ಟಿಟೌನ್ ಕಿಸ್ಸಿಂಗ್ ಸ್ಟಾರ್, ವರ್ಲ್ಡ್ ಫೇಮಸ್ ಲವ್ವರ್ ವಿಜಯ್ ಬಳಿ ಸೀತರಾಮಂ ಚೆಲುವೆ ಡ್ರಾಪ್ ಕೇಳಿ ಸುದ್ದಿಯಲ್ಲಿದ್ದಾರೆ. ನಾನು ಕಾಲೇಜ್‌ಗೆ ಹೋಗಬೇಕು, ಸ್ವಲ್ಪ ಡ್ರಾಪ್ ಮಾಡೋದಕ್ಕೆ ಆಗುತ್ತಾ ಅಂತ ಕೇಳಿದ ಸೆಲ್ಫಿ ಸುಂದರಿಗೆ ವಿಜಯ್ ಒಂದು ಲೀಟರ್ ಪೆಟ್ರೋಲ್ ಹಾಕ್ಸುವಂತೆ ಕೇಳಿದ್ದಾರೆ. ಅಷ್ಟಕ್ಕೂ, ಈ ಸೀನ್ ಕ್ರಿಯೇಟ್ ಆಗಿದ್ದು ರೀಲ್‌ಗಾಗಿ ಅದು ಫ್ಯಾಮಿಲಿ ಸ್ಟಾರ್ ಸಿನಿಮಾಗಾಗಿ ಅನ್ನೋದು ಗಮನಿಸಬೇಕಾದ ವಿಷಯ
ಯಸ್, ಫ್ಯಾಮಿಲಿ ಸ್ಟಾರ್…. ವಿಜಯ್ ದೇವರಕೊಂಡ ಹಾಗೂ ಮೃಣಾಲ್ ಠಾಕೂರ್ ಕಾಂಬಿನೇಷನ್‌ನಲ್ಲಿ ಬರ್ತಿರೋ ಚಿತ್ರ. ಈ ಕ್ಯೂಟ್ ಜೋಡಿಯಾ ಕೆಮಿಸ್ಟ್ರಿನಾ ಕಣ್ತುಂಬಿಕೊಳ್ಳೋದಕ್ಕೆ ಇಬ್ಬರ ಫ್ಯಾನ್ಸ್ ಪ್ಲಸ್ ಸಿನಿಮಾ ಪ್ರೇಮಿಗಳು ಕಾತುರರಾಗಿದ್ದಾರೆ. ಈಗಾಗಲೇ ಹಾಡುಗಳ ಮೂಲಕ ಈ ಜೋಡಿ ನೋಡುಗರ ಮನಸೂರೆಗೊಂಡಿದೆ. ನಿನ್ನೆಯಷ್ಟೇ ಚಿತ್ರದ ಟೀಸರ್ ಆಗಿದ್ದು, ವಿಜಯ್ ಹಾಗೂ ಮೃಣಾಲ್ ಜುಗಲ್‌ಬಂದಿಯ ಒಂದೇ ಒಂದು ಸೀನ್ ಹೊರಬಿದ್ದಿದೆ. ಆ ಸೀನ್‌ನಲ್ಲಿ ಮೃಣಾಲ್ ಡ್ರಾಪ್ ಕೇಳಿದ್ದು, ರಾಮ್ ಪಾತ್ರಧಾರಿ ವಿಜಯ್ ಒಂದು ಲೀಟರ್ ಪೆಟ್ರೋಲ್ ಹಾಕಿಸುವಂತೆ ಡಿಮ್ಯಾಂಡ್ ಮಾಡಿದ್ದಾರೆ.
ಇಲ್ಲಿತನಕ ಕಿಸ್ಸಿಂಗ್ ಸ್ಟಾರ್ ಆಗಿ, ವರ್ಲ್ಡ್ ಫೇಮಸ್ ಲವ್ವರ್ ಆಗಿ, ಮಾಸ್ ಹೀರೋ ಆಗಿ ಮಿಂಚಿರೋ ವಿಜಯ್ ದೇವರಕೊಂಡ ಈ ಭಾರಿ ಫ್ಯಾಮಿಲಿ ಮ್ಯಾನ್ ಆಗಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಸದ್ಯ ರಿಲೀಸ್ ಆಗಿರೋ ಟೀಸರ್‌ನಲ್ಲಿ ರೌಡಿಬಾಯ್ ವಿಜಯ್ ಆಲ್‌ರೌಂಡರ್ ಫ್ಯಾಮಿಲಿ ಮ್ಯಾನ್ ಆಗಿ ಮಿಂಚಿ ಸಿನಿಮಾಪ್ರೇಮಿಗಳಿಂದ ಸೈ ಎನಿಸಿಕೊಳ್ತಿದ್ದಾರೆ. ಇಲ್ಲಿ ವಿಜಯ್ ರಾಮ ಹೆಸರಿನ ಕ್ಯಾರೆಕ್ಟರ್ ಪ್ಲೇ ಮಾಡಿದ್ದು, ಟೀಸರ್‌ನಲ್ಲಿ ರಾಮ ಲೈಫ್‌ನ ಎಕ್ಸ್‌ಪ್ಲೋರ್ ಮಾಡಲಾಗಿದೆ. ಪರಶುರಾಮ್ ನಿರ್ದೇಶನ, ಗೋಪಿಸುಂದರ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ದಿಲ್ ರಾಜು ಬಂಡವಾಳ ಹೂಡಿದ್ದಾರೆ. ಇದೇ ಏಪ್ರಿಲ್ 05ರಂದು ವರ್ಲ್ಡ್‌ವೈಡ್ ಈ ಚಿತ್ರ ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ರಿಲೀಸ್ ಆಗ್ತಿದೆ.