ಶನಿವಾರ, ಜುಲೈ 5, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ದಢಕ್‌ ಚೆಲುವೆಗೆ ಸಿಗ್ತಾ ಪುಷ್ಪ-2 ಸ್ಪೆಷಲ್‌ ಹಾಡಿಗೆ ಸೊಂಟ ಬಳುಕಿಸೋ ಸುವರ್ಣಾವಕಾಶ?

Vishalakshi Pby Vishalakshi P
07/03/2024
in Majja Special
Reading Time: 1 min read
ದಢಕ್‌ ಚೆಲುವೆಗೆ ಸಿಗ್ತಾ ಪುಷ್ಪ-2 ಸ್ಪೆಷಲ್‌ ಹಾಡಿಗೆ ಸೊಂಟ ಬಳುಕಿಸೋ ಸುವರ್ಣಾವಕಾಶ?

ಅತಿಲೋಕ ಸುಂದರಿಯ ಮಗಳಿಗೆ ಅದೃಷ್ಟ ಖುಲಾಯಿಸಿದಂತೆ ಕಾಣ್ತಿದೆ. ಬ್ಯಾಕ್‌ ಟು ಬ್ಯಾಕ್‌ ಸ್ಟಾರ್‌ ನಟರುಗಳ ಸಿನಿಮಾದಲ್ಲಿ ನಟಿಸೋ ಲಕ್ಕಿ ಚಾನ್ಸ್‌ ಬಿಟೌನ್‌ ಬ್ಯೂಟಿ ಜಾಹ್ನವಿ ಪಾಲಾಗ್ತಿದೆ. ಯಸ್‌, ಜೂನಿಯರ್‌ ಎನ್‌ಟಿಆರ್‌ ಅಭಿನಯದ ಬಹುನಿರೀಕ್ಷಿತ ದೇವರ ಸಿನಿಮಾದ ಮೂಲಕ ಸೌತ್‌ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿರೋ ದಢಕ್‌ ಚೆಲುವೆ ಜಾಹ್ನವಿಗೆ ಡಿಮ್ಯಾಂಡ್‌ ಕ್ರಿಯೇಟ್‌ ಆಗಿದೆ. ದೇವರ ಚಿತ್ರ ಬಿಡುಗಡೆ ಮೊದಲೇ ಮೆಗಾ ಪವರ್‌ ಸ್ಟಾರ್‌ ರಾಮ್‌ಚರಣ್‌ ತೇಜಾ ಜೊತೆ ಸ್ಕ್ರೀನ್‌ ಶೇರ್‌ ಮಾಡುವ ಚಾನ್ಸ್‌ ಸಿಕ್ಕಿದೆ. ಹೀಗಿರುವಾಗಲೇ ಮತ್ತೊಂದು ಗೋಲ್ಡನ್‌ ಆಪರ್ಚುನಿಟಿ ಬಿಟೌನ್‌ ಚೆಲುವೆಯನ್ನ ಅರಸಿಕೊಂಡು ಬಂದಿರೋ ಸುದ್ದಿ ತೆಲುಗು ಫಿಲ್ಮ್‌ ನಗರದಲ್ಲಿ ಜೋರಾಗಿದೆ ಹಬ್ಬಿದೆ. ಹೌದು, ಇಡೀ ಚಿತ್ರಜಗತ್ತು ಕಣ್ಣರಳಿಸಿರೋ ಪುಷ್ಪ-2 ಸಿನಿಮಾದಿಂದ ಜಾಹ್ನವಿ ಕಪೂರ್‌ಗೆ ಬಿಗ್‌ ಆಫರ್‌ ಮಾಡಿರೋದಾಗಿ ಸುದ್ದಿಯಾಗಿದೆ. ಪುಷ್ಪರಾಜ್‌ ಜೊತೆ ಸ್ಪೆಷಲ್‌ ಹಾಡಿಗೆ ಹೆಜ್ಜೆ ಹಾಕೋದಕ್ಕೆ ದಢಕ್‌ ಚೆಲುವೆನಾ ಸಂಪರ್ಕ ಮಾಡಿದ್ದು ಸದ್ಯ ಈ ಸುದ್ದಿ ಸಿನಿದುನಿಯಾದಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡಿದೆ.

ಯಸ್, ಪುಷ್ಪ ಟೀಮ್‍ ಸಖತ್‌ ಸುಂದರಿಗಾಗಿ ಹುಡುಕಾಟ ನಡೆಸಿತ್ತು. ಸೌತ್ ಸುಂದರಿ ಸಮಂತಾ ಜಾಗಕ್ಕೆ ಮಗದೊಬ್ಬ ಚೆಲುವೆಯನ್ನ ಕರೆತಂದು, ಪುಷ್ಪನ ಅಖಾಡದಲ್ಲಿ ಕುಣಿಸಬೇಕು, ಆಕೆ ಮನಂ ಚೆಲುವೆಯಂತೆ ಮನಮೋಹಕವಾಗಿರಬೇಕು, `ಊ ಅಂಟಾವ ಮಾವ..ಊಹುಂ ಅಂಟಾವ ಮಾವ’ ಹಾಡಿಗೆ ಸ್ಯಾಮ್ ಕಿಚ್ಚು ಹಚ್ಚಿದಂತೆ ಆಕೆಯೂ ಹಚ್ಚಬೇಕು ಅಂತ ಸರ್ಚಿಂಗ್‌ನಲ್ಲಿ ತೊಡಗಿಸಿಕೊಂಡಿತ್ತು. ಹಿಂದೊಮ್ಮೆ ಕಿಸ್‌ ಚೆಲುವೆನಾ ಅಪ್ರೋಚ್‌ ಕೂಡ ಮಾಡಿದ್ದಾರೆನ್ನುವ ಸುದ್ದಿ ರಿವೀಲ್‌ ಆಗಿತ್ತು. ಐಟಂ ಹಾಡಿಗೆ ಹೆಜ್ಜೆ ಹಾಕಲ್ಲ ಅಂತ ಧಮಾಕ ಬ್ಯೂಟಿ ಎಡಗೈನಲ್ಲಿ ಪುಷ್ಪ ಆಫರ್‌ ತಿರಸ್ಕರಿಸಿರೋ ಖಬರ್‌ ಕೂಡ ಕೇಕೆ ಹೊಡೆದಿತ್ತು. ಅದರಂತೆ ಇದೀಗ ತೆಲುಗು ಫಿಲ್ಮ್‌ನಗರದಲ್ಲಿ ಪುಷ್ಪ-2 ಹಾಡಿಗೆ ಬಾಲಿವುಡ್‌ ಚೆಲುವೆ ಜಾಹ್ನವಿ ಕಪೂರ್‌ನ ಅಪ್ರೋಚ್‌ ಮಾಡಿರೋ ಮ್ಯಾಟರ್‌ ಲೀಕ್‌ ಆಗಿದೆ. ಅಷ್ಟಕ್ಕೂ, ಈ ಆಫರ್‌ನ ಶ್ರೀದೇವಿ ಡಾಟರ್‌ ಒಪ್ಪಿಕೊಂಡರಾ? ಸ್ಯಾಮ್‌ ಥರ ಪ್ಯಾನ್‌ ಇಂಡಿಯಾ ಕ್ರಷ್‌ ಆಗ್ಬೋದು ಅಂತ ಐಟಂ ಹಾಡಿಗೆ ಕುಣಿಯಲು ಗ್ರೀನ್‌ ಸಿಗ್ನಲ್‌ ಕೊಟ್ಟಳಾ? ಈ ಕುತೂಹಲಕ್ಕೆ ಸದ್ಯಕ್ಕೆ ಉತ್ತರವಿಲ್ಲ. ಯಾಕಂದ್ರೆ, ಈ ಸುದ್ದಿ ಇನ್ನೂ ಗಾಸಿಪ್‌ ಖಾಲಂನಲ್ಲಿ ಓಡಾಡ್ತಿದೆ. ಈ ಬಗ್ಗೆ ಡೈರೆಕ್ಟರ್‌ ಸುಕುಮಾರ್‌ ಕಡೆಯಿಂದ, ಪ್ರೊಡಕ್ಷನ್‌ ಹೌಸ್‌ ಕಡೆಯಿಂದ ಕ್ಲ್ಯಾರಿಟಿ ಸಿಗೋವರೆಗೂ ಕಣ್ಣರಳಿಸಿ ಕಾಯ್ಲೆಬೇಕು.

ಬಟ್‌, ಬಜಾರ್‌ನಲ್ಲಿ ಹಬ್ಬಿರೋ ಸುದ್ದಿಯಲ್ಲಿ ಕೊಂಚ ಸತ್ಯ ಇರ್ಬೋದು. ಅದ್ಹೇಗೆ ಅಂದರೆ, ರಾಮ್‌ಚರಣ್‌ ನಟನೆಯ ಆರ್‌-16 ಸಿನಿಮಾ ನಿರ್ಮಾಣ ಮಾಡ್ತಿರುವುದು ಮೈತ್ರಿ ಮೂವೀ ಮೇಕರ್ಸ್‌ ಸಂಸ್ಥೆ. ಇದೇ ಸಂಸ್ಥೆ ಪುಷ್ಪ2 ಚಿತ್ರದ ನಿರ್ಮಾಣ ಸಂಸ್ಥೆಯಾಗಿರೋದ್ರಿಂದ ತಮ್ಮ ಬ್ಯಾನರ್‌ನ ಎರಡೂ ಚಿತ್ರಕ್ಕೂ ಜಾಹ್ನವಿ ಕಪೂರ್‌ನ ಆಯ್ಕೆ ಮಾಡಿಕೊಂಡಿರಬಹುದು. ಈಗಾಗಲೇ, ಹಿಂದಿ ಕೆಲ ಚಿತ್ರಗಳಲ್ಲಿ ಸ್ಪೆಷಲ್‌ ಹಾಡಿಗೆ ಹೆಜ್ಜೆ ಹಾಕಿರೋ ದಢಕ್‌ ಚೆಲುವೆ, ಪ್ಯಾನ್‌ ವರ್ಲ್ಡ್‌ ಕಣ್ಣರಳಿಸಿರೋ ಪುಷ್ಪ-2 ಚಿತ್ರದಲ್ಲಿ ಐಟಂ ಹಾಡಿಗೆ ಲೆಗ್‌ ಶೇಕ್‌ ಮಾಡಿದರೂ ಮಾಡ್ಬೋದು. ಅಲ್ಲಿತನಕ ಸ್ಟೈಲಿಷ್‌ ಸ್ಟಾರ್‌ ಅಲ್ಲು ಅರ್ಜುನ್‌ ಹಾಗೂ ಜಾಹ್ನವಿ ಕಾಂಬೋನ ಇಮ್ಯಾಜಿನೇಷನ್‌ನಲ್ಲಿ ನೋಡಿಕೊಳ್ಳೋಣ. ಇನ್ನೇನು ಕೆಲವೇ ಕೆಲವು ತಿಂಗಳಲ್ಲಿ ಪುಷ್ಪರಾಜ್‌ ಅಖಾಡಕ್ಕೆ ಇಳಿಯುತ್ತಾರೆ. ಈಗಾಗಲೇ ರಿಲೀಸ್‌ ಡೇಟ್‌ ಕೂಡ ಫಿಕ್ಸಾಗಿದೆ. ಆಗಸ್ಟ್‌ 15 ರಿಂದ ವರ್ಲ್ಡ್‌ವೈಡ್‌ ಬೆಳ್ಳಿತೆರೆನಾ ಪುಷ್ಪರಾಜ್‌ ರೂಲ್‌ ಮಾಡ್ತಾರೆ. ಮೊದಲ ಭಾಗದಲ್ಲಿ ಪ್ಯಾನ್‌ ಇಂಡಿಯಾ ಶೇಕ್‌ ಮಾಡಿರೋ ಸುಕುಮಾರ್‌ ಹಾಗೂ ಅಲ್ಲು ಕಾಂಬೋ, ಎರಡನೇ ಭಾಗದಲ್ಲಿ ಗ್ಲೋಬಲ್‌ ಮಾರ್ಕೆಟ್‌ನ ಶೇಕ್‌ ಮಾಡುತ್ತಾ? ರಾಕಿಂಗ್‌ ಸ್ಟಾರ್‌ ಯಶ್‌ ಥರ ಐಕಾನ್‌ ಸ್ಟಾರ್‌ ಅಲ್ಲು ವರ್ಲ್ಡ್‌ ಈಸ್‌ ಮೈ ಟೆರಿಟರಿ ಅಂತ ಗಹಗಹಿಸ್ತಾರಾ ಕಾದುನೋಡೋಣ

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
Prabhas:ಇಟಲಿಗೆ ಹಾರಿದ ಕಲ್ಕಿ ಟೀಮ್‌… ದಿಶಾ ಪಟಾಣಿ ಜೊತೆ ಡಾರ್ಲಿಂಗ್‌ ರೊಮ್ಯಾನ್ಸ್‌!

Prabhas:ಇಟಲಿಗೆ ಹಾರಿದ ಕಲ್ಕಿ ಟೀಮ್‌... ದಿಶಾ ಪಟಾಣಿ ಜೊತೆ ಡಾರ್ಲಿಂಗ್‌ ರೊಮ್ಯಾನ್ಸ್‌!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.