ಲೇಡಿಸೂಪರ್ ಸ್ಟಾರ್ ನಯನತಾರಾ ಸಂಸಾರದಲ್ಲಿ ಬಿರುಗಾಳಿ ಎದ್ದಿದೆಯಂತೆ, ಪತಿ ವಿಘ್ನೇಶ್ ಜೊತೆ ಎಲ್ಲವೂ ಸರಿಹೋಗದ ಕಾರಣಕ್ಕೆ ನಟಿ ನಯನತಾರಾ ಡಿವೋರ್ಸ್ ಪಡೆಯಲು ಮುಂದಾಗಿದ್ದಾರಂತೆ. ಹೀಗಾಗಿನೇ, ಇನ್ಸ್‌ಟಾಗ್ರಾಮ್‌ನಲ್ಲಿ ಪತಿನಾ ಅನ್‌ಫಾಲೋ ಮಾಡಿದ್ದಾರಂತೆ. ಇನ್ನೇನು ಸ್ವಲ್ಪ ದಿನ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿರೋ ಎಲ್ಲಾ ಫೋಟೋ ರಿಮೂವ್ ಮಾಡಿ ಡಿವೋರ್ಸ್ ಘೋಷಣೆ ಮಾಡ್ತಾರಂತೆ. ಹೀಗೆ ಅಂತೆ-ಕಂತೆ ಸುದ್ದಿಗಳು ಕಾಲಿವುಡ್ ಅಂಗಳದಲ್ಲಿ ಪ್ಯಾಂಟು-ಟೋಪಿ ಹಾಕ್ಕೊಂಡು ಕುಣಿದಿದ್ದೇ ಕುಣಿದಿದ್ದು. ಇದನ್ನ ನೋಡಿ ಅವರಿಬ್ಬರ ಅಭಿಮಾನಿಗಳು ಬೇಸರಪಟ್ಟುಕೊಂಡು ಕೈ ಕೈ ಹಿಸುಕಿಕೊಂಡ್ರೆ, ಆ ಕೆಲ ಕಿಡಿಗೇಡಿಗಳು ಮಾತ್ರ ಮಟ ಮಟ ಮಧ್ಯಾಹ್ನ ಪಾರ್ಟಿ ಮಾಡಿದ್ದರು. ನಾವು ಹಚ್ಚಿದ ಬೆಂಕಿ ಕಿಡಿ ವರ್ಕೌಟ್ ಆಗಿದೆ, ನಾವು ಹಬ್ಬಿಸಿರೋ ಸುಳ್ ಸುದ್ದಿ ಎಲ್ಲೆಡೆ ಭರ್ಜರಿಯಾಗಿ ಚರ್ಚೆಯಾಗ್ತಿದೆ ಅಂತ ಕೇಕೆ ಹೊಡೆದಿದ್ದರು. ಹಿಂಗ್ ಮಾಡಿದವರಿಗೆ ಕೊನೆಗೂ ಲೇಡಿ ಸೂಪರ್ ಸ್ಟಾರ್ ಟಕ್ಕರ್ ಕೊಟ್ಟಿದ್ದಾರೆ. ಪತಿ ವಿಘ್ನೇಶ್ ಶಿವನ್ ಹಾಗೂ ತಮ್ಮ ಇಬ್ಬರು ಮಕ್ಕಳ ಜೊತೆ ಫ್ಲೈಟ್ ಏರಿ ಫಾರಿನ್ ಪ್ರವಾಸಕ್ಕೆ ತೆರಳಿದ್ದಾರೆ.
ಯಸ್, ನಿನ್ನೆ ರಾತ್ರಿ ಲೇಡಿ ಸೂಪರ್ ಸ್ಟಾರ್ ನಯನ್ ಫ್ಯಾಮಿಲಿ ವಿದೇಶಿ ಪ್ರವಾಸ ಕೈ ಗೊಂಡಿದೆ. ಅದರ ಒಂದು ಪಿಕ್ಚರ್‌ನ ಸ್ವತಃ ನಯನ್‌ತಾರಾ ತಮ್ಮ ಸೋಷಿಯಲ್ ಸ್ಟೇಟಸ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬಹಳ ದಿನಗಳ ನಂತರ ಪ್ರವಾಸ ಕೈಗೊಂಡಿರೋದಾಗಿ ಹೇಳಿಕೊಂಡಿದ್ದು ಹಾರ್ಟ್ ಸಿಂಬಲ್ ಜೊತೆ ಟ್ವೀಟ್ ಮಾಡಿದ್ದಾರೆ. ಇದೊಂದು ಫೋಟೋ ಸಾಕು ಲೇಡಿ ಸೂಪರ್ ಸ್ಟಾರ್ ಸಂಸಾರದಲ್ಲಿ ಯಾವ ಬಿರುಗಾಳಿನೂ ಎದ್ದಿಲ್ಲ, ಪತಿ ವಿಘ್ನೇಶ್ ಜೊತೆ ಸೂಪರ್ ಚೆಲುವೆಗೆ ಯಾವ ವಿರಸನೂ ಇಲ್ಲ ಅಂತ. ಅಷ್ಟಕ್ಕೂ, ಅದ್ಯಾವ ಕಿಡಿಗೇಡಿಗಳಿಗೆ ಈ ಜೋಡಿ ಮೇಲೆ ಹೊಟ್ಟೆ ಉರಿ ಇದೆಯೋ ಏನೋ ಗೊತ್ತಿಲ್ಲ. ಹಾಲು-ಜೇನಂತೆ ಬೆರೆತು ಬಾಳುತ್ತಾ, ನಮ್ಮ ಸಂಸಾರ ಆನಂದ ಸಾಗರ ಅಂತಿರೋ ಈ ಜೋಡಿ ದಾಂಪತ್ಯದಲ್ಲಿ ಹುಳಿ ಹಿಂಡೋದಕ್ಕೆ ನೋಡಿದ್ದಾರೆ. ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ. ಡಿವೋರ್ಸ್ ಪಡೀತಾರೆ ಅಂತ ಸುಳ್ ಸುದ್ದಿ ಹಬ್ಬಿಸಿದ್ದಾರೆ. ಆದ್ರೀಗ ಸ್ವತಃ ನಯನ್ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ಪತಿ ಹಾಗೂ ಮಕ್ಕಳ ಜೊತೆಗೆ ಪ್ರವಾಸ ಕೈಗೊಂಡಿರೋ ಫೋಟೋ ನಯನ್-ವಿಘ್ನೇಶ್ ಸಂಸಾರ ಸೂಪರ್ ಆಗಿರೋದನ್ನ ಹೇಳ್ತಿದೆ.
ಇತ್ತೀಚೆಗಷ್ಟೇ ನಯನತಾರಾ ಪತಿ ವಿಘ್ನೇಶ್ ಕೂಡ ಡಿವೋರ್ಸ್ ಸುದ್ದಿಗೆ ಸ್ಪಷ್ಟನೆ ಕೊಡುವ ಕೆಲಸ ಮಾಡಿದ್ರು. ನಮ್ಮ ಸಂಸಾರದಲ್ಲಿ ಸುಂಟರಗಾಳಿನೂ ಎದ್ದಿಲ್ಲ, ಸುನಾಮಿನೂ ಬಂದಿಲ್ಲ. ನಮ್ಮ ಸಂಸಾರದಲ್ಲಿ ಎಲ್ಲವೂ ಸರಿಯಿದೆ. ಟೆಕ್ನಿಕಲ್ ಇಷ್ಯೂಸ್‌ನಿಂದಾಗಿ ಇನ್ಸ್‌ಟಾಗ್ರಾಮ್‌ನಲ್ಲಿ ಅನ್‌ಫಾಲೋ ತೋರಿಸ್ತಿದೆ ಬಿಟ್ರೆ, ನಾನು ಮತ್ತೆ ನಯನ್ ಚೆನ್ನಾಗಿಯೇ ಇದ್ದೇವೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕ್ಕೊಂಡಿದ್ದರು ಅಭಿಮಾನಿಗಳ ಪ್ರೀತಿ, ಆಶೀರ್ವಾದ ಸದಾ ನಮ್ಮ ಮೇಲೆ ಇದೆ ಎಂದಿದ್ದರು. ಅಂದ್ಹಾಗೇ, ನಯನ್ ಹಾಗೂ ವಿಘ್ನೇಶ್ ಶಿವನ್ ಜೋಡಿ ಪರಸ್ಪರ 10 ವರ್ಷಗಳ ಕಾಲ ಪ್ರೀತಿಸಿ ಜೊತೆಯಾದವರು. ಇದೀಗ ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನ ಪಡೆದರಾದ್ರೂ ಕೂಡ ಅಕ್ಕರೆಯಿಂದ, ಪ್ರೀತಿ-ಕಕ್ಕುಲಾತಿಯಿಂದ ಮಕ್ಕಳನ್ನ ಸಾಕುತ್ತಿದ್ದಾರೆ.