ಬುಧವಾರ, ಜುಲೈ 2, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

Kantara-Chapter1:ದಾಖಲೆಯ ಮೊತ್ತಕ್ಕೆ ಸೇಲಾಯ್ತು ʻಕಾಂತಾರ ಚಾಪ್ಟರ್‌-1ʼ ಓಟಿಟಿ ರೈಟ್ಸ್‌!

Vishalakshi Pby Vishalakshi P
20/03/2024
in Majja Special
Reading Time: 1 min read
Kantara-Chapter1:ದಾಖಲೆಯ ಮೊತ್ತಕ್ಕೆ ಸೇಲಾಯ್ತು ʻಕಾಂತಾರ ಚಾಪ್ಟರ್‌-1ʼ ಓಟಿಟಿ ರೈಟ್ಸ್‌!

ಪ್ಯಾನ್‌ ಇಂಡಿಯಾ ಕಣ್ಣರಳಿಸಿರೋ ಕಾಯ್ತಿರೋ ಸಿನಿಮಾಗಳ ಪೈಕಿ ಕನ್ನಡದ ಕಾಂತಾರ ಚಾಪ್ಟರ್-1(Kantara-Chapter1)ಕೂಡ ಒಂದು. ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ (RishabShetty) ನಿರ್ದೇಶಿಸಿ, ನಟಿಸಲಿರೋ ಕಾಂತಾರ ಪ್ರೀಕ್ವೆಲ್‌ಗಾಗಿ ಸಮಸ್ತ ಸಿನಿಮಾ ಪ್ರೇಮಿಗಳು ಚಾತಕ ಚಾತಕಪಕ್ಷಿ ಥರ ಕಾಯ್ತಿದ್ದಾರೆ. ಅದರಲ್ಲೂ ಟೀಸರ್‌ ರಿಲೀಸ್‌ ಆದ್ಮೇಲಂತೂ ಕಾಂತಾರ ಪ್ರೀಕ್ವೆಲ್‌ ಮೇಲಿನ ನಿರೀಕ್ಷೆ ಸಪ್ತಸಾಗರವನ್ನೇ ದಾಟಿ ನಿಂತಿದೆ. ಫಸ್ಟ್‌ ಲುಕ್‌ ಮೂಲಕವೇ ಪ್ಯಾನ್‌ ಇಂಡಿಯಾ ಲೋಕವನ್ನ ಥಂಡಾ ಹೊಡೆಸಿರೋ ಡಿವೈನ್‌ ಸ್ಟಾರ್‌, ಸಿನಿಮಾದಲ್ಲಿ ಇನ್ಯಾವ ರೀತಿ ಧಗಧಗಿಸಬಹುದು. ಕಾಡುಬೆಟ್ಟು ಶಿವಪ್ಪನ ಅಪ್ಪನ ಅವತಾರದಲ್ಲಿ ಶೆಟ್ರು ಹೇಗ್‌ ಕಾಣಬಹುದು ಅಂತ ಕುತೂಹಲದಿಂದ ಕಣ್‌ಗಳಿಂದ ಎದುರುನೋಡ್ತಿದ್ದಾರೆ. ಹೀಗಿರುವಾಗಲೇ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ. ಅಮೇಜಾನ್‌ ಪ್ರೈಮ್‌ ಸಂಸ್ಥೆ(AmazonPrime) ಕೋಟಿ ಕೋಟಿ ಸುರಿದು ಓಟಿಟಿ ರೈಟ್ಸ್‌ನ ತನ್ನದಾಗಿಸಿಕೊಂಡಿರೋ ಧಮಾಕೇದಾರ್‌ ಖಬರ್‌ ರಿವೀಲ್‌ ಆಗಿದೆ.

ಯಸ್‌, ಕಾಂತಾರ ಚಾಪ್ಟರ್‌-1(Kantara-Chapter1) ಚಿತ್ರದ ಡಿಜಿಟಲ್‌ ರೈಟ್ಸ್‌ ಅಮೇಜಾನ್‌ ಸಂಸ್ಥೆ(AmazonPrime) ಪಾಲಾಗಿದೆ. ಈ ಹಿಂದೆ ಇದೇ ಸಂಸ್ಥೆ ಕಾಂತಾರ ರಿಲೀಸ್‌ ಆದ್ಮೇಲೆ ಡಿಜಿಟಲ್‌ ರೈಟ್ಸ್‌ ಕೊಂಡುಕೊಂಡಿತ್ತು. ಆದ್ರೀಗ, ಕಾಂತಾರ ಪ್ರೀಕ್ವೆಲ್‌ ಶೂಟಿಂಗ್‌ ಆರಂಭವಾಗುವ ಮೊದಲೇ ಕೋಟಿ ಖಜಾನೆ ತೆರೆದಿಟ್ಟು ಓಟಿಟಿ ರೈಟ್ಸ್‌ನ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಅದೆಷ್ಟು ಕೋಟಿ ಸುರಿದು ಹಕ್ಕುಗಳನ್ನು ಪಡೆದುಕೊಂಡಿದೆ ಎಂಬ ಮಾಹಿತಿನಾ ಬಿಟ್ಟುಕೊಟ್ಟಿಲ್ಲವಾದರೂ, ದಾಖಲೆಯ ಮೊತ್ತ ಕೊಟ್ಟೇ ಖರೀದಿ ಮಾಡಿದೆ ಅನ್ನೋದು ಸಿನಿದುನಿಯಾದಿಂದ ಸಿಕ್ಕಿರೋ ಮಾಹಿತಿ. ಅಲ್ಲಿಗೆ ಮೊದಲ ಹೆಜ್ಜೆಯಲ್ಲೇ ಕಾಂತಾರ ನಯಾ ದಾಖಲೆಗೆ ಪಾತ್ರವಾದಂತಾಯ್ತು. ಈ ಹಿಂದೆ ಸೀಕ್ವೆಲ್‌ ಮೂಲಕ ಚಿತ್ರಜಗತ್ತಿನಲ್ಲಿ ಅಚ್ಚಳಿಯದ ದಾಖಲೆ ಕೆತ್ತಿರೋ ಶೆಟ್ರ ಕಾಂತಾರ ಚಿತ್ರ, ಈಗ ಪ್ರೀಕ್ವೆಲ್‌(Kantara-Chapter1) ಮೂಲಕ ಮತ್ತಷ್ಟು ಮಗದಷ್ಟು ದಾಖಲೆಗಳನ್ನು ಬರೆಯುತ್ತೆ ಅನ್ನೋದಕ್ಕೆ ಸದ್ಯ ಡಿಜಿಟಲ್‌ ರೈಟ್ಸ್‌ ದುಬಾರಿ ಮೊತ್ತಕ್ಕೆ ಬಿಕರಿಯಾಗಿರುವುದೇ ಸಾಕ್ಷಿ ಅಂದರೆ ಬಹುಷಃ ತಪ್ಪಾಗಲಿಕ್ಕಿಲ್ಲ.

ನಿಮಗೆಲ್ಲ ಗೊತ್ತಿರೋ ಹಾಗೇ ಕಾಂತಾರ ಸೀಕ್ವೆಲ್‌ (Kantara-Chapter1)ಬರೀ 16 ಕೋಟಿ ವೆಚ್ಚದಲ್ಲಿ ತಯಾರಾಗಿತ್ತು. ಇದೀಗ, ಕಾಂತಾರ ಪ್ರೀಕ್ವೆಲ್‌ 125 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಕರಾವಳಿ ಕಲೆ, ಸಂಸ್ಕೃತಿ, ಅಲ್ಲಿನ ಆಚಾರ-ವಿಚಾರ ಪದ್ದತಿ, ದೈವರಾಧನೆ ಒಳಗೊಂಡಂತೆ ನೆಲಮೂಲದ ಕಥೆನಾ ಬೆಳ್ಳಿತೆರೆ ಮೇಲೆ ಕಟ್ಟಿಕೊಟ್ಟ ಶೆಟ್ರು (RishabShetty), ಕನ್ನಡಿಗರಿಂದ ಮಾತ್ರವಲ್ಲ ಪ್ಯಾನ್‌ ಇಂಡಿಯಾ ಪ್ರೇಕ್ಷಕರಿಂದ ಜೈಕಾರ ಹಾಕಿಸಿಕೊಂಡಿದ್ದರು. ಡಿವೈನ್‌ ಸ್ಟಾರ್‌ ಪಟ್ಟಕ್ಕೇರಿ ಪ್ಯಾನ್‌ ಇಂಡಿಯಾ ತುಂಬೆಲ್ಲಾ ದಿಬ್ಬಣ ಹೋಗಿಬಂದಿದ್ದರು. ಇದೀಗ, ಪ್ಯಾನ್‌ ವರ್ಲ್ಡ್‌ ಪ್ರೇಕ್ಷಕರನ್ನೂ ಕೂಡ ಕಾಂತಾರ ಪ್ರೀಕ್ವೆಲ್‌ಗಾಗಿ ಕಾಯುವಂತೆ ಮಾಡಿದ್ದಾರೆ. ಬನವಾಸಿಯ ಕದಂಬರ ಕಾಲಘಟ್ಟದಲ್ಲಿ ಕಾಂತಾರ ಪ್ರೀಕ್ವೆಲ್‌ನ ಕಟ್ಟಿಕೊಡೋದಕ್ಕೆ ಹೊರಟಿರೋ ಶೆಟ್ರು, ಒಂದು ಕೈಲಿ ಕೈಯಲ್ಲಿ ತ್ರಿಶೂಲ, ಇನ್ನೊಂದು ಕೈಯಲ್ಲಿ ಜಮದಗ್ನಿಯ ಕೊಡಲಿ ಹಿಡಿದು ದಟ್ಟ ಕಾಡೊಳಗೆ ಎಂಟ್ರಿಕೊಟ್ಟಿದ್ದಾರೆ. ಸದ್ಯ ಎಲ್ಲರನ್ನೂ ಕಾಡ್ತಿರೋ ಏಕೈಕ ಪ್ರಶ್ನೆ ಕಾಡುಬೆಟ್ಟು ಶಿವಪ್ಪನದ್ದು ಅಘೋರಿಯಾ ರೂಪವಾ ಅಥವಾ ಸಾಕ್ಷಾತ್ ಪರಶಿವನ ದರ್ಶನವಾ ಅನ್ನೋದು. ಈ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ಸದ್ಯದಲ್ಲಿ ಉತ್ತರ ಸಿಗೋದಿಲ್ಲ.

ಸದ್ಯ, ಕಾಂತಾರ ಚಾಪ್ಟರ್‌1(Kantara-Chapter1) ಟೀಮ್‌ ಶೂಟಿಂಗ್‌ ಅಖಾಡಕ್ಕೆ ಧುಮ್ಕೋದಕ್ಕೆ ಸಿದ್ದತೆ ನಡೆಸಿದೆ. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಶೂಟಿಂಗ್‌ ಶುರುವಾಗಲಿದೆ. ಕಾಂತಾರ ಸೀಕ್ವೆಲ್‌ಗಾಗಿ ಬೆವರು ಬಸಿದ ತಂತ್ರಜ್ಞರ ತಂಡವೇ ಈಗ ಪ್ರೀಕ್ವೆಲ್‌ಗೆ ದುಡಿಯೋದಕ್ಕೆ ಸಜ್ಜಾಗಿದೆ. ಆದರೆ, ಶೆಟ್ರ ಜೊತೆ ಯಾರೆಲ್ಲಾ ಕಲಾವಿದರು ಇರ್ತಾರೆ? ಕಾಡುಬೆಟ್ಟು ಶಿವಪ್ಪನಿಗೆ ಜೊತೆಯಾಗೋ ನಾಯಕಿ ಯಾರು? ರುಕ್ಮಿಣಿ ವಸಂತ್‌, ಅಲಿಯಾ ಭಟ್, ಸಾಯಿ ಪಲ್ಲವಿ ಈ ಮೂವರಲ್ಲಿ ಕಾಂತಾರ ಕ್ವೀನ್‌ ಯಾರು? ಹೊಂಬಾಳೆ (Hombale Films) ಸಂಸ್ಥೆ ಅದ್ಯಾವ ನಾಯಕಿಗೆ ರೆಡ್‌ಕಾರ್ಪೆಟ್‌ ಹಾಕಲಿದೆ? ಸಿಂಗಾರ ಸಿರಿ (SapthamiGowda)ಈ ಚಿತ್ರದಲ್ಲಿ ಮತ್ತೆ ಬರ್ತಾಳಾ ಅಥವಾ ಅಂಗಾಲಿನಲ್ಲಿ ಬಂಗಾರ ಅಗೆವ ಮಗದೊಬ್ಬ ಮಾಯೆನಾ ಶೆಟ್ರು (RishabShetty ಕರೆತರುತ್ತಾರಾ ಜಸ್ಟ್‌ ವೇಯ್ಟ್‌ ಅಂಡ್‌ ವಾಚ್‌

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಹ್ಯಾಟ್ರಿಕ್‌ ಹೀರೋ ಕೈ ಬಿಟ್ಟೋಯ್ತು ಅಭಿಮಾನಿಗಳ ನೆಚ್ಚಿನ ʻಅಶ್ವತ್ಥಾಮʼ ಸಿನಿಮಾ

ಹ್ಯಾಟ್ರಿಕ್‌ ಹೀರೋ ಕೈ ಬಿಟ್ಟೋಯ್ತು ಅಭಿಮಾನಿಗಳ ನೆಚ್ಚಿನ ʻಅಶ್ವತ್ಥಾಮʼ ಸಿನಿಮಾ

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.