ಕಾಲಿವುಡ್ ಸೂಪರ್ ಸ್ಟಾರ್ ಧನುಷ್( Dhanush) ರಿಯಲ್ ಲೈಫ್‌ನಲ್ಲಿ ಯಾವಾಗ್ಲೋ ಕುಬೇರ (Kubera) ಆಗಿದ್ದಾರೆ. ಕೋಟಿ ಕೋಟಿಗೆ ಒಡೆಯನಾಗಿರೋ ತಮಿಳು ನಟ ಧನುಷ್ ಈಗ ರೀಲ್ ಲೈಫ್‌ನಲ್ಲಿ ಅಂದರೆ ತೆರೆಮೇಲೆ ʻಕುಬೇರʼನಾಗಲು ಹೊರಟಿದ್ದಾರೆ. ಅದಕ್ಕಾಗಿ ಧನುಷ್ (Dhanush) ಮಾಫಿಯಾ ಡಾನ್ ಆಗ್ತಿದ್ದಾರೆನ್ನುವ ಧಮಾಕೇದಾರ್ ಸಮಾಚಾರ್ ಹೊರಬಿದ್ದಿದೆ. ಯಸ್, ʻಕುಬೇರʼ (Kubera) ಸಿನಿಮಾದಲ್ಲಿ ನಟ ಧನುಷ್ ಮಾಫಿಯಾ ಡಾನ್ ಆಗಲಿದ್ದಾರಂತೆ. ಮುಂಬೈನ ಧಾರಾವಿ ಸ್ಲಮ್‌ನ ಭಿಕ್ಷುಕನೊಬ್ಬ ಮಾಫಿಯಾ ಡಾನ್ ಆಗುವ ಕಥೆನಾ ನಿರ್ದೇಶಕ ಶೇಖರ್‌ಕಮ್ಮುಲ ಅವ್ರು ʻಕುಬೇರʼ (Kubera) ಸಿನಿಮಾ ಮೂಲಕ ಕಟ್ಟಿಕೊಡಲು ಹೊರಟಿದ್ದಾರಂತೆ. ಸದ್ಯ ಕಥೆಯ ಒನ್‌ಲೈನ್ ಸ್ಟೋರಿ ರಿವೀಲ್ ಆಗಿದ್ದು, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.
ವಿಶೇಷ ಅಂದರೆ ಶಿವರಾತ್ರಿ ಹಬ್ಬದಂದು ʻಕುಬೇರʼ ಫಸ್ಟ್ ಲುಕ್ ಹಾಗೂ ಟೈಟಲ್ ಟೀಸರ್ ರಿವೀಲ್ ಮಾಡಲಾಗಿತ್ತು. ಉದ್ದುದ್ದ ತಲೆಕೂದಲು ಬಿಟ್ಕೊಂಡು, ಗಡ್ಡಮೀಸೆ ಬೆಳೆಸಿಕೊಂಡು, ಹಳೆಬಟ್ಟೆ ಹಾಕ್ಕೊಂಡು, ಪರಶಿವನ ಮುಂದೆ ನಿಂತಿರೋ ಧನುಷ್( Dhanush) ನಯಾ ಅವತಾರವನ್ನ ಅನಾವರಣಗೊಳಿಸಲಾಗಿತ್ತು. ಇದೀಗ ʻಕುಬೇರʼ ಫಿಲ್ಮ್ ಟೀಮ್ ಬ್ಯಾಂಕಾಕ್‌ನಲ್ಲಿ ಬೀಡುಬಿಟ್ಟಿದೆ. ಹೈವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣದಲ್ಲಿ ನಿರತವಾಗಿದ್ದು, ಟಿಟೌನ್ ಕಿಂಗ್ ನಾಗಾರ್ಜುನ್ (Nagarjuna) ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ಕ್ಲಾಸ್ ಲುಕ್‌ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿ ಅಂದರೆ ʻಕಾಲಿವುಡ್ʼ ಕುಬೇರನಿಗೆ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ(RashmikaMandanna) ಜೋಡಿಯಾಗಿದ್ದಾರೆ. ಟಾಲಿವುಡ್, ಕಾಲಿವುಡ್, ಬಾಲಿವುಡ್‌ನಲ್ಲಿ ಸ್ಟಾರ್‌ನಟರುಗಳ ಜೊತೆ ಸ್ಕ್ರೀನ್‌ಶೇರ್‌ಮಾಡ್ತಿರೋ ರಶ್ಮಿಕಾ, ಸದ್ಯ ಅಲ್ಲು ಅರ್ಜುನ್‌ಜೊತೆ ಪುಷ್ಪ-2 ನಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಕಾಲಿವುಡ್ ಸೂಪರ್‌ಸ್ಟಾರ್ ಧನುಷ್‌ಗೆ ಜೋಡಿಯಾಗಿದ್ದು, ಶೂಟಿಂಗ್ ಸೆಟ್ನಲ್ಲಿ ಧನುಷ್ ಕೈ ಹಿಡಿದು ಎಳೆದೊಯ್ಯುವ ವಿಡಿಯೋವೊಂದು ಇತ್ತೀಚೆಗಷ್ಟೇ ವೈರಲ್ ಆಗಿತ್ತು. ಅಂದ್ಹಾಗೇ ʻಕುಬೇರʼ ಸಿನಿಮಾ ಬರೀ ಕಾಲಿವುಡ್‌ಗಷ್ಟೇ ಸೀಮಿತವಾಗಿಲ್ಲ. ಬಹುಕೋಟಿ ವೆಚ್ಚದಲ್ಲಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ನಿರ್ಮಾಣಗೊಳ್ತಿದೆ. ತಮಿಳು, ತೆಲುಗು, ಮಲೆಯಾಳಂ, ಕನ್ನಡ ಹಾಗೂ ಹಿಂದಿ ಸೇರಿ ಪಂಚಭಾಷೆಯಲ್ಲಿ ಬಿಡುಗಡೆಯಾಗಲಿದೆ. ಲವ್‌ಸ್ಟೋರಿ ಹಾಗೂ ಫಿದಾ ಸಿನ್ಮಾ ಖ್ಯಾತಿಯ ಶೇಖರ್‌ಕಮ್ಮುಲ ನಿರ್ದೇಶನ ಚಿತ್ರಕ್ಕಿದ್ದು, ಶ್ರೀ ವೆಂಕಟೇಶ್ವರ ಸಿನಿಮಾಸ್‌ಮತ್ತು ಒಮಿಗೋಸ್ ಕ್ರಿಯೇಷನ್ಸ್ ಬ್ಯಾನರ್ ಜಂಟಿಯಾಗಿ ನಿರ್ಮಾಣ ಮಾಡುತ್ತಿವೆ.
ಸದ್ಯ ಧನುಷ್ ಕೈಯಲ್ಲಿ ಮೂರ್ನಾಲ್ಕು ಸಿನಿಮಾಗಳಿವೆ. ಅದರಲ್ಲಿ ಪ್ರಮುಖವಾಗಿ ʻರಾಯನ್ʼ(Raayan)ಅಂದರೆ ತಪ್ಪಾಗಲಿಕ್ಕಿಲ್ಲ. ಯಸ್, ರಾಯನ್ ಧನುಷ್ ಡೈರೆಕ್ಟ್‌ಮಾಡಿ, ಆಕ್ಟ್ ಮಾಡ್ತಿರೋ ಸಿನಿಮಾ. 2017ರಲ್ಲಿ ಧನುಷ್‘ಪಾ ಪಂಡಿ’ ಅನ್ನೋ ಸಿನಿಮಾ ಡೈರೆಕ್ಟ್ ಮಾಡಿದ್ದರು. ಇದೀಗ, ಎರಡನೇ ಭಾರಿಗೆ ಡೈರೆಕ್ಟರ್ ಕ್ಯಾಪ್‌ತೊಟ್ಟು ಅಖಾಡಕ್ಕೆ ಇಳಿಯುತ್ತಿದ್ದಾರೆ. ರಾಯನ್ ಧನುಷ್ ನಟನೆಯ 50ನೇ ಸಿನಿಮಾವಾಗಿದ್ದು, ಪ್ಯಾನ್‌ಇಂಡಿಯಾ ಮಟ್ಟದಲ್ಲಿ ನಿರ್ಮಾಣಗೊಳ್ತಿದೆ. ಸನ್‌ಪಿಕ್ಚರ್ಸ್‌ಸಂಸ್ಥೆ ಬಂಡವಾಳ ಹೂಡ್ತಿರೋ ಈ ಚಿತ್ರದಲ್ಲಿ ಕಾಳಿದಾಸ್ ಜಯರಾಮ್, ಸಂದೀಪ್‌ಕಿಶನ್, ಪ್ರಕಾಶ್‌ರಾಜ್,ಎಸ್.ಜೆ. ಸೂರ್ಯ, ಸೆಲ್ವರಾಘವನ್, ವರಲಕ್ಷ್ಮಿ ಶರತ್‌ಕುಮಾರ್, ಅಪರ್ಣ ಬಾಲಮುರುಳಿ, ಸರವಣನ್ ಸೇರಿದಂತೆ ಇನ್ನೂ ಅನೇಕ ದೊಡ್ಡ ದೊಡ್ಡ ಕಲಾವಿದರು ರಾಯನ್‌ಚಿತ್ರದ ಭಾಗವಾಗಿದ್ದಾರೆ. ಇತ್ತೀಚೆಗಷ್ಟೇ ಫಸ್ಟ್ ಲುಕ್‌ರಿಲೀ ಸ್‌ಆಗಿದ್ದು, ಮಾರಿ ಉರುಫ್ ಧನುಷ್ ಲುಕ್ಕು-ಗೆಟಪ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳುವಂತೆ ಮಾಡಿದೆ. ರಾಯನ್ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.