ಭಾನುವಾರ, ಜುಲೈ 6, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಪ್ರಚಾರದ ಅಖಾಡದಲ್ಲಿ ಸೂರಿ ಶಿಷ್ಯನ ಸಿನಿಮಾ…ಸೋಮು ಸೌಂಡ್ ಇಂಜಿನಿಯರ್ ಎರಡನೇ ಹಾಡು ರಿಲೀಸ್!

Vishalakshi Pby Vishalakshi P
26/02/2024
in Majja Special
Reading Time: 1 min read
ಪ್ರಚಾರದ ಅಖಾಡದಲ್ಲಿ ಸೂರಿ ಶಿಷ್ಯನ ಸಿನಿಮಾ…ಸೋಮು ಸೌಂಡ್ ಇಂಜಿನಿಯರ್ ಎರಡನೇ ಹಾಡು ರಿಲೀಸ್!

ನಿರ್ದೇಶಕ ಸುಕ್ಕ ಸೂರಿ ಗರಡಿಯಲ್ಲಿ ಪಳಗಿರುವ ಅಭಿ ಚೊಚ್ಚಲ ಪ್ರಯತ್ನವೀಗ ಬಿಡುಗಡೆ ಹೊಸ್ತಿಲಿನಲ್ಲಿ‌ ನಿಂತಿದೆ.‌ ಮಾರ್ಚ್ 15ಕ್ಕೆ ರಾಜ್ಯಾದ್ಯಂತ ಸೌಂಡ್ ಮಾಡಲು‌ ಸೋಮು ಬರ್ತಿದ್ದಾರೆ. ಅಭಿ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶಿರುವ ಸೋಮು ಸೌಂಡ್ ಇಂಜಿನಿಯರ್ ಈಗಾಗಲೇ ಟೀಸರ್ ಮೂಲಕ ಕುತೂಹಲ ಗರಿಗೆದರುವಂತೆ ಮಾಡಿದ್ದಾರೆ. ಇದೀಗ ಸೋಮು ಅಂಗಳದಿಂದ ಮನಮೋಹಕ ಗೀತೆಯೊಂದು ತೇಲಿ ಬಂದಿದೆ.

ಧನಂಜಯ್ ರಂಜನ್ ಸಾಹಿತ್ಯದ ಛಂದಸ್ಸಿನ ಚೆಂದದಲ್ಲಿ ಎಂಬ ಪ್ರೇಮಗೀತೆ ಎ2 ಮ್ಯೂಸಿಕ್ ನಲ್ಲಿ ಅನಾವರಣಗೊಂಡಿದೆ. ಸಿದ್ದಾರ್ಥ್ ಬೆಳ್ಮಣ್ಣು ಹಾಗೂ ಮೇಘನಾ ಭಟ್ ಕಂಠಸಿರಿಯಲ್ಲಿ ಹಾಡು ಮೋಹಕವಾಗಿ ಮೂಡಿಬಂದಿದೆ. ಚರಣ್ ರಾಜ್ಯ ಸಂಗೀತ, ಶಿವ ಸೇನಾ ಛಾಯಾಗ್ರಹಣ ಛಂದಸ್ಸಿನ ಚೆಂದವಳ್ಳಿ ಗೀತೆಯ ಶ್ರೀಮಂತಿಕೆ ಹೆಚ್ಚಿಸಿದೆ. ಈ ಹಾಡಿನಲ್ಲಿ ನಾಯಕ ಶ್ರೇಷ್ಠ ಹಾಗೂ ನಾಯಕಿ‌ ನಿವಿಷ್ಕಾ ಪಾಟೀಲ್ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಮೆಲುವಾದ ಸಾಹಿತ್ಯ, ಸಂಗೀತದ‌ ಮಿಳಿತದೊಂದಿಗೆ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಿದೆ.

ಸಲಗ ಸಿನಿಮಾದಲ್ಲಿ ‘ಕೆಂಡ’ ಪಾತ್ರದಲ್ಲಿ ಮಿಂಚಿದ್ದ ಶ್ರೇಷ್ಠ ಈ ಸಿನಿಮಾದಲ್ಲಿ ನಾಯಕನಾಗಿದ್ದಾನೆ. ಬೆಳಗಾವಿ ಚೆಲುವೆ ನಿವಿಷ್ಕಾ ಪಾಟೀಲ್ ನಾಯಕಿಯಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪಾಪ ಪಾಂಡು ಖ್ಯಾತಿಯ ಜಹಾಂಗೀರ್, ಅಪೂರ್ವ, ಯಶ್ ಶೆಟ್ಟಿ ಅವರುಗಳು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವೈದ್ಯಕೀಯ ಹಿನ್ನೆಲೆಯುಳ್ಳ ಕ್ರಿಸ್ಟೋಪರ್ ಕಿಣಿ ಚಿತ್ರಕ್ಕೆ ಶಕ್ತಿಯಾಗಿ ನಿಂತಿದ್ದಾರೆ. ಸೋಮು ಸೌಂಡ್ ಇಂಜಿನಿಯರ್ ಹಿಂದೆ ಒಳ್ಳೆ ಟೆಕ್ನಿಷಿಯನ್ಸ್‌ಗಳ ತಂಡವೇ ಇದೆ. ಚರಣ್ ರಾಜ್ ಸಂಗೀತ ಕೊಟ್ಟಿದ್ದಾರೆ. ಮಾಸ್ತಿ ಡೈಲಾಗ್ ಬರೆದುಕೊಟ್ಟಿದ್ದಾರೆ. ದೀಪು ಎಸ್.ಕುಮಾರ್ ಸಂಕಲನ ಮಾಡಿದ್ದಾರೆ.

‘ಸೋಮು ಸೌಂಡ್‌ ಇಂಜಿನಿಯರ್‌’ ಪಕ್ಕಾ ಹಳ್ಳಿ ಕಥೆ. ಅದರಲ್ಲಿಯೂ ಉತ್ತರ ಕರ್ನಾಟಕದ ಹಳ್ಳಿಯೊಂದರಲ್ಲಿ ನಡೆಯುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾವನ್ನು ಇಳಕಲ್‌, ಗಂಜಿಹಾಳ, ಕೂಡಲ ಸಂಗಮಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಉತ್ತರ ಕರ್ನಾಟಕ ಭಾಗದ ಸಂಸ್ಕೃತಿ, ಭಾಷೆ, ಉತ್ತರ ಕರ್ನಾಟಕದ ಜವಾರಿ ಸಂಗೀತ, ಸ್ಥಳೀಯ ಹಾಡುಗಳು ಜತೆಗೆ ಸ್ಥಳೀಯರನ್ನೇ ಬಳಸಿಕೊಂಡು ಸಿನಿಮಾ ಮಾಡಲಾಗಿದೆ. ಸೆನ್ಸಾರ್ ಪಾಸಾಗಿರುವ ಸೋಮು ಮಾರ್ಚ್ 15ಕ್ಕೆ ತೆರೆಗೆಯಲ್ಲಿ ಸೌಂಡ್‌ ಮಾಡಲಿದ್ದಾನೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಅಸಿಸ್ಟೆಂಟ್ ಡೈರೆಕ್ಟರ್ಸ್ ಕೈಯಲ್ಲಿ ‘ಜುಗಲ್ ಬಂದಿ’ಟ್ರೇಲರ್ ಅನಾವರಣ! 

ಅಸಿಸ್ಟೆಂಟ್ ಡೈರೆಕ್ಟರ್ಸ್ ಕೈಯಲ್ಲಿ ‘ಜುಗಲ್ ಬಂದಿ’ಟ್ರೇಲರ್ ಅನಾವರಣ! 

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.