ಪುಷ್ಪ ಅಂದರೆ ಫ್ಲವರ್ ಅಂದ್ಕೊಂಡ್ರಾ ಫೈಯರ್. ಹೀಗೊಂದು ಡೈಲಾಗ್ ಬಾಣ ಬಿಟ್ಟು ಬೆಳ್ಳಿತೆರೆಗೆ ಕಿಚ್ಚು ಹಚ್ಚಿ ಕಮಾಲ್ ಮಾಡಿ ಪುಷ್ಪರಾಜ್ ಅಲಿಯಾಸ್ ಅಲ್ಲು ಅರ್ಜುನ್ ಈಗ ಬರೀ ಟಿಟೌನ್ ಸ್ಟಾರ್ ಆಗಿ ಉಳಿದಿಲ್ಲ ಬದಲಾಗಿ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದಾರೆ. ಪುಷ್ಪ- ಪಾರ್ಟ್ 1 (Pushpa) ತೆರೆಗೆ ಬರುವ ಹೊತ್ತಲ್ಲಿ ಸೌತ್ ಮತ್ತು ನಾರ್ತ್ ಸಿನಿಮಾ ಜಗತ್ತಷ್ಟೇ ಕಣ್ಣರಳಿಸಿತ್ತು. ಆದ್ರೀಗ ಪಾರ್ಟ್-2 ಗಾಗಿ(Pushpa-2) ಇಡೀ ಪ್ಯಾನ್ ವರ್ಲ್ಡ್ ಚಿತ್ತ ನೆಟ್ಟಿದೆ. ಸದ್ಯ ಪುಷ್ಪ-2 ಶೂಟಿಂಗ್ ಭರದಿಂದ ಸಾಗಿದ್ದು, ಇತ್ತೀಚೆಗೆ ಚಾಟ್ ಶೋ ವೊಂದರಲ್ಲಿ ಐಕಾನ್ ಸ್ಟಾರ್ ಅಲ್ಲು (Allu Arjun )ನೀಡಿದ ಹೇಳಿಕೆ ಬಿಗ್ ಬ್ರೇಕಿಂಗ್ ನ್ಯೂಸ್ ಆಗಿದೆ.
ಹೌದು, ಇತ್ತೀಚೆಗೆ ಖಾಸಗಿ ಸಂಸ್ಥೆಯೊಂದು ನಡೆಸಿದ ಸೌತ್ ವರ್ಸಸ್ ಬಾಲಿವುಡ್ (South v/s Bollywood) ಡಿಬೆಟ್‌ನಲ್ಲಿ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ (Allu Arjun ) ಪಾಲ್ಗೊಂಡಿದ್ದಾರೆ. ಈ ವೇಳೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರೋ ಬನ್ನಿ, ಸೌತ್ ಫಿಲ್ಮ್ ಇಂಡಸ್ಟ್ರಿ ಹಾಗೂ ಬಾಲಿವುಡ್ ಬ್ರದರ್ಸ್ ಇದ್ದಂತೆ. ಎರಡು ಚಿತ್ರರಂಗದ ನಡುವೆ ಸ್ಪರ್ಧೆ ಇದೆ ಇಲ್ಲ ಅಂತೇಳಲ್ಲ ಆದರೆ, ಇಬ್ಬರ ನಡುವೆಯೂ ಪರಸ್ಪರ ಪ್ರೀತಿ ಮತ್ತು ಗೌರವವಿದೆ. ಅಷ್ಟಕ್ಕೂ, ನಾವು ದಕ್ಷಿಣ ಭಾರತದವರು, ಅವರು ಉತ್ತರ ಭಾರತದರು ಅಂತ ಪ್ರತ್ಯೇಕಿಸಿ ನೋಡೋದಕ್ಕೆ ನಾನು ಇಷ್ಟಪಡಲ್ಲ. ಯಾಕಂದ್ರೆ, ಎಲ್ಲಾ ಎಂಟರ್‌ಟೈನ್ಮೆಂಟ್ ಇಂಡಸ್ಟ್ರಿ ಒಂದೇ. ಅದುವೇ ಭಾರತೀಯ ಚಿತ್ರರಂಗ ಎಂದಿದ್ದಾರೆ.
ಇದೇ ವೇಳೆ ನಿರೂಪಕಿಯಿಂದ ಎದುರಾದ ಮಗದೊಂದು ಪ್ರಶ್ನೆಗೆ ಉತ್ತರಿಸಿದ ಅಲ್ಲು ಅರ್ಜುನ್,(Allu Arjun) ಕೆಲ ಸಿನಿಮಾಗಳ ಸೋಲಿನಿಂದ ಬಾಲಿವುಡ್ ಜಗತ್ತು ಕತ್ತಲೆಯಲ್ಲಿದೆ ಅಂತ ಷರಾ ಬರೆಯೋದು ತಪ್ಪು. ಬಿಟೌನ್‌ಗೆ ಇದೊಂದು ಸ್ಮಾಲ್ ಬ್ಯಾಡ್ ಫೇಸ್ ಅಷ್ಟೇ. ಹಿಂತಿರುಗಿ ನೋಡಿದರೆ ಭಾರತೀಯ ಚಿತ್ರರಂಗಕ್ಕೆ ಬಾಲಿವುಡ್ ಸಿನಿಮಾ ಲೋಕದ ಕೊಡುಗೆ ಅಪಾರ. ಆರೇಳು ದಶಕಗಳಿಂದ ನಿರಂತರವಾಗಿ ಇಂಡಿಯನ್ ಸಿನಿಮಾ ಜಗತ್ತಿಗೆ ಬಿಟೌನ್ ಅತ್ಯದ್ಭುತ ಸಿನಿಮಾಗಳನ್ನ ನೀಡುತ್ತಾ ಬಂದಿದೆ. ಸದ್ಯ ಕೆಲ ಸಿನಿಮಾಗಳು ಸೋಲು ಕಾಣುತ್ತಿರಬಹುದಷ್ಟೇ. ಅಷ್ಟಕ್ಕೂ, ಹಿಂದಿ ಸಿನಿಮಾಗಳಿಂದ ಸೌತ್‌ನವರು ಪ್ರೇರಣೆಗೊಂಡಿದ್ದಾರೆ. ಅಟ್ ದಿ ಸೇಮ್ ಟೈಮ್ ದಕ್ಷಿಣ ಭಾರತೀಯ ಸಿನಿಮಾಗಳಿಂದ ಬಿಟೌನ್‌ವರು ಪ್ರೇರಿತರಾಗಿದ್ದಾರೆ. ಹೀಗೆ, ಪರಸ್ಪರ ಇನ್ಸ್‌ಪೈರ್ ಆಗಿ ಸಿನಿಮಾ ಮಾಡಿಕೊಂಡು ಮುನ್ನಡೆಯುತ್ತಿದ್ದೇವೆ. ನಮ್ಮ ಮಧ್ಯೆ ಅಣ್ತಮಾಸ್ ಬಾಂಡಿಂಗ್ ಇದೆ ಎಂದಿದ್ದಾರೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun)
ಅಂದ್ಹಾಗೇ, ಅಲ್ಲು (Allu Arjun) ಮಾತ್ರವಲ್ಲ ಸೌತ್‌ನ ಬಹುತೇಕ ನಟರು ಇದೇ ಮಾತನ್ನ ಹೇಳಿದ್ದಾರೆ. ನಾರ್ತ್‌ನಲ್ಲೂ ಕೆಲ ನಟರುಗಳು ಸೌತ್ ವರ್ಸಸ್ ಬಾಲಿವುಡ್ ಅನ್ನೋದನ್ನ ವಿರೋಧಿಸಿದ್ದಾರೆ. ಆದರೆ, ಕಳೆದ ನಾಲ್ಕೈದು ವರ್ಷಗಳಿಂದ ಸೌತ್ ವರ್ಸಸ್ ಬಾಲಿವುಡ್ ಎನ್ನುವ ಚರ್ಚೆ ಜೋರಾಗಿದೆ. ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ನಮ್ಮ ಸಿನಿಮಾಗಳು ಹಿಂದಿ ಸಿನಿಮಾಗಳಿಗೆ ಭಾರೀ ಪೈಪೋಟಿ ಕೊಡುತ್ತಿದೆ. ಬಾಲಿವುಡ್ ಅಂಗಳದಲ್ಲಿ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲೂ ದಕ್ಷಿಣ ಭಾರತೀಯ ಸಿನಿಮಾಗಳ ತಾಕತ್ತೇನು ಅನ್ನೋದನ್ನ ಪ್ರೂ ಮಾಡಿ ತೋರಿಸುತ್ತಿವೆ. ಒಂದ್ಕಾಲದಲ್ಲಿ ಭಾರತೀಯ ಚಿತ್ರರಂಗ ಅಂದರೆ ಬಾಲಿವುಡ್ ಎನ್ನುವಂತಾಗಿಬಿಟ್ಟಿತ್ತು. ದಕ್ಷಿಣದ ಸಿನಿಮಾಗಳನ್ನು ಬಿಟೌನ್ ಮಂದಿ ಸಣ್ಣದಾಗಿಯೇ ನೋಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ನಮ್ಮ ಸಿನಿಮಾಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡ್ತಿವೆ.