ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ, ಕಾಲಿವುಡ್ ಸೂಪರ್ ಸ್ಟಾರ್ ಧನುಷ್‌ನ ಕೈ ಹಿಡಿದು ಎಳೆದೊಯ್ದಿರುವ ದೃಶ್ಯವೊಂದು ವೈರಲ್ ಆಗ್ತಿದೆ. ಇಬ್ಬರು ಕೂಡಿ ಒಟ್ಟಿಗೆ ಸಿನಿಮಾ ಮಾಡ್ತಿದ್ದು ಆ ಚಿತ್ರದ ದೃಶ್ಯ ಇದಾಗಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಟ್ರೆಂಡಿಂಗ್‌ನಲ್ಲಿದೆ.
#DNS / #D51 – Currently Shoot Happening in Hyderabad With #Dhanush & #RashmikaMandanna ..💥pic.twitter.com/tLGO9V2CXl
— Rashmika Bangladeshi Fc ♥️ (@rashmikafansbd) February 26, 2024
ಕನ್ನಡತಿ ರಶ್ಮಿಕಾ ಈಗ ಬಹುಬೇಡಿಕೆಯ ನಟಿಮಣಿ ಅನ್ನೋದು ನಿಮಗೆಲ್ಲ ಗೊತ್ತೆಯಿದೆ. ಟಾಲಿವುಡ್, ಕಾಲಿವುಡ್, ಬಾಲಿವುಡ್ ಅಂಗಳದಲ್ಲಿ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರ ಜೊತೆ ಸಾನ್ವಿ ತೆರೆಹಂಚಿಕೊಳ್ಳುತ್ತಿದ್ದು ಇದೀಗ ಧನುಷ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಶೇಖರ್ ಕಮ್ಮುಲ ನಿರ್ದೇಶನದ ಸಿನಿಮಾದಲ್ಲಿ ಶ್ರೀವಲ್ಲಿ ಹಾಗೂ ಧನುಷ್ ಜೋಡಿಯಾಗಿದ್ದು ಶೂಟಿಂಗ್ ಭರದಿಂದ ಸಾಗಿದೆ. ಚಿತ್ರೀಕರಣದ ವೇಳೆ ಯಾರೋ ಅಭಿಮಾನಿಗಳು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಸೆರೆಹಿಡಿದು ಹಂಚಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯ ವೈರಲ್ ಆಗ್ತಿದೆ. ಅಂದ್ಹಾಗೇ, ಇದು ಧನುಷ್ ನಟನೆಯ 51ನೇ ಸಿನಿಮಾ.
ಇದೇ ಮೊದಲ ಬಾರಿಗೆ ಧನುಷ್ ಮತ್ತು ರಶ್ಮಿಕಾ ಮಂದಣ್ಣ ಒಟ್ಟಾಗಿ ಸಿನಿಮಾ ಮಾಡ್ತಿದ್ದಾರೆ. ಶ್ರೀವೆಂಕಟೇಶ್ವರ ಸಿನಿಮಾಸ್ ಮತ್ತು ಒಮಿಗೋಸ್ ಕ್ರಿಯೇಷನ್ಸ್ ಬ್ಯಾನರ್ ಮೂಲಕ ಈ ಚಿತ್ರ ನಿರ್ಮಾಣ ಆಗ್ತಿದೆ. ಧನುಷ್ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಹೊರತುಪಡಿಸಿ ಬೇರೆ ಯಾವೆಲ್ಲ ಕಲಾವಿದರು ನಟಿಸುತ್ತಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ತಾಂತ್ರಿಕ ವರ್ಗದ ಬಗ್ಗೆಯೂ ಹೆಚ್ಚಿನ ಮಾಹಿತಿ ಹೊರಬರುವುದು ಬಾಕಿ ಇದೆ. ವರದಿಯ ಪ್ರಕಾರ ಇದೊಂದು ರಾಜಕೀಯ ವಸ್ತುವುಳ್ಳ ಕತೆಯಾಗಿದ್ದು, ರಾಜಕೀಯ ಕುತಂತ್ರಗಳನ್ನು ಸಾಮಾನ್ಯ ವ್ಯಕ್ತಿಯೊಬ್ಬ ಹೇಗೆ ಎದುರಿಸುತ್ತಾನೆ, ರಾಜಕೀಯದ ದೌರ್ಜನ್ಯಕ್ಕೆ ಹೇಗೆ ತುತ್ತಾಗುತ್ತಾನೆ ಅದರಿಂದ ಹೊರಗೆ ಹೇಗೆ ಬರುತ್ತಾನೆ ಎಂಬ ಕತೆಯನ್ನು ಈ ಸಿನಿಮಾ ಒಳಗೊಂಡಿದೆ ಎನ್ನಲಾಗಿದೆ.