ಶನಿವಾರ, ಜುಲೈ 5, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಶಿವರಾತ್ರಿ ಹಬ್ಬದಂದು ಸಿಹಿಸುದ್ದಿ ಕೊಟ್ಟ ಆದಿ-ನಿಧಿ… ಮೊದಲ ಮಗುವಿನ ನಿರೀಕ್ಷೆಯಲ್ಲಿ ಲವ್‌ ಮಾಕ್ಟೇಲ್‌ ಜೋಡಿ!

Vishalakshi Pby Vishalakshi P
08/03/2024
in Majja Special
Reading Time: 1 min read
ಶಿವರಾತ್ರಿ ಹಬ್ಬದಂದು ಸಿಹಿಸುದ್ದಿ ಕೊಟ್ಟ ಆದಿ-ನಿಧಿ… ಮೊದಲ ಮಗುವಿನ ನಿರೀಕ್ಷೆಯಲ್ಲಿ ಲವ್‌ ಮಾಕ್ಟೇಲ್‌ ಜೋಡಿ!

ಸ್ಯಾಂಡಲ್‌ವುಡ್‌ನ ತಾರಾ ಜೋಡಿ, ಲವ್‌ ಮಾಕ್ಟೇಲ್‌ ಕಪಲ್ಸ್‌ಗಳಾದ ಆದಿ-ನಿಧಿ ತಮ್ಮ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಶಿವರಾತ್ರಿ ಹಬ್ಬದಂದೇ ತಾವು ತಂದೆ-ತಾಯಿಯಾಗ್ತಿರುವ ಖುಷಿ ಹಂಚಿಕೊಂಡಿದ್ದಾರೆ. ಸೆಪ್ಟೆಂಬರ್‌ನಲ್ಲಿ ಮೊದಲ ಕಂದಮ್ಮನ ಆಗಮನವಾಗಲಿದ್ದು, ಡಾರ್ಲಿಂಗ್‌ ಹಾಗೂ ಮಿಲನ ದಂಪತಿ ದಿಲ್‌ ಖುಷ್‌ ಆಗಿದ್ದಾರೆ. ಮುದ್ದು ಮಗುವಿನ ಸ್ವಾಗತಕ್ಕೆ ಕಾತುರರಾಗಿದ್ದಾರೆ.

ಡಾರ್ಲಿಂಗ್‌ ಹಾಗೂ ಮಿಲನ ರೀಲ್‌ನಲ್ಲಿ ಜೋಡಿಯಾಗಿದ್ದವರು. ಒಟ್ಟಿಗೆ ಸಿನಿಮಾ ಮಾಡ್ತಾ, ಕನೆಕ್ಟ್‌ ಆದ ಈ ಜೋಡಿ ರಿಯಲ್‌ ಲೈಫ್‌ನಲ್ಲಿ ಒಂದಾದರು. 2021 ಫೆಬ್ರವರಿ 14ರಂದು ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ಬಾಳಬಂಧನಕ್ಕೊಳಗಾದರು. ಇವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿರಿಸಿ ಮೂರು ವರ್ಷಗಳು ಕಳೆದವು. ಇದೀಗ ಈ ಜೋಡಿ ಗುಡ್‌ನ್ಯೂಸ್‌ ಕೊಟ್ಟಿದೆ. ಪೋಷಕರಾಗಲಿರುವ ಸಂತಸವನ್ನ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದೆ.

ಲವ್‌ ಮಾಕ್ಟೇಲ್‌ ಸಿನಿಮಾದಿಂದ ಜನಪ್ರಿಯತೆ ಗಳಿಸಿದ ಜೋಡಿ, ಲವ್‌ ಮಾಕ್ಟೇಲ್‌-2 ಮೂಲಕ ಜನರ ಮನಸ್ಸು ಗೆದ್ದಿತ್ತು. ಇದೀಗ ಸಿನಿಮಾ ಪ್ರೇಮಿಗಳು ಲವ್‌ ಮಾಕ್ಟೇಲ್‌ 3 ಯಾವಾಗ ಅಂತಿದ್ದಾರೆ. ಆ ಸಿನಿಮಾವನ್ನ ಪ್ರೇಕ್ಷಕರ ಮಡಿಲಿಗೆ ಹಾಕೋ ಮೊದಲೇ ಮಿಲನ ಮಡಿಲಿಗೆ ಮುದ್ದು ಕಂದನ ಎಂಟ್ರಿಯಾಗ್ತಿದೆ. ಆ ಕೂಸಿಗೆ ಅಂಡ್‌ ಈ ಜೋಡಿಗೆ ಒಳ್ಳೆದಾಗಲಿ, ಎಲ್ಲರ ಹಾರೈಕೆ, ಆಶೀರ್ವಾದ ಇರಲಿ ಅನ್ನೋದೇ ನಮ್ಮಾಸೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ವೃತ್ತಿ ಜೀವನದಲ್ಲಿ ಹಿಂದೆಂದೂ ಮಾಡಿರದ ಪಾತ್ರದಲ್ಲಿ ಮಿಂಚಲಿರುವ ಮಿತ್ರ!

ವೃತ್ತಿ ಜೀವನದಲ್ಲಿ ಹಿಂದೆಂದೂ ಮಾಡಿರದ ಪಾತ್ರದಲ್ಲಿ ಮಿಂಚಲಿರುವ ಮಿತ್ರ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.