ಸ್ಯಾಂಡಲ್ವುಡ್ ಶೋಮ್ಯಾನ್ ಜೋಗಿ ಪ್ರೇಮ್ (Prem) ಹಾಗೂ ಆ್ಯಕ್ಷನ್ ಪ್ರಿನ್ಸ್ ಧ್ರುವ(DruvaSarja) ಸರ್ಜಾ ಕಾಂಬಿನೇಷನ್ನಲ್ಲಿ ಮೂಡಿಬರ್ತಿರೋ ಹೈವೋಲ್ಟೇಜ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಕೆಡಿ (KD-The Devil). ಈ ಚಿತ್ರಕ್ಕಾಗಿ ಇವತ್ತು ಕನ್ನಡ ಚಿತ್ರರಂಗ ಮಾತ್ರವಲ್ಲ ಆಲ್ ಓವರ್ ಇಂಡಿಯಾ ಕಣ್ಣರಳಿಸಿದೆ. ಬಾಲಿವುಡ್ ಬಾಬ ಸಂಜಯ್ ದತ್ತ್ (Sanjaydutt), ಬಿಟೌನ್ ಹಾಟ್ ಬ್ಯೂಟಿ ಶಿಲ್ಪಾಶೆಟ್ಟಿ(ShilpaShetty) ಜೊತೆಗೆ ಗಂಧದಗುಡಿಯ ಬಿಗ್ ಸ್ಟಾರ್ಗಳಾದ ಕ್ರೇಜಿಸ್ಟಾರ್ ರವಿಚಂದ್ರನ್(Ravichandran) ರಮೇಶ್ ಅರವಿಂದ್ (RameshaArvind) ಸೇರಿದಂತೆ ಹಲವರು ಈ ಸಿನಿಮಾದಲ್ಲಿದ್ದಾರೆ. ಅಷ್ಟಕ್ಕೂ, ಇದೆಲ್ಲಾ ನಿಮಗೆ ಗೊತ್ತಿರೋ ವಿಚಾರವೇ. ತಾಜಾ ಸಮಾಚಾರ ಏನಂದರೆ ಕೆಡಿ ಬಳಗದಿಂದ ಅದೊಂದು ಫೋಟೋ ಹೊರಬಿದ್ದಿದೆ. ಆ ಫೋಟೋದಲ್ಲಿ ಬಹದ್ದೂರ್ ಹೀರೋ ಧ್ರುವ ಸರ್ಜಾ(DruvaSarja) , ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (ShilpaShetty) ಜೊತೆಗೆ ರಿಯಲ್ ಸ್ಟಾರ್ ಉಪೇಂದ್ರ, ಪ್ರಿಯಾಂಕ ಉಪೇಂದ್ರ(Upendra), ಆಕ್ಷನ್ ಕ್ವೀನ್ ಮಾಲಾಶ್ರೀ(Malashri) ಹಾಗೂ ಅವರ ಮಗಳು ಆರಾಧನಾ ರಾಮ್(Aradhana Ram)ಇದ್ದಾರೆ.ಸದ್ಯ ಇದೊಂದು ಫೋಟೋ ಸಂಚಲನ ಸೃಷ್ಟಿಸಿದೆ. ಈ ಎಲ್ಲಾ ಧ್ರುವತಾರೆಗಳು ʻಕೆಡಿʼ ಚಿತ್ರದಲ್ಲಿ ಬಣ್ಣ ಹಚ್ಚಿರಬಹುದು. ಬಹುತಾರಾಗಣದ ಕೆಡಿಯಲ್ಲಿ ನಮ್ಮ ಈ ಎಲ್ಲಾ ತಾರೆಯರು ಮಿನುಗಿರಬಹುದು. ಹೀಗೊಂದು ಸಂಶಯ ಎಲ್ಲರನ್ನೂ ಕಾಡ್ತಿದೆ.
ಅಷ್ಟಕ್ಕೂ. ಈ ಫೋಟೋದ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಸೆನ್ಸೇಷನ್ ಕ್ರಿಯೇಟ್ ಮಾಡಿರೋದಂತೂ ಸತ್ಯ. ಕೆಡಿ (KD-The Devil). ಕಣದಲ್ಲಿ ಬಿಟೌನ್ ತಾರೆಯ ಜೊತೆ ಸಮಾಗಮಗೊಂಡಿರೋ ಸ್ಯಾಂಡಲ್ವುಡ್ ಸ್ಟಾರ್ಸ್ಗಳನ್ನ ನೋಡಿ ಸಿನಿಮಾ ಪ್ರೇಮಿಗಳು ಹುಚ್ಚೆದ್ದಿದ್ದಾರೆ. ಪ್ರೇಮ್ ಸಾಹೇಬ್ರು(Prem), ಸೌತ್-ನಾರ್ತ್ ತಾರೆಯರೆನ್ನೆಲ್ಲಾ ಒಟ್ಟುಗೂಡಿಸಿ ಮ್ಯಾಜಿಕ್ ಮಾಡೋದಕ್ಕೆ ಹೊರಟಂತಿದೆ ಅಂತ ಮಾತನಾಡಿಕೊಳ್ತಿದ್ದಾರೆ. ಅಷ್ಟಕ್ಕೂ, ಇವ್ರೆಲ್ಲಾ ಒಟ್ಟಾಗಿದ್ದು ಕೆಡಿ (KD-The Devil) ಚಿತ್ರಕ್ಕಾಗಿನಾ ಅಥವಾ ಯಾವುದಾದರೂ ಪಾರ್ಟಿಯಲ್ಲಿ ಈ ಎಲ್ಲಾ ತಾರೆಯರ ಸಮಾಗಮವಾಯ್ತಾ ಗೊತ್ತಿಲ್ಲ. ಆದರೆ, ಇದೊಂದು ಫೋಟೋ ಕಲಾಭಿಮಾನಿಗಳ ತಲೆಕೆಡಿಸಿರೋದಂತೋ ಸತ್ಯ. ಅಂದ್ಹಾಗೇ, ಕೆಡಿ ಸಿನಿಮಾದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸತ್ಯವತಿ ಪಾತ್ರ ಪ್ಲೇ ಮಾಡ್ತಿದ್ದಾರೆ. ಈಗಾಗಲೇ ಶಿಲ್ಪಾ ರೆಟ್ರೋ ಲುಕ್ಕು ರಿವೀಲ್ ಆಗಿದ್ದು, ಸತ್ಯವತಿ ದರ್ಬಾರ್ ನೋಡೋದಕ್ಕೆ ಸಿನಿಮಾಪ್ರೇಮಿಗಳು ಕಾತುರರಾಗಿದ್ದಾರೆ.
ಇನ್ನೂ ಕೆಡಿ (KD-The Devil) ಸಿನಿಮಾದ ಬಗ್ಗೆ ಹೆಚ್ಚುನು ರಿವೀಲ್ ಮಾಡದೇ ಕುತೂಹಲ ಕಾಯ್ದಿರಿಸಿಕೊಂಡಿರೋ ಪ್ರೇಮ್ ಸಾಹೇಬ್ರು, ಇತ್ತೀಚೆಗೆ ಖಾಸಗಿ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ 42 ದಿನಗಳ ಕಾಲ ನಡೆದ ನೈಟ್ ಶೂಟಿಂಗ್ ಬಗ್ಗೆ ಮಾಹಿತಿ ಹೊರಹಾಕಿದ್ದರು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭರ್ತಿ 42 ದಿನಗಳ ಕಾಲ ಚಿತ್ರೀಕರಣ ನಡೆಸಿದೆವು. ಆ 42 ದಿನವೂ ನೈಟ್ ಶೂಟಿಂಗೇ ಆಗಿತ್ತು. ಒಂದೇ ಷೆಡ್ಯೂಲ್ಡ್ನಲ್ಲಿ ರಾತ್ರಿ ವೇಳೆ ಚಿತ್ರೀಕರಣ ಹಮ್ಮಿಕೊಂಡ ನಮಗೆ, ಸಂಜು ಬಾಬ(Sanjaydutt) ಫುಲ್ ಸಪೋರ್ಟ್ ಮಾಡಿದರು ಅಂತ ಹೇಳಿಕೊಂಡಿದ್ದರು. ಅಂದ್ಹಾಗೇ, ಈ ಚಿತ್ರದಲ್ಲಿ ಸಂಜಯ್ ದತ್ತ್, ವಿಶಾಲ್ ಅಗ್ನಿಹೋತ್ರಿ ಪಾತ್ರ ನಿರ್ವಹಿಸಿದ್ದಾರೆ. ಕಾಳಿದಾಸ ಅಲಿಯಾಸ್ ಆ್ಯಕ್ಷನ್ ಪ್ರಿನ್ಸ್(Druvasarja) ಎದುರು ಘರ್ಜಿಸಿದ್ದಾರೆ. ಬೆಳ್ಳಿತೆರೆ ಮೇಲೆ ಹೇಗಿರಲಿದೆ ಅಧೀರ ಹಾಗೂ ಕಾಳಿದಾಸನ ಘರ್ಜನೆ ಅನ್ನೋದನ್ನ ಕುತೂಹಲದಿಂದ ಕಾದುನೋಡಬೇಕು.
ಒಟ್ನಲ್ಲಿ ʻಕೆಡಿʼ ಖಡಕ್ಕಾಗೇ ರೆಡಿಯಾಗ್ತಿದೆ. ಪ್ರತಿಷ್ಟಿತ ನಿರ್ಮಾಣ ಸಂಸ್ಥೆ ಕೆವಿಎನ್(Kvn) ಕೋಟಿ ಕೋಟಿ ಬಂಡವಾಳ ಸುರಿದು ʻಕೆಡಿʼನಾ ಕೆಂಡಕೆಂಡದ ಹಾಗೇಯೇ ನಿರ್ಮಿಸಿದೆ. ಆ ಸುಡು ಸುಡು ಕಣದಲ್ಲಿ ಬಾಲಿವುಡ್ನ ಗರ್ಮಿ ಬ್ಯೂಟಿ, ನಾಚ್ ಮೇರಿ ರಾಣಿ (NoraFatehi) ಕುಣಿದು ಕುಪ್ಪಳಿಸಿದ್ದಾಳೆ. ಅಷ್ಟಕ್ಕು, ಆಕೆ ತನ್ನ ಬಳುಕೋ ಸೊಂಟ ಕುಣಿಸಿರೋದು ಬೆಂಕಿಚೆಂಡು ಧ್ರುವ ಜೊತೆಗಾ ಅಥವಾ ಅಧೀರ ಸಂಜುಬಾಬ ಜೊತೆಗಾ ಅನ್ನೋ ಕ್ಯೂರಿಯಾಸಿಟಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಎನಿವೇ, ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇದೇ ಏಪ್ರಿಲ್ 22ರಂದು ಬೆಳ್ಳಿತೆರೆಗೆ ಕೆಡಿ (KD-The Devil) ಗ್ರ್ಯಾಂಡ್ ಎಂಟ್ರಿಕೊಡಬೇಕಿತ್ತು. ಆದ್ರೀಗ, ಕೆಡಿ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ ಅನ್ನೋ ಸುದ್ದಿ ಇದೆ. ಐದು ಭಾಷೆಯಲ್ಲಿ ಕೆಡಿ (KD-The Devil) ತಯಾರಾಗ್ತಿದ್ದು, ಲೇಟಾದ್ರೂ ಲೇಟೆಸ್ಟ್ ಆಗಿ ಎಂಟ್ರಿಕೊಡಲಿದೆ ಅದಂತೂ ಸತ್ಯಸ್ಯಸತ್ಯ.