ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ನಡುವಿದ್ದ ಬಾಂದವ್ಯ ಮುರಿದುಬಿದ್ದಿರೋದು ನಿಮಗೆಲ್ಲ ಗೊತ್ತಿರೋದೆ. ರಾಬರ್ಟ್ ಚಿತ್ರದಿಂದ ಶುರುವಾದ ಗೆಳೆತನ ಆ ಸಿನಿಮಾ ನಂತರ ಕೊನೆಗೊಂಡಿತು. ಸಹೋದರರಂತಿದ್ದ ಇವರಿಬ್ಬರ ನಡುವೆ ಬಿರುಗಾಳಿ ಎದ್ದಿತು. ಅಷ್ಟಕ್ಕೂ, ಯಾವ್ಯಾವ ಘಟನೆಯಿಂದ ವೈಮನಸ್ಸು ಉಂಟಾಯ್ತು? ಯಾರ್ಯಾರು ಕಡ್ಡಿಗೀರಿದ್ದರಿಂದ ಇಬ್ಬರ ನಡುವೆ ಬೆಂಕಿ ಹೊತ್ತಿಕೊಳ್ತು ಗೊತ್ತಿಲ್ಲ. ಆದರೆ, ಜಿದ್ದಿಗೆ ಬಿದ್ದಂತೆ ಕಾದಾಡೋ ಥರ ವಾತಾವರಣವಂತೂ ಸೃಷ್ಟಿಯಾಗಿದ್ದಂತೂ ಸುಳ್ಳಲ್ಲ. ಅಷ್ಟಕ್ಕೂ, ಹೀಗ್ಯಾಕೆ ಮತ್ತೆ ಈ ವಿಚಾರ ಪ್ರಸ್ತಾಪ ಮಾಡ್ತಿದ್ದೇವೆ ಅಂದರೆ ರಾಬರ್ಟ್ ಪ್ರೊಡ್ಯೂಸರ್‌ಗೆ ದರ್ಶನ್ ವಾರ್ನಿಂಗ್ ಕೊಟ್ಟಿದ್ದಾರೆ. ಕಾಟೇರ ಟೈಟಲ್ ನಾನು ಕೊಟ್ಟಿದ್ದು ಅಂತ ಹೇಳಿಕೊಂಡು ಬಂದಂತಹ ನಿರ್ಮಾಪಕ ಉಮಾಪತಿಯವರಿಗೆ ದಚ್ಚು ಕೌಂಟರ್ ಕೊಡುವ ಕೆಲಸ ಮಾಡಿದ್ದಾರೆ.
ಹೌದು, ʻಕಾಟೇರʼ ಸಿನಿಮಾದ 50 ಡೇಸ್ ಸೆಲೆಬ್ರೇಷನ್ ವೇಳೆ ದರ್ಶನ್ ಗರಂ ಆಗಿದ್ದರು. ಕಾಟೇರ ಟೈಟಲ್ ನಾನು ಕೊಟ್ಟಿದ್ದು, ಕಥೆ ನಾನು ಮಾಡಿಸಿದ್ದು ಅಂತ ಉಮಾಪತಿಯವರು ಕೆಲವು ಕಡೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಇದಕ್ಕೆ ತಿರುಗೇಟು ನೀಡಿದ ದಚ್ಚು, ಅಯ್ಯೋ ತಗಡೇ, ರಾಬರ್ಟ್ ಕಥೆ ನಿನಗೆ ಕೊಟ್ಟಿದ್ದು ನಾವು! ಕೊಟ್ಟಿದ್ದು, ಮಾಡಿದ್ದು ಹೇಳಬಾರದು. ಒಂದ್ಸಲ ಆಗಿರೋದ್ರಿಂದ ಬುದ್ಧಿ ಕಲಿತಿಲ್ಲ. ನಿನ್ನ ಜಡ್ಜ್‌ಮೆಂಟ್ ಚೆನ್ನಾಗಿದೆ. ಟೈಟಲ್ ನೀನು ಕೊಟ್ಟಿದ್ದು, ಕಥೆ ನೀನು ಮಾಡಿಸಿದ್ದು ಆದರೆ ಮತ್ಯಾಕ್ ಕೈ ಬಿಟ್ಟೆ. ಅಷ್ಟಕ್ಕೂ, ಈ ಟೈಟಲ್ ಕೊಟ್ಟಿದ್ದು ನಾನು, ರಿಜಿಸ್ಟರ್ ಮಾಡಿಸೋಕೆ ತರುಣ್‌ಗೆ ಹೇಳಿದ್ದು ನಾನೇ. ಎಲ್ಲ ಆಧಾರ ಇಟ್ಟುಕೊಂಡೇ ಮಾತನಾಡಬೇಕುʼʼ ಹೀಗನ್ನುತ್ತಾ ವೇದಿಕೆ ಮೇಲೆ ಅಯೋಗ್ಯ ಸಿನಿಮಾ ಖ್ಯಾತಿಯ ನಿರ್ದೇಶಕ ಮಹೇಶ್ ಹಾಗೂ ತರುಣ್ ಇಬ್ಬರನ್ನೂ ವೇದಿಕೆ ಮೇಲೆ ಕರೆಸಿ ಕಾಟೇರ ಟೈಟಲ್ ಯಾರು ಕೊಟ್ಟಿದ್ದು ಅನ್ನೋದಕ್ಕೆ ಕ್ಲ್ಯಾರಿಟಿ ಕೊಡಿಸಿದರು. ಇದೇ ವೇಳೆ ಮಾತು ಮುಂದುವರೆಸಿದ ದರ್ಶನ್ ಅವರು ಉಮಾಪತಿಗೆ ʻಯಾಕಪ್ಪ ಬಂದೂ ಬಂದು ಗುಮ್ಮಿಸ್ಕೋತಿಯಾʼʼ. ಎಲ್ಲೋ ಇದ್ದೀಯಾ ಅಲ್ಲೇ ಚೆನ್ನಾಗಿರು ಎಂದರು. ಇದಕ್ಕೆ ನಿರ್ಮಾಪಕ ಉಮಾಪತಿಯವರು ಯಾವ್ ರೀತಿ ರಿಯಾಕ್ಟ್ ಆಗ್ತಾರೆ ಅನ್ನೋದನ್ನ ಕಾದುನೋಡಬೇಕು.