ಸೀತರಾಮಂ ಚೆಲುವೆ ಮೃಣಾಲ್ (Mrunal takur) ಹಾಗೂ ವಿಜಯ್ ದೇವರಕೊಂಡ (Vijay Devarakonda) ಮದುವೆ ಸಂಭ್ರಮ… ಹೀಗೊಂದು ಹೆಡ್ಡಿಂಗ್ ನೋಡಿದಾಕ್ಷಣ ಅಚ್ಚರಿಯಾಗುತ್ತೆ. ಅಟ್ ದಿ ಸೇಮ್ ಟೈಮ್ ಕಿರಿಕ್ ಬ್ಯೂಟಿ ರಶ್ಮಿಕಾಗೆ (Rashmika) ವಿಜಯ್ ಕೈಕೊಟ್ರಾ ಎನ್ನುವ ಪ್ರಶ್ನೆಯೂ ಏಕ್ದಮ್ ಹುಟ್ಟಿಕೊಂಡುಬಿಡುತ್ತೆ. ಅಲ್ಲಾ, ಇಬ್ಬರು ಡೇಟಿಂಗ್‌ನಲ್ಲಿದ್ದಾರೆ, ಶೀಘ್ರದಲ್ಲೇ ಮದುವೆಯಾಗ್ತಾರೆ ಅಂತ ಸುದ್ದಿಯಾಗ್ತಿತ್ತಲ್ಲ. ಈಗ ನೋಡಿದರೆ ಮೃಣಾಲ್ (Mrunal takur) ಜೊತೆ ವಿಜಯ್ (Vijay Devarakonda) ಮದುವೆ ಅಂತ ಸುದ್ದಿಯಾಗಿದೆ. ಇದೇನು ಕಥೆ? ಅದೇನೇ ಇರಲಿ ಪಾಪ ನಮ್ ಸಾನ್ವಿಗೆ ಹಿಂಗ್ ಆಗ್ಬಾರ್ದಿತ್ತು ಹೀಗಂತ ಕೆಲವರು ನೊಂದುಕೊಂಡರೆ, ಇನ್ನೂ ಕೆಲವರು ಚಮಕ್ ಚೆಲ್ವಿಗೆ ಸರಿಯಾಗೇ ಮಾಡಿದ್ದಾನೆ ವಿಜಯ್ ಅಂತ ಒಳಗೊಳಗೆ ಖುಷಿಪಡ್ತಿರ್ತಾರೆ. ಆದರೆ, ಅಸಲಿ ಸತ್ಯ ಬೇರೆನೇಯಿದೆ. ಅದೇನು ಅನ್ನೋದನ್ನ ನೋಡ್ತಾ ಹೋಗೋದಾದರೆ, ಸೀತರಾಮಂ ಚೆಲುವೆ ಮೃಣಾಲ್ ಜೊತೆ ರೌಡಿಬಾಯ್ ವಿಜಯ್ ದೇವರಕೊಂಡ (Vijay Devarakonda) ಮದುವೆ ನಡೆದಿರೋದು ನಿಜ. ಆದರೆ, ಅದು ರಿಯಲ್ ಮದುವೆ ಅಲ್ಲ ರೀಲ್ ಮದುವೆ ಅನ್ನೋದು ಅಷ್ಟೇ ಸತ್ಯ.
ಯಸ್, ಮೃಣಾಲ್ (Mrunal takur) ಹಾಗೂ ವಿಜಯ್ (Vijay Devarakonda) ಇಬ್ಬರು ಜೊತೆಯಾಗಿದ್ದಾರೆ. ಫ್ಯಾಮಿಲಿ ಸ್ಟಾರ್ (Family Star) ಚಿತ್ರಕ್ಕಾಗಿ ಇದೇ ಮೊದಲ ಭಾರಿಗೆ ಇಬ್ಬರು ಜೋಡಿಯಾಗಿದ್ದಾರೆ. ಮೊದಲು ಪ್ರೇಮಿಗಳಾಗಿ, ನಂತರ ಸತಿಪತಿಗಳಾಗೋಕೆ ನಿರ್ಧರಿಸಿದ ಈ ಜೋಡಿ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದಿದ್ದಾರೆ. ಅದ್ದೂರಿಯಾಗಿಯೇ ಮದುವೆ ಮಾಡಿಕೊಂಡಿದ್ದು, ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖುಷಿಯಲ್ಲಿದ್ದಾರೆ. ಸದ್ಯ, ಇವರಿಬ್ಬರ ಮದುವೆ ಸಂಭ್ರಮದ ಹಾಡು ಬಿಡುಗಡೆಯಾಗಿದೆ. ʻಕಲ್ಯಾಣಿ ವಚ್ಚಾ ವಚ್ಚಾ ʼ ಅಂತ ಕುಣಿಯೋ ಹಾಡು ಇದಾಗಿದ್ದು, ಅನಂತ್ ಶ್ರೀರಾಮ್ ಕ್ಯಾಚಿ ಲಿರಿಕ್ಸ್ ಬರೆದಿದ್ದಾರೆ. ಗೋಪಿಸುಂದರ್ ಸಂಗೀತ ಸಂಯೋಜಿಸಿದ್ದು, ಖ್ಯಾತ ಗಾಯಕಿ ಮಂಗ್ಲಿ ಹಾಗೂ ಕಾರ್ತಿಕ್ ಕಂಠದಾನ ಮಾಡಿದ್ದಾರೆ. ಈ ಹಾಡಿನಲ್ಲಿ ಮೃಣಾಲ್ ಹಾಗೂ ವಿಜಯ್ ಜೋಡಿ ಮುದುಮಕ್ಕಳಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ. ʻಫ್ಯಾಮಿಲಿ ಸ್ಟಾರ್ʼ (Family Star) ಮೇಲಿನ ನಿರೀಕ್ಷೆ ಹೆಚ್ಚಿದೆ.
ಇಂಟ್ರೆಸ್ಟಿಂಗ್ ಅಂದರೆ ಫ್ಯಾಮಿಲಿ ಸ್ಟಾರ್‌ಗಾಗಿ ಗೀತಗೋವಿಂದಂ ಕಾಂಬಿನೇಷನ್ ಜೊತೆಯಾಗಿದೆ. ನಿರ್ದೇಶಕ ಪರುಷುರಾಮ್ ಪೆಟ್ಲ ಹಾಗೂ ವಿಜಯ್ ಎರಡನೇ ಭಾರಿಗೆ ಒಂದಾಗಿದ್ದು, ಸಿನಿಮಾ ಪ್ರೇಮಿಗಳು ʻಫ್ಯಾಮಿಲಿ ಸ್ಟಾರ್ʼ (Family Star) ಮೇಲೆ ನೂರೆಂಟು ನಿರೀಕ್ಷೆ ಇಟ್ಕೊಂಡು ಕಾಯುವಂತಾಗಿದೆ. ಗೀತಗೋವಿಂದಂ ನಂತರ ಬ್ಯಾಕ್ ಟು ಬ್ಯಾಕ್ ಸಿನ್ಮಾ ಮಾಡಿದ್ರೂ ಕೂಡ ರೌಡಿಬಾಯ್ ವಿಜಯ್‌ಗೆ ದೊಡ್ಡ ಮಟ್ಟದ ಗೆಲುವೇನು ದಕ್ಕಿಲ್ಲ. ಹೀಗಾಗಿ, ಕಿಸ್ಸಿಂಗ್ ಸ್ಟಾರ್ ವಿಜಯ್ ಕೂಡ ʻಫ್ಯಾಮಿಲಿ ಸ್ಟಾರ್ʼ (Family Star) ಸಿನ್ಮಾದಿಂದ ಬಿಗ್ ಸಕ್ಸಸ್‌ಗಾಗಿ ಎದುರುನೋಡ್ತಿದ್ದಾರೆ. ನಿಮಗೆಲ್ಲ ಗೊತ್ತಿರೋ ಹಾಗೇ ʻಗೀತ ಗೋವಿಂದಂʼ ಸಿನಿಮಾದಲ್ಲಿ ವಿಜಯ್ ಹಾಗೂ ರಶ್ಮಿಕಾ ಕೆಮಿಸ್ಟ್ರಿ ವರ್ಕೌಟ್ ಆಗಿತ್ತು. ಫ್ಯಾನ್ಸ್‌ಗೆ ಮಾತ್ರವಲ್ಲ ಸಮಸ್ತ ಸಿನ್ಮಾ ಪ್ರೇಮಿಗಳಿಗೆ ಚಿತ್ರ ಕಿಕ್ ಕೊಟ್ಟಿತ್ತು. ಅದರಂತೇ, ವಿಜಯ್ ಹಾಗೂ ಮೃಣಾಲ್ ಕೆಮಿಸ್ಟ್ರಿ ವರ್ಕೌಟ್ ಆಗುತ್ತಾ? ಫ್ಯಾಮಿಲಿ ಸ್ಟಾರ್ ಸಿನ್ಮಾದಿಂದ (Family Star) ಈ ಜೋಡಿ ದಿ ಬೆಸ್ಟ್ ಪೇರ್ ಎನಿಸಿಕೊಳ್ಳುತ್ತಾ ಕಾದುನೋಡಬೇಕು. ಅಂದ್ಹಾಗೇ, ಈಗಾಗಲೇ ರಿಲೀಸ್ ಆಗಿರೋ ಟೀಸರ್, ಹಾಗೂ ನಂದನಂದನ ಹಾಡು ಪ್ರೇಕ್ಷಕರ ಮನಸೂರೆಗೊಂಡಿದೆ. ಈ ಚಿತ್ರಕ್ಕೆ ದಿಲ್ ರಾಜು ಬಂಡವಾಳ ಹೂಡಿದ್ದು, ಇದೇ ಏಪ್ರಿಲ್ 05ರಂದು ವರ್ಲ್ಡ್‌ವೈಡ್ ಈ ಚಿತ್ರ (Family Star) ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗ್ತಿದೆ.