ಟಾಕ್ಸಿಕ್… (Toxic) ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ಹೈವೋಲ್ಟೇಜ್ ಸಿನಿಮಾ ಅನ್ನೋದು ನಿಮ್ಮೆಲ್ಲರಿಗೂ ಗೊತ್ತೆಯಿದೆ. ಈ ಚಿತ್ರಕ್ಕಾಗಿ ಬರೀ ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವರ್ಲ್ಡ್ ಪ್ರೇಕ್ಷಕರು ಕೂಡ ಕಾಯ್ತಿದ್ದಾರೆ. ಟೈಟಲ್ ಟೀಸರ್ ಹೊರಬಂದ್ಮೇಲಂತೂ ನೂರೆಂಟು ನಿರೀಕ್ಷೆ ಇಟ್ಕೊಂಡು ಎದುರುನೋಡ್ತಿದ್ದಾರೆ. ಟಾಕ್ಸಿಕ್‌ನಲ್ಲಿ ಮಾನ್‌ಸ್ಟರ್ ಯಶ್ (Yash) ಲುಕ್ಕು-ಗೆಟಪ್ಪು ಹೇಗಿರ್ಬೋದು, ಅದ್ಯಾವ ನಯಾ ಅವತಾರವೆತ್ತಿ ನರಾಚಿ ಲೋಕದ ರಣಧೀರ ಧಗಧಗಿಸಬಹುದು ಅಂತ ಕುತೂಹಲಭರಿತರಾಗಿ ಕಾಯ್ತಿದ್ದಾರೆ. ಹೀಗಿರುವಾಗಲೇ ರಾಕಿಭಾಯ್ (Yash) ಹೊಸ ಅವತಾರದಲ್ಲಿ ಎಂಟ್ರಿಕೊಟ್ಟಿದ್ದಾರೆ. ಮೊನ್ನೆ ಗಣಿನಾಡಲ್ಲಿ ರಾಜಾಹುಲಿನಾ ನೋಡಿದಾಗಲೇ ಎಲ್ಲರಿಗೂ ಡೌಟ್ ಬಂದಿತ್ತು. ಇದೀಗ ಆಪ್ತರ ಮದ್ವೇಲಿ ಯಶ್-ರಾಧಿಕಾ ಒಟ್ಟಿಗೆ ಕಾಣಿಸಿಕೊಂಡಿದ್ದು, ಅಣ್ತಮ್ಮನ ಹೊಸ ಗೆಟಪ್ ಟಾಕ್ಸಿಕ್ ಚಿತ್ರದ್ದೇ ಅಂತ ಫ್ಯಾನ್ಸ್ ಗೆಸ್ ಮಾಡ್ತಿದ್ದಾರೆ.
Look has changed &
Physique too #Toxic mania begins 🥵🔥#YashBOSS #ToxicTheMovie pic.twitter.com/7NT9cpaBoU— RAANA™ (@Raana_Yash) March 7, 2024
ಅಷ್ಟಕ್ಕೂ, ರಾಕಿಭಾಯ್ (yash) ಈ ಲುಕ್ಕು ಟಾಕ್ಸಿಕ್ (Toxic) ಚಿತ್ರಕ್ಕಾಗಿನೇ ಅಂತ ಎರಡೇ ಪದದಲ್ಲಿ ಉತ್ತರಿಸೋದು ಅಸಾಧ್ಯ. ಯಾಕಂದ್ರೆ, ಯಶ್ ಕೈಯಲ್ಲಿ ಟಾಕ್ಸಿಕ್ ಮಾತ್ರವಲ್ಲ ಪರಭಾಷೆಯ ಸಿನಿಮಾಗಳು ಕೂಡ ಇದೆ. ಅದರಲ್ಲೂ ಬಾಲಿವುಡ್ ರಾಮಾಯಣ (Ramayana) ಸಿನಿಮಾದಲ್ಲಿ ಮಾನ್‌ಸ್ಟರ್ ಯಶ್ ರಾವಣನಾಗಿ ಧಗಧಗಿಸ್ತಾರೆನ್ನುವ ಸುದ್ದಿ ಸುನಾಮಿ ಎಬ್ಬಿಸ್ತಿದೆ. ಈ ಬಗ್ಗೆ ಯಶ್ (yash) ಇಲ್ಲಿವರೆಗೂ ಸ್ಪಷ್ಟನೆ ಕೊಟ್ಟಿಲ್ಲವಾದರೂ ಕೂಡ ಬಿಟೌನ್ ಅಂಗಳದಲ್ಲಿ ಯಶ್ ರಾವಣನಾಗೋದು ಪಕ್ಕಾ ಅಂತಲೇ ಸುದ್ದಿ ಓಡಾಡ್ತಿದೆ. ಹೀಗಾಗಿ, ಅಣ್ತಮ್ಮನ ನಯಾ ವರಸೆ ಟಾಕ್ಸಿಕ್ ಚಿತ್ರಕ್ಕಾಗಿನಾ ಅಥವಾ ಬಿಟೌನ್ ರಾಮಾಯಣಕ್ಕಾಗಿನಾ ಅನ್ನೋ ಅನುಮಾನ ಮಾತ್ರ ದಟ್ಟವಾಗಿದೆ.
ಟಾಕ್ಸಿಕ್ ಶೂಟಿಂಗ್ ಭರದಿಂದ ಸಾಗ್ತಿದೆ. ಅದು ಬೆಂಗಳೂರಿನಲ್ಲಿ ಅನ್ನೋದು ವಿಶೇಷ. ಆಗಾಗ ಫಾರಿನ್ ಸುತ್ತುತ್ತಿದ್ದ ಕೆಜಿಎಫ್ ಕಿಂಗ್‌ನ ನೋಡಿ ವಿದೇಶದಲ್ಲಿ ಚಿತ್ರೀಕರಣ ಚಾಲುವಾಗಿದೆ ಎಂಬ ಲೆಕ್ಕಚಾರ ಸಿನಿ ಸರ್ಕಲ್ ಹರಿದಾಡಿತ್ತು. ಬಟ್ ನಮ್ಮ ಸಿಲಿಕಾನ್ ಸಿಟಿಯಲ್ಲಿಯೇ ಮಲೆಯಾಳಂ ನಿರ್ದೇಶಕಿ ಗೀತು ಮೋಹನ್ ತಂಡ ಕಟ್ಟಿಕೊಂಡು ಟಾಕ್ಸಿಕ್ ಗಾಗಿ ಹಗಲು ರಾತ್ರಿ ಶ್ರಮಿಸ್ತಿದ್ದಾರೆ. ಶೂಟಿಂಗ್ ಎಲ್ಲಿಗೆ ಬಂತು? ಏನ್ ನಡೆಯುತ್ತಿದೆ ಎಂಬ ಬಗ್ಗೆ ಯಾವುದೇ ಸಮಾಚಾರ ಹೊರಬೀಳದೇ ಇದ್ರೂ ಸುಲ್ತಾನನ ಬೊಂಬಾಟ್ ಲುಕ್ ನೋಡಿ ರಾಕಿಭಕ್ತಗಣ ಥ್ರಿಲ್ ಆಗಿದೆ. ಅಣ್ತಮ್ಮನಂತೆ ಗಡ್ಡಕ್ಕೆ ಶೇಪ್ ಕೊಡಿಸಿ ಪೋಸ್ ಕೊಡೋದಕ್ಕೆ ಫ್ಯಾನ್ಸ್ ಕೂಡ ತಯಾರಿ ನಡೆಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಟಾಕ್ಸಿಕ್ ಲುಕ್ ಟ್ರೆಂಡ್ ಆಗಲಿದೆ. ಅಟ್ ದಿ ಸೇಮ್ ಟೈಮ್ ಟಾಕ್ಸಿಕ್ ಅಸಲಿ ಖಬರ್ ಹೊರಬೀಳಲಿದೆ. ಅಲ್ಲಿವರೆಗೂ ಜಸ್ಟ್ ವೇಯ್ಟ್ ಅಂಡ್ ವಾಚ್