ಅತಿಲೋಕ ಸುಂದರಿಯ ಪುತ್ರಿ, ಬಾಲಿವುಡ್ ಬ್ಯೂಟಿ ಜಾಹ್ನವಿ ಕಪೂರ್‌ಗೆ (Janhvi Kapoor) ಟಿಟೌನ್ ಚೆರ್ರಿ(ramcharan) ಜೊತೆ ರೊಮ್ಯಾನ್ಸ್ ಮಾಡುವ ಅವಕಾಶ ಸಿಕ್ಕಿದೆ. ಯಂಗ್ ಟೈಗರ್ ಜೂನಿಯರ್ ಎನ್‌ಟಿಆರ್ (N. T. Rama Rao Jr.) ಜೊತೆಯಾಗಿ ದಿಬ್ಬಣ ಹೊರಡುವ ಮೊದಲೇ, ಮೆಗಾ ಪ್ರಿನ್ಸ್ ಜೊತೆ ಮೆರವಣಿಗೆ ಹೊರಡುವ ಸುವರ್ಣಾವಕಾಶ ದಕ್ಕಿದೆ. ಅಷ್ಟಕ್ಕೂ, ಇಂತಹ ಗೋಲ್ಡನ್ ಆಪರ್ಚುನಿಟಿ ಎಲ್ಲ ನಟಿಮಣಿಯರಿಗೂ ಕೈಗೆಟೋಕಿದಿಲ್ಲ. ಆದರೆ, ದಢಕ್ ಚೆಲುವೆ ಈ ವಿಚಾರದಲ್ಲಿ ಲಕ್ಕಿ ಕ್ವೀನ್ ಅಂದರೆ ತಪ್ಪಾಗಲ್ಲ. ಯಸ್, ತೆಲುಗು ಡೆಬ್ಯೂ ಚಿತ್ರ ರಿಲೀಸ್‌ಗೂ ಮೊದಲೇ, ಟಿಟೌನ್ ಅಂಗಳದಲ್ಲಿ ಜಾಹ್ನವಿ ಕಪೂರ್‌ಗೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಕೊಮರಮ್ ಭೀಮ್ ಬೆನ್ನಲ್ಲೇ ಅಲ್ಲೂರಿ ಸೀತರಾಮ್ ಜೊತೆ ಸ್ಕ್ರೀನ್ ಶೇರ್ ಮಾಡುವ ಚಾನ್ಸ್ ಸಿಕ್ಕಿದೆ.
ಯಸ್, ಅಲ್ಲೂರಿ ಸೀತರಾಮ್ ಉರುಫ್ ರಾಮ್ ಚರಣ್ ತೇಜಾ ನಟನೆಯ ʻಆರ್‌ಸಿ-16ʼ (‘RC 16’) ಸಿನಿಮಾಗೆ ಜಾಹ್ನವಿ ಕಪೂರ್ ಸೆಲೆಕ್ಟ್ ಆಗಿದ್ದಾರೆ. ಇಂದು ಜಾಹ್ನವಿ ಬರ್ತ್‌ಡೇ ಸಂಭ್ರಮದಲ್ಲಿದ್ದು, ಆ ಖುಷಿನಾ ಡಬಲ್ ಮಾಡೋದಕ್ಕೆ ʻಆರ್‌ಸಿ-15ʼ ಟೀಮ್, ಜಾಹ್ನವಿ ಆನ್‌ಬೋರ್ಡ್ ಪೋಸ್ಟರ್‌ನ ರಿಲೀಸ್ ಮಾಡಿ ಸರ್‌ಪ್ರೈಸ್ ನೀಡಿದೆ. ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸ್ತಿರೋ, ಉಪ್ಪೇನ ಸಿನಿಮಾ ಖ್ಯಾತಿಯ ನಿರ್ದೇಶಕ ಬುಚ್ಚಿಬಾಬು ಸನಾ ಡೈರೆಕ್ಟ್ ಮಾಡ್ತಿರೋ ಈ ಚಿತ್ರದಲ್ಲಿ ಚೆರ್ರಿ ಹಾಗೂ ಜಾಹ್ನವಿ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ. ಇದೇ ಮೊದಲ ಭಾರಿಗೆ ಈ ಜೋಡಿ ಒಂದಾಗಿದ್ದು, ಆನ್‌ಸ್ಕ್ರೀನ್‌ನಲ್ಲಿ ಇಬ್ಬರ ಕೆಮಿಸ್ಟ್ರಿ ನೋಡೋದಕ್ಕೆ ಫ್ಯಾನ್ಸ್ ಎಕ್ಸೈಟ್ ಆಗಿದ್ದಾರೆ.
ನಿಮಗೆಲ್ಲ ಗೊತ್ತಿರೋ ಹಾಗೇ ಜಾಹ್ನವಿ ಕಪೂರ್ ʻದೇವರʼ(Devara: Part 1)ಚಿತ್ರದ ಮೂಲಕ ಸೌತ್ ಸಿನಿಮಾರಂಗಕ್ಕೆ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದಾರೆ. ಯಂಗ್ ಟೈಗರ್ ಜೂನಿಯರ್ ಎನ್‌ಟಿಆರ್‌ಗೆ ಜೋಡಿಯಾಗಿ ಕಾಣಿಸಿಕೊಂಡಿರೋ ಜಾಹ್ನವಿ, ದೇವರ ಸಿನಿಮಾದಲ್ಲಿ ಪಕ್ಕದ್ಮನೆ ಹುಡುಗಿಯಂತೆ ಮಿಂಚಿದ್ದಾರೆ. ಈಗಾಗಲೇ ರಿಲೀಸ್ ಆಗಿರೋ ಪೋಸ್ಟರ್‌ನಲ್ಲಿ ದಢಕ್ ಬ್ಯೂಟಿಯ ಕಿಕ್ ಕಂಡು ಕಲಾಭಿಮಾನಿಗಳು ಕ್ಲೀನ್‌ಬೋಲ್ಡ್ ಆಗಿದ್ದಾರೆ. ಬೆಳ್ಳಿತೆರೆ ಮೇಲೆ ತಾರಕ್ ಜೊತೆ ತಂಗಂ ಧಗಧಗಿಸೋದು ಗ್ಯಾರಂಟಿ, ಜಾಹ್ನವಿಗೆ ದೇವರ ಸಿನಿಮಾದಿಂದ ಬಿಗ್ ಬ್ರೇಕ್ ಸಿಗೋದು ಪಕ್ಕಾ ಅಂತೆಲ್ಲಾ ಮಾತನಾಡಿಕೊಳ್ತಿದ್ದಾರೆ.
ಹೀಗಿರುವಾಗಲೇ, ಬಿಟೌನ್ ಬ್ಯೂಟಿ ರಾಮ್‌ಚರಣ್ ಸಿನಿಮಾಗೆ ನಟಿಯಾಗುವ ಚಾನ್ಸ್ ದಕ್ಕಿಸಿಕೊಂಡು ಕಣ್ಣುಬ್ಬು ಎಗರಿಸುತ್ತಿದ್ದಾರೆ. ಇವರಿಬ್ಬರೇ ಅಲ್ಲ ಕಾಲಿವುಡ್ ಸೂಪರ್ ಸ್ಟಾರ್ ಸೂರ್ಯ ಸಿನಿಮಾಗೂ ಸೆಲೆಕ್ಟ್ ಆಗಿದ್ದು, ಸೌತ್ ಬ್ಯೂಟೀಸ್‌ಗೆ ಅಸಿಡಿಟಿ ಶುರುವಾಗುವಂತೆ ಮಾಡಿದ್ದಾಳೆ. ಬ್ಯಾಕ್ ಟು ಬ್ಯಾಕ್ ಸೌತ್ ಸ್ಟಾರ್‌ನಟರ ಸಿನಿಮಾಗಳಿಗೆ ಸೆಲೆಕ್ಟ್ ಆಗ್ತಿರೋದನ್ನ ನೋಡಿದರೆ, ಅತಿಲೋಕ ಸುಂದರಿಯ ಪುತ್ರಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನೆಲೆಯೂರೋದು ಗ್ಯಾರಂಟಿ ಅನ್ಸುತ್ತೆ. ಎನಿವೇ, ಕಲೆ ಯಾರಪ್ಪನ ಸ್ವತ್ತು ಅಲ್ಲ. ಅದೃಷ್ಟ ಕೈ ಹಿಡಿದರೆ, ಕಲಾಭಿಮಾನಿಗಳು ಜೈ ಎಂದರೆ ಬಿಟೌನ್ ಬ್ಯೂಟಿ ಸೌತ್ ಸ್ಟಾರ್ ನಟಿಯಾಗೋದ್ರಲ್ಲಿ ನೋ ಡೌಟ್ ಅಲ್ಲವೇ.