಮಿಂಚ್ತಿದ್ದಾರೆ. ಜವಾನ್ ನಂತರ ಬಿಟೌನ್‌ನಿಂದಲೂ ಬುಲಾವ್ ಬರ್ತಿದ್ದು, ಸದ್ಯ ತಮಿಳಿನ ಎರಡು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ಲಾಮರಸ್ ಪಾತ್ರಗಳ ಜೊತೆ ಮಹಿಳಾಪ್ರಧಾನ ಸಿನಿಮಾಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿರೋ ಅಣ್ಣಾತೆ ನಾಯಕಿಗೆ ನಿರ್ದೇಶಕಿಯಾಗಿ ಕಣಕ್ಕಿಳಿಯೋ ಕನಸಿದೆಯಂತೆ. ಈ ಬಗ್ಗೆ ಇತ್ತೀಚೆಗೆ ಸುದ್ದಿಯೊಂದು ಹೊರಬಿದ್ದಿತ್ತು. ಸ್ವತಃ ನಯನ್ ಕೂಡ ಡೈರೆಕ್ಷನ್‌ಗೆ ಎಂಟ್ರಿಕೊಡಲು ಸಜ್ಜಾಗ್ತಿರುವಂತಹ ಫೋಟೋವೊಂದನ್ನ ಹಂಚಿಕೊಂಡಿದ್ದರು. ಅಷ್ಟಕ್ಕೂ ಡೈರೆಕ್ಷನ್ ಚಿತ್ರ ಎಲ್ಲಿಗೆ ಬಂತು? ಏನಾಯ್ತು ಅನ್ನೋದನ್ನ ಲೇಡಿ ಸೂಪರ್ ಸ್ಟಾರ್ ಹೇಳೋವರೆಗೂ ಕಣ್ಣರಳಿಸಿ ಕಾಯಬೇಕಷ್ಟೇ.