ಬುಧವಾರ, ಜುಲೈ 2, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

Nayana: ʻನನ್ನ ಹೆಣ ಯಾರ ಕೈಗೂ ಸಿಗಬಾರದುʼ ಹಿಂಗ್ ಸಾಯಬೇಕು ಅಂತ ಹೊರಟಿದ್ರಂತೆ ಕಾಮಿಡಿ ಕಿಲಾಡಿ ನಯನಾ!

Vishalakshi Pby Vishalakshi P
19/03/2024
in Majja Special
Reading Time: 1 min read
Nayana: ʻನನ್ನ ಹೆಣ ಯಾರ ಕೈಗೂ ಸಿಗಬಾರದುʼ ಹಿಂಗ್ ಸಾಯಬೇಕು ಅಂತ ಹೊರಟಿದ್ರಂತೆ ಕಾಮಿಡಿ ಕಿಲಾಡಿ ನಯನಾ!

ಕಾಮಿಡಿ ಕಿಲಾಡಿಗಳು ನಯನಾ(Comedy Khiladigalu nayana) ಯಾರಿಗೆ ಗೊತ್ತಿಲ್ಲ ಹೇಳಿ. ಇಡೀ ಕರ್ನಾಟಕಕ್ಕೆ ನಯನಾ ಪರಿಚಯವಿದೆ. ಆಕೆಯ ಅಭಿನಯಕ್ಕೆ, ಹೊಟ್ಟೆ ಹುಣ್ಣಾಗುವಂತೆ ನಗಿಸೋ ಚಾಕಚಕ್ಯತೆಗೆ ಮತ್ತು ಡೇರ್‌ ಅಂಡ್‌ ಡೆವಿಲ್‌ ನೇಚರ್‌ಗೆ ಇಡೀ ಕರುನಾಡು ಕ್ಲೀನ್‌ ಬೋಲ್ಡ್‌ ಆಗಿದೆ. ಈಕೆ ತೆರೆಮೇಲೆ ಬಂದರೆ ಸಾಕು ಕರುನಾಡ ಮಂದಿ ಹುಚ್ಚೇಳುತ್ತಾರೆ. ಯಾರೆತ್ತ ಮಗಳೋ ಈಕೆ ಅವರ ಹೆತ್ತವರ ಒಡಲು ತಣ್ಣಗಿರಲಿ ಎನ್ನುತ್ತಾ ಆಕಾಶಕ್ಕೆ ಕೈ ಮುಗಿಯುತ್ತಾರೆ. ನಮ್ಮನ್ನೆಲ್ಲಾ ನಕ್ಕು ನಗಿಸೋ ನಿಮ್ಮ ಮಗಳು ಮತ್ತು ನೀವು ನೂರು ವರ್ಷ ಸಂದಾಕಿರಿ ಅಂತ ಆಶೀರ್ವಾದ ಮಾಡ್ತಾರೆ. ಆದರೆ, ನಯನಾಗೆ ಈ ಬದುಕೇ ಬೇಡ ಎನ್ನುವಷ್ಟರ ಮಟ್ಟಿಗೆ ಸಾಕ್‌ ಸಾಕಾಗಿ ಹೋಗಿತ್ತು ಜೀವನ ಅಂದರೆ ಯಾರಾದ್ರೂ ನಂಬೋಕೆ ಆಗುತ್ತಾ? ಯಾವುದೇ ಕಾರಣಕ್ಕೂ ಇಲ್ಲ. ಆದರೆ, ವಾಸ್ತವ ಕಟುಸತ್ಯ ಅಂತಾರಲ್ಲ ಹಾಗೇ ನಯನಾ ತಮ್ಮ ಬದುಕು ಮುಗಿಸಿಕೊಳ್ಳಬೇಕು ಅಂತ ಹೊರಟಿದ್ದು ಅಷ್ಟೇ ಸತ್ಯ. ಅದನ್ನ ಖುದ್ದು ನಯನಾನೇ ಒಪ್ಪಿಕೊಂಡಿದ್ದಾರೆ.

ಅಲ್ಲಾ, ನಾವೆಲ್ಲಾ ನಯನಾನ (Comedy Khiladigalu nayana) ಸ್ಟ್ರಾಂಗ್‌ ವುಮೆನ್‌, ರೌಡಿಬೇಬಿ, ಲೇಡಿ ಡಾನ್‌ ಅಂತ ಅಂದ್ಕೊಂಡಿದ್ವಿ. ಆದರೆ,‌ ನಯನಾ ಇಷ್ಟೊಂದು ವೀಕ್‌ ಮೈಂಡೆಡ್‌ ವುಮೆನ್ನಾ ಅಂತ ಗೊತ್ತಿರಲಿಲ್ಲ ಅಂತ ಕೆಲವರು ಬೇಜಾರಾಗೋದು ಖರ್ರೆ. ಆದರೆ, ಅಸಲಿ ಸತ್ಯ ಕೇಳಿದರೆ ನೀವು ಕಣ್ಣೀರಾಗಿರ್ತೀರಿ. ಯಸ್‌, ಕಾಮಿಡಿ ಕಿಲಾಡಿಗಳು ನಯನಾ ಡೇರಿಂಗ್‌ ವುಮೆನ್ನೇ. ಆದರೆ, ತಾಯಿಯಾಗುವ ಸಂತಸದಲ್ಲಿರುವಾಗ ಬದುಕು ಕೊಟ್ಟ ಪೆಟ್ಟು ಇದೆಯಲ್ಲ ಆ ಪೆಟ್ಟಿನಿಂದಾಗಿ ನಯನಾ ತಮ್ಮ ಜೀವನವನ್ನ ಕೊನೆಗಾಣಿಸಿಕೊಳ್ಳೋದಕ್ಕೆ ರೆಡಿಯಾಗಿದ್ದರು. ತನ್ನ ಹೆಣ ತನ್ನ ಕುಟುಂಬದ ಯಾರೊಬ್ಬರ ಕೈಗೂ ಸಿಗಬಾರದು ಹಂಗ್‌ ಸಾಯಬೇಕು ಅಂತ ಡಿಸೈಡ್‌ ಮಾಡಿದ್ರು. ಆದರೆ, ಆ ದೇವರು ಅದಕ್ಕೆ ಆಸ್ಪದ ಕೊಡಲಿಲ್ಲ, ಯಾವ ಸಂತೋಷವನ್ನ ನಯನಾ(Comedy Khiladigalu nayana) ಜೀವನದಿಂದ ಕಿತ್ಕೊಂಡಿದ್ನೋ, ಆ ಸಂತೋಷವನ್ನ ಆ ಭಗವಂತ ಮರಳಿ ನಯನಾಗೆ ನೀಡಿದ. ಎರಡು ಸಲ ಅಬಾರ್ಷನ್‌ ಆದ ನೋವಿಂದ ನರಳುತ್ತಿದ್ದ ನಯನಾಗೆ ತಾಯಿ ಭಾಗ್ಯ ಕರುಣಿಸಿದ.

ಹೌದು, ಈ ಬಗ್ಗೆ ಖುದ್ದು ನಯನಾನೇ (Comedy Khiladigalu nayana) ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ನಾನು ಪ್ರಗ್ನೆಂಟ್‌ ಅಂತ ಕನ್ಫರ್ಮ್‌ ಮಾಡಿಕೊಳ್ಳುವ ಎರಡ್ಮೂರು ದಿನಕ್ಕೂ ಮುಂಚೆ ಸಾಯಬೇಕು ಅಂತ ತೀರ್ಮಾನ ಮಾಡಿದ್ದೆ. ನಂಗೆ ಒಂಟಿತನ ಅನ್ನೋದು ತುಂಬಾ ಕಾಡ್ತಿತ್ತು, ಏನಾಗ್ತಿದೆ ನಿನಗೆ ಹೇಳು ಅಂತ ಕೇಳೋರು ಬೇಕಿತ್ತು. ನನ್ನ ಮನಸ್ಸಲ್ಲಿ ಆಗಿದ್ದನ್ನ ಹೇಳಿಕೊಂಡಾಗ ತಲೆ ತುಂಬಾ ನೆಗೆಟಿವಿಟಿನೇ ತುಂಬಿಕೊಂಡಿದ್ದೀಯಾ ಅಂತ ಬೈಯ್ತಿದ್ದರು. ಇದೆಲ್ಲಾ, ನಂಗೆ ತುಂಬಾ ಹಿಂಸೆ ಅನ್ನಿಸೋಕೆ ಶುರುವಾಗಿತ್ತು. ಏನ್‌ ಲೈಫ್‌ ಗುರು ನಂದು. ಕೈ ತುಂಬಾ ದುಡಿಮೆನೂ ಇದೆ. ಓಡಾಡೋಕೆ ಕಾರು-ಬೈಕು ಇದೆ. ಆದರೆ, ಮಕ್ಕಳು ಇಲ್ಲವಲ್ಲ ಅನ್ನೋ ನೋವು ನಯನಾನ ಕಾಡೋಕೆ ಶುರುಮಾಡಿತ್ತು. ಅದೇ ನೋವಲ್ಲಿ ಉಸಿರು ನಿಲ್ಲಿಸಿಕೊಳ್ಳೋದಕ್ಕೆ ನಯನಾ ಟ್ಯಾಬ್ಲೆಟ್ಸ್‌ ಕೂಡ ತಗೊಂಡಿದ್ರಂತೆ. ಇದಾಗಿ ಮೂರು ದಿನ ಕಳೆದು ಪತಿ ಶರತ್‌ ಜೊತೆ ಆಸ್ಪತ್ರೆಗೆ ಹೋದಾಗ ಪ್ರಗ್ನೆಂಟ್‌ ಅನ್ನೋ ವಿಚಾರ ಗೊತ್ತಾಯ್ತಂತೆ. ಆ ಕ್ಷಣಕ್ಕೆ ನಯನಾ (Comedy Khiladigalu nayana)ತಮ್ಮ ನಿರ್ಧಾರ ಬದಲಾಯಿಸಿಕೊಂಡರಂತೆ. ಇಷ್ಟು ದಿನ ಸುತ್ತಮುತ್ತಲಿನವರಿಗಾಗಿ ಬದುಕಿದ್ದೇನೆ, ಇನ್ಮೇಲೆ ನನ್ನ ಹೊಟ್ಟೇಲಿರೋ ಕಂದಮ್ಮನಿಗೋಸ್ಕರ ಬದುಕಬೇಕು ಅಂತ ಡಿಸೈಡ್‌ ಮಾಡಿದ್ರಂತೆ.

ಇವತ್ತು ನಯನಾಗೆ (Comedy Khiladigalu nayana) ಮುದ್ದಾದ ಒಂದು ಹೆಣ್ಣು ಮಗು ಜನಿಸಿದೆ. ಆ ಮಗು ದೇವರು ಕೊಟ್ಟ ವರ ಎನ್ನುವ ನಯನಾ, ನನ್ನ ಮಗಳೇ ನನ್ನ ಜೀವನದ ಸೂಪರ್‌ ಸ್ಟಾರ್‌ ಅಂತ ಸ್ಟಾರ್‌ ಸುವರ್ಣ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಅವಳು ನನ್ನ ಜೀವನದಲ್ಲಿ ಬಾರದೇ ಹೋಗಿದ್ದರೆ ಇಷ್ಟೊತ್ತಿಗೆ ಕರುನಾಡ ಜನತೆಯ ಕಣ್ಣಲ್ಲಿ ನಾನು ನೆನಪಾಗಿ ಉಳಿಯುತ್ತಿದ್ದೆ ಎಂದು ಕಣ್ಣೀರಾಗಿದ್ದಾರೆ. ಇದನ್ನೆಲ್ಲಾ ನೋಡಿ ನಾವು-ನೀವು ಅರ್ಧ ಮಾಡಿಕೊಳ್ಳಬೇಕಿರೋದು ಒಂದೇ. ಬದುಕಿಗೆ ಬರೀ ದುಡ್ಡು, ಆಸ್ತಿ, ಅಂತಸ್ತು, ಐಶ್ವರ್ಯ, ಜನಪ್ರಿಯತೆ ಇದ್ದರೆ ಸಾಕಾಗಲ್ಲ. ಅದನ್ನೂ ಮೀರಿದ್ದು ಬದುಕಲ್ಲಿದೆ. ಅದುವೇ, ನೆಮ್ಮದಿ ಮತ್ತು ಸಂತೋಷ. ಅದು ಎಲ್ಲಿ ಸಿಗುತ್ತೆ ಅಂತ ಹುಡುಕಿಕೊಂಡು ಹೋಗೋದಕ್ಕಿಂತ, ಅಂಗೈಯಲ್ಲಿರುವ ಬೆಣ್ಣೆನಾ ತುಪ್ಪ ಮಾಡಿಕೊಳ್ಳುವ ಕಲೆ ಗೊತ್ತಿದ್ದರೆ ಸಾಕು ಅನ್ಸುತ್ತೆ.

ಎನಿವೇ, ನಯನಾ (Comedy Khiladigalu nayana) ತಮ್ಮ ನಿರ್ಧಾರ ಬದಲಿಸಿ ಹಲವರಿಗೆ ಸ್ಪೂರ್ತಿಯಾಗಿದ್ದಾರೆ. ದುಡುಕಿ ಕೈಗೊಳ್ಳಬೇಕಾದ ತೀರ್ಮಾನದಿಂದ ಹಿಂದೆ ಸರಿದು ತಮ್ಮ ಬದುಕನ್ನ ಹಸನಾಗಿಸಿಕೊಂಡಿದ್ದಾರೆ. ಅಂದ್ಹಾಗೇ, ನಯನಾ ಹುಬ್ಬಳಿಯಿಂದ ಬೆಂಗಳೂರಿಗೆ ಬಂದು ಯಾವುದೇ ಗಾಡ್‌ಫಾದರ್‌ಗಳ ಸಹಾಯವಿಲ್ಲದೇ ಬಣ್ಣದ ಲೋಕದಲ್ಲಿ ನೆಲೆಕಂಡುಕೊಂಡವರು. ಕಾಮಿಡಿ ಕಿಲಾಡಿಗಳು ಶೋ ಮೂಲಕ ಅವರು ಕರುನಾಡಲ್ಲಿ ಗಳಿಸಿದ ಪ್ರೀತಿ ಮತ್ತು ಖ್ಯಾತಿಗೆ ಬೆಲೆ ಕಟ್ಟೋದಕ್ಕೆ ಸಾಧ್ಯನೇ ಇಲ್ಲ. ಹೀಗೆ ಬೆಳೆದು ನಿಂತಿರೋ ನಯನಾ(Comedy Khiladigalu nayana) ಬದುಕಲ್ಲೂ ಜಗತ್ತಿನ ಮುಂದೆ ಹೇಳಿಕೊಳ್ಳಲಾಗದ ನೋವು-ಸಂಕಟವಿತ್ತು. ಕೊನೆಗೂ ಅದನ್ನು ಹೊರಗಾಕಿದ್ದಾರೆ. ಜೀವನಕ್ಕೆ ಕಾಸು, ಖ್ಯಾತಿ ಅಷ್ಟೇ ಇಂಪಾರ್ಟೆಂಟ್‌ ಅಲ್ಲ ಖುಷಿ ಮುಖ್ಯ ಅನ್ನೋದನ್ನ ನಾಲ್ಕು ಜನರಿಗೆ ಅರ್ಥ ಮಾಡಿಸಿದ್ದಾರೆ. ನಗುವಿನ ಹಿಂದೆ ದುಃಖ ಅಡಗಿರುತ್ತೆ, ನಗಿಸುವವರ ಬಾಳಲ್ಲಿ ನೂರೆಂಟು ನೋವಿರುತ್ತೆ ಅನ್ನೋದು ನಯನಾ ಕಣ್ಣೀರಾಗಾಥೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ಸೋ ಎಲ್ಲರು ಬದುಕಿಗೆ ನಗು ಎಷ್ಟು ಮುಖ್ಯ ಎಂಬುದನ್ನು ಅರಿತು ನಡೆದರೆ ಅಷ್ಟೇ ಸಾಕು… ಸಾರ್ಥಕ ಬದುಕು.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
S. S. Rajamouli: ಜಪಾನ್‌ ಆಡಿಯನ್ಸ್‌ ಮುಂದೆ ಮುಂದಿನ ಚಿತ್ರದ ಅಪ್‌ಡೇಟ್‌ ಕೊಟ್ಟರು ರಾಜಮೌಳಿ!

S. S. Rajamouli: ಜಪಾನ್‌ ಆಡಿಯನ್ಸ್‌ ಮುಂದೆ ಮುಂದಿನ ಚಿತ್ರದ ಅಪ್‌ಡೇಟ್‌ ಕೊಟ್ಟರು ರಾಜಮೌಳಿ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.