ದಕ್ಷಿಣ ಭಾರತೀಯ ಚಿತ್ರರಂಗದ ದೃಶ್ಯಬ್ರಹ್ಮ ಜಕ್ಕಣ್ಣ ಹಾಗೂ ಟಿಟೌನ್ ಸೂಪರ್ ಸ್ಟಾರ್ ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಸಿನಿಮಾ ಬರುತ್ತೆ ಅನ್ನೋದು ಎರಡು ವರ್ಷದ ಹಳೆಯ ಸುದ್ದಿ. ಬಟ್, ಸುದ್ದಿ ಹಳೆತಾದರೇನಂತೆ ಇವರಿಬ್ಬರ ಜುಗಲ್ ಬಂದಿಯಲ್ಲಿ ಬರಲಿರೋ ಪಿಕ್ಚರ್‌ಗಾಗಿ ಇಡೀ ಚಿತ್ರಜಗತ್ತೇ ಕಣ್ಣರಳಿಸಿ ಕಾಯ್ತಿದೆ. ಒಂದೇ ಒಂದು ಅಪ್‌ಡೇಟ್‌ಗಾಗಿ ಚಾತಕ ಪಕ್ಷಿಯಂತೆ ಕನವರಿಸುತ್ತಿದೆ. ಹೀಗಿರುವಾಗಲೇ ಮೌಳಿ ಹಾಗೂ ಮಹರ್ಷಿ ಕಾಂಬೋದಲ್ಲಿ ಬರ್ತಿರೋ ಸಿನಿಮಾದ ಟೈಟಲ್ ಬಗ್ಗೆ ಅಪ್‌ಡೇಟ್‌ವೊಂದು ಹೊರಬಿದ್ದಿದೆ. ತೆಲುಗು ಫಿಲ್ಮ್ ನಗರದಲ್ಲಿ ಹರಿದಾಡ್ತಿರೋ ಹರಿದಾಡ್ತಿರೋ ಸುದ್ದಿ ಪ್ರಕಾರ ಜಕ್ಕಣ್ಣ ಎರಡು ಟೈಟಲ್‌ಗಳನ್ನ ಫೈನಲ್ ಮಾಡಿದ್ದಾರಂತೆ. ಅದರಲ್ಲಿ ಒಂದನ್ನ ಫಿಕ್ಸ್ ಮಾಡಿ ಶೀಘ್ರದಲ್ಲೇ ಅದ್ದೂರಿಯಾಗಿ ಮುಹೂರ್ತ ನೆರವೇರಿಸಲಿದ್ದಾರಂತೆ.
ಅಷ್ಟಕ್ಕೂ, ಆ ಟೈಟಲ್‌ಗಳು ಯಾವ್ಯಾವುದು ಅಂತೀರಾ? ಒಂದು ಮಹರಾಜ್, ಇನ್ನೊಂದು ಚಕ್ರವರ್ತಿ. ಯಸ್, ಈ ಎರಡು ಶೀರ್ಷಿಕೆಗಳನ್ನೇ ಜಕ್ಕಣ್ಣ ಅಲಿಯಾಸ್ ಎಸ್ ಎಸ್ ರಾಜಮೌಳಿ ಫೈನಲ್ ಮಾಡಿರೋದು. ಅಂದ್ಹಾಗೇ, ಈ ಎರಡರಲ್ಲಿ ಯಾವ ಟೈಟಲಾದ್ರೂ ಪ್ರಿನ್ಸ್ ಮಹೇಶ್ ಬಾಬುಗೆ ಪಕ್ಕಾ ಸ್ಯೂಟ್ ಆಗುತ್ತೆ. ಹಿಂದ್ಯಾರು ತೋರಿಸಿರದ ಲೆವೆಲ್‌ಗೆ ಮಹರ್ಷಿನಾ ತೋರಿಸಬೇಕು ಅಂತ ಹೊರಟಿರೋ ದಿ ಗ್ರೇಟ್ ವಿಷನರಿ ಡೈರೆಕ್ಟರ್ ಎಸ್ ಎಸ್ ರಾಜಮೌಳಿ, 1000 ಕೋಟಿ ಬಜೆಟ್‌ನಲ್ಲಿ ಚಿತ್ರ ನಿರ್ಮಿಸಲು ಮುಂದಾಗಿದ್ದಾರಂತೆ. ಇಲ್ಲಿವರೆಗೂ ಇಷ್ಟೊಂದು ದುಬಾರಿ ಬಜೆಟ್‌ನಲ್ಲಿ ಯಾವೊಂದು ಇಂಡಿಯನ್ ಸಿನಿಮಾವೂ ನಿರ್ಮಾಣಗೊಂಡಿಲ್ಲ. ಇದೇ ಮೊದಲ ಭಾರಿಗೆ ಒಂದು ಸಾವಿರ ಕೋಟಿ ವೆಚ್ಚದಲ್ಲಿ ಮೌಳಿ ಹಾಗೂ ಮಹರ್ಷಿ ಜುಗಲ್ ಬಂದಿ ಚಿತ್ರ ತಯಾರಾಗ್ತಿದೆ.
ಅಂದ್ಹಾಗೇ, ಈ ಚಿತ್ರಕ್ಕೆ ಕಥೆ ಬರೆದಿರೋದು ಹೆಸರಾಂತ ಬರಹಗಾರರು ಹಾಗೂ ಮೌಳಿಯವರು ತಂದೆಯವರಾದ ವಿಜಯೇಂದ್ರ ಪ್ರಸಾದ್ ಅವರು. ಯಸ್, ಈಗಾಗಲೇ ಮಗನ ಸಿನಿಮಾಗಳಿಗೆ ಕಥೆ ಬರೆದುಕೊಟ್ಟು ಇಡೀ ಜಗತ್ತೇ ಹಿಂತಿರುಗಿ ನೋಡುವಂತೆ ಮಾಡಿರೋ ಮೌಳಿ ಫಾದರ್ ಈಗ ಮಹರ್ಷಿ ಸಿನಿಮಾಗೂ ಕಥೆ ಕೆತ್ತಿಕೊಟ್ಟಿದ್ದಾರೆ. ಆಫ್ರಿಕನ್ ಜಂಗಲ್ ಬ್ಯಾಕ್‌ಡ್ರಾಪ್‌ನಲ್ಲಿ ಸಿನಿಮಾ ಮೂಡಿಬರಲಿದ್ದು, ಇಂಡಿಯನ್ ಮೈಥಾಲಾಜಿನಾ ಬ್ಲೆಂಡ್ ಮಾಡಲಿದ್ದಾರಂತೆ. ಗ್ಲೋಬಲ್ ಟೆಕ್ನಾಲಜಿನ ಬಳಸಿಕೊಂಡು ಇಡೀ ಜಗತ್ತು ಬೆರಗುಗಣ್ಣಿನಿಂದ ನೋಡುವಂತಹ ಸಿನ್ಮಾ ಕಟ್ಟಿಕೊಡುವುದಕ್ಕೆ ಬಾಹುಬಲಿ ಸಾರಥಿ ಸಜ್ಜಾಗಿದ್ದಾರಂತೆ. ಹಿಂದ್ಯಾರು ಹೇಳಿರದ ಶೈಲಿಯಲ್ಲಿ ಸ್ಟೋರಿ ಟೆಲ್ಲಿಂಗ್ ಇರಲಿದ್ದು, ಈಗಾಗಲೇ ಪ್ರಿನ್ಸ್ ಜರ್ಮನಿಯಲ್ಲಿ ಬೀಡುಬಿಟ್ಟು ಪಾತ್ರಕ್ಕೋಸ್ಕರ ತಯ್ಯಾರಿ ನಡೆಸಿದ್ದಾರಂತೆ. ಒಟ್ನಲ್ಲಿ ಶ್ರೀಮಂತುಡು ಜೊತೆ ಆರ್ ಆರ್ ಆರ್ ಸಾರಥಿಯ ಸಿನಿಮಾ ಶ್ರೀಮಂತವಾಗಿ ಮೂಡಿಬರಲಿದ್ದು, ಸದ್ಯ `SSMB29′ ಹೆಸರಲ್ಲಿ ಕರೆಯಲಾಗ್ತಿದೆ. ಶೀಘ್ರದಲ್ಲೇ ಅಖಾಡಕ್ಕೆ ಇಳಿಯಲು ಚಿತ್ರತಂಡ ಸರ್ವರೀತಿಯಲ್ಲೂ ಸನ್ನದ್ದಗೊಳ್ಳುತ್ತಿದೆ.