ಗುರುವಾರ, ಜುಲೈ 3, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ವಿಮಾನ ದುರಂತದಿಂದ ಪಾರಾದ ಮಾರ್ಟಿನ್‌ ಟೀಂ… ಪುನರ್ಜನ್ಮ ಎಂದು ಟ್ವೀಟ್ ಮಾಡಿದ ಧ್ರುವ!

Vishalakshi Pby Vishalakshi P
20/02/2024
in Majja Special
Reading Time: 2 mins read
ವಿಮಾನ ದುರಂತದಿಂದ ಪಾರಾದ ಮಾರ್ಟಿನ್‌ ಟೀಂ… ಪುನರ್ಜನ್ಮ ಎಂದು ಟ್ವೀಟ್ ಮಾಡಿದ ಧ್ರುವ!

ಸ್ಯಾಂಡಲ್‌ವುಡ್‌ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಂಡ್‌ ಮಾರ್ಟಿನ್‌ ಟೀಮ್‌ ವಿಮಾನ ದುರಂತದಿಂದ ಪಾರಾಗಿದ್ದಾರೆ. ಕೂದಲೆಳೆ ಅಂತರದಲ್ಲಿ ಬಚಾವ್‌ ಆಗಿರೋ ಫಿಲ್ಮ್‌ ಟೀಮ್‌ ವಿಡಿಯೋ ಮಾಡಿ ಹಂಚಿಕೊಂಡಿದೆ. ನಟ ಧ್ರುವ ಸರ್ಜಾ ಟ್ವೀಟ್‌ ಮಾಡಿ ಇದು ಪುನರ್ಜನ್ಮ ಎಂದಿದ್ದಾರೆ.

 

View this post on Instagram

 

A post shared by Dhruva Sarja (@dhruva_sarjaa)

ನಿಮ್ಮೆಲ್ಲರಿಗೂ ಗೊತ್ತಿರೋ ಮಾರ್ಟಿನ್‌ ನಟ ಧ್ರುವ ಸರ್ಜಾ ಅಭಿನಯದ ಮೋಸ್ಟ್‌ ಎಕ್ಸ್‌ಪೆಕ್ಟೆಡ್‌ ಸಿನಿಮಾ. ಅದ್ದೂರಿ ಹೀರೋ ನಟನೆಯ ಮೊದಲ ಪ್ಯಾನ್‌ ಇಂಡಿಯಾ ಚಿತ್ರ ಇದಾಗಿದ್ದು, ಮಾರ್ಟಿನ್‌ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿದೆ. ಈ ಸಿನಿಮಾದ ಸಾಂಗ್‌ ಶೂಟಿಂಗ್‌ಗಾಗಿ ಫಿಲ್ಮ್‌ ಟೀಮ್‌ ದೆಹಲಿ ವಿಮಾನ ನಿಲ್ದಾಣದಿಂದ ಫ್ಲೈಟ್‌ ಏರಿ ಶ್ರೀನಗರ ಕಡೆ ಪಯಣ ಬೆಳೆಸಿದಿದೆ. ಈ ವೇಳೆ ಹವಾಮಾನ ವೈಪರೀತ್ಯದಿಂದ ಫ್ಲೈಟ್‌ ಲ್ಯಾಂಡಿಂಗ್‌ ಮಾಡಲು ಪೈಲಟ್‌ ಪರದಾಡಿದ್ದಾರೆ. ಸೀಟ್‍ಗಳು ನಡುಗಿದೆ, ಪ್ರಯಾಣಿಕರು ಗಾಬರಿ ಆಗಿದ್ದಾರೆ. ಕೊನೆಗೆ ಪೈಲಟ್‍ನ ಸಮಯ ಪ್ರಜ್ಞೆಯಿಂದ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಘಟನೆಯ ಬಳಿಕ ಮಾರ್ಟಿನ್ ಚಿತ್ರತಂಡವು ವಿಮಾನ ಇಳಿಯುವ ಸಂದರ್ಭದಲ್ಲಿಯೇ ವೀಡಿಯೋ ಮಾಡಿಕೊಂಡು ವಿಮಾನದಲ್ಲಿ ಎದುರಾಗಿದ್ದ ಕೆಟ್ಟ ಸಂದರ್ಭವನ್ನು ವಿವರಿಸಿ ಮರು ಜನ್ಮ ಸಿಕ್ಕಿದೆ ಎಂದಿದೆ.

ನನ್ನ ಜೀವಮಾನದಲ್ಲಿಯೇ ವಿಮಾನದಲ್ಲಿ ಮೊದಲ ಬಾರಿ ಅತ್ಯಂತ ಕೆಟ್ಟ ಅನುಭವವಾಯಿತು. ಸದ್ಯ ನಾವು ಸುರಕ್ಷಿತವಾಗಿದ್ದೇವೆ. ಥ್ಯಾಂಕ್ ಗಾಡ್, ಜೈ ಆಂಜನೇಯ ಎಂದು ಧ್ರುವ ಸರ್ಜಾ ಹೇಳಿದ್ದು, ಇದಕ್ಕೆ ಮಾರ್ಟಿನ್‌ ತಂಡವೂ ದನಿಗೂಡಿಸಿದೆ. ಈ ವಿಡಿಯೋದಲ್ಲಿ ಚಿತ್ರದ ನಿರ್ದೇಶಕ ಎ ಪಿ ಅರ್ಜುನ್, ನಾಯಕ ನಟಿ ಅನ್ವೇಶಿ ಜೈನ್, ನೃತ್ಯ ಸಂಯೋಜಕ ಇಮ್ರಾನ್ ಸರ್ಧಾರಿಯಾ ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಇದ್ದಾರೆ. ಈ ಬಗ್ಗೆ ನಟ ಧ್ರುವ ಸರ್ಜಾ ಸಹ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮೊದಲ ಬಾರಿಗೆ ಸಾವನ್ನು ಎದುರಿಸಿ ಮತ್ತೆ ಜೀವ ಸಿಕ್ಕಂತಾಗಿದೆ. ಇದು ನನ್ನ ತಂದೆ ತಾಯಿಯರ, ನನ್ನ ವಿಐಪಿಗಳ ಮತ್ತು ನನ್ನ ದೇವರು ಚಿರು ಅಣ್ಣನ ಅವರ ಸಂಪೂರ್ಣ ಆಶೀರ್ವಾದದ ಫಲ. ಇದು ಪುನರ್ಜನ್ಮವಾಗಿದೆ. ನಮಗೆಲ್ಲರಿಗೂ ಜೀವನವನ್ನು ಪೂರ್ಣವಾಗಿ ಬದುಕಲು ಅವಕಾಶ ಮತ್ತೆ ಸಿಕ್ಕಿದೆ. ಜೈ ಆಂಜನೇಯ ಎಂದು ಧ್ರುವ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಪೋಸ್ಟ್ ಮಾಡಿದ್ದಾರೆ.

ಈ ಘಟನೆ ಸಂಭವಿಸಿದ ಬೆನ್ನಲ್ಲೇ ಧ್ರುವ ಸರ್ಜಾ ಅಭಿಮಾನಿಗಳಿ ನಟಿ ಮೇಘನಾ ರಾಜ್‌ ಅಪ್‌ಡೇಟ್ ನೀಡಿದ್ದಾರೆ. ಈಗಷ್ಟೇ ಧ್ರುವ ಬಳಿ ಮಾತನಾಡಿದೆ. ಅವರು ಸೇಫ್ ಆಗಿದ್ದಾರೆ.ದೈವಿಕ ಶಕ್ತಿಗಳಿಗೆ ಧನ್ಯವಾದಗಳು ಎಂದು ಮೇಘನಾ ರಾಜ್‌ ತಿಳಿಸಿದ್ದಾರೆ. ನಟಿಯ ಮಾತು ಕೇಳಿ ಫ್ಯಾನ್ಸ್‌ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಖ್ಯಾತ ನಿರ್ದೇಶಕಿ ಅಂಜಲಿ‌ ಮೆನನ್ ಜತೆ ಕೆ ಆರ್ ಜಿ ಸ್ಟುಡಿಯೋಸ್ ಸಹಯೋಗ!

ಖ್ಯಾತ ನಿರ್ದೇಶಕಿ ಅಂಜಲಿ‌ ಮೆನನ್ ಜತೆ ಕೆ ಆರ್ ಜಿ ಸ್ಟುಡಿಯೋಸ್ ಸಹಯೋಗ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.