ಬಾಲಿವುಡ್‌ನ ಸ್ಟಾರ್ ಕಪಲ್ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ತಾವಿಬ್ಬರು ಪೋಷಕರಾಗ್ತಿರುವ ಸಂಗತಿಯನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಮುದ್ದು ಕಂದನ ಆಗಮನದ ಸುದ್ದಿಯನ್ನ ಖಚಿತಪಡಿಸಿದ್ದಾರೆ.
ಯಸ್, ಇಂದು ಬೆಳಗ್ಗೆ ರಣವೀರ್ ಹಾಗೂ ದೀಪಿಕಾ ಇಬ್ಬರು ಕೂಡ ತಂದೆ-ತಾಯಿಯಾಗ್ತಿರುವ ಖುಷಿಯನ್ನ ತಮ್ಮ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ. ಸೆಪ್ಟೆಂಬರ್‌ನಲ್ಲಿ ಮನೆಗೆ ಮಗು ಬರುವ ವಿಚಾರವನ್ನ ಕೂಡ ತಿಳಿಸಿದ್ದಾರೆ. ಹೀಗಾಗಿ, ಇವರಿಬ್ಬರ ಫ್ಯಾನ್ಸ್ ಫುಲ್ ಖುಷಿಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ಶುಭಾಷಯ ಕೋರುತ್ತಿದ್ದಾರೆ. ಇತ್ತ ಸೆಲೆಬ್ರಿಟಿಗಳು ಕೂಡ ರಾಮ್-ಲೀಲಾ ಜೋಡಿಗೆ ಕಂಗ್ರ್ಯಾಟ್ಸ್ ಹೇಳ್ತಿದ್ದಾರೆ.
ನಿಮಗೆಲ್ಲ ಗೊತ್ತಿರೋ ಹಾಗೇ ರಣವೀರ್-ದೀಪಿಕಾ ಪ್ರೀತಿಸಿ ಮದುವೆಯಾದವರು. ರಾಮ್‌ಲೀಲಾ, ಬಾಜೀರಾವ್ ಮಸ್ತಾನಿ, ಪದ್ಮಾವತ್ ನಂತಹ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾಗಳಲ್ಲಿ ಜೋಡಿಯಾಗಿ ದಿ ಬೆಸ್ಟ್ ಪೇರ್ ಎನಿಸಿಕೊಂಡ ಈ ಕ್ಯೂಟ್ ಕಪಲ್ಸ್, ರಿಯಲ್ ಲೈಫ್‌ನಲ್ಲೂ ಜೋಡಿಯಾದರು. 2018ರಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದ ಈ ಜೋಡಿ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಮುದ್ದು ಕಂದಮ್ಮನ ಆಗಮನಕ್ಕಾಗಿ ಆಸೆಯ ಕಣ್‌ಗಳಿಂದ ಎದುರುನೋಡ್ತಿದೆ. ಅಂದ್ಹಾಗೇ, ಇಬ್ಬರ ಮನೆಯಲ್ಲೂ ಸಂತಸ-ಸಂಭ್ರಮ ಮನೆಮಾಡಿದ್ದು, ರಾಮ್-ಲೀಲಾ ಮಗುನಾ ಬಾಚಿ ತಬ್ಬಿಕೊಳ್ಳುವುದಕ್ಕೆ, ತೊಟ್ಟಿಲು ಕಟ್ಟಿ ತೂಗೋದಕ್ಕೆ, ಜೋಗುಳ ಹಾಡೋದಕ್ಕೆ ಕಾತುರವಾಗಿದೆ.