Darshan:ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan), ಅಭಿಮಾನಿಗಳ ಪಾಲಿನ ಡಿ ಬಾಸ್(D Boss). ಮಾಸ್ ಫ್ಯಾನ್ ಬೇಸ್, ಸ್ಟಾರ್ ಡಂ ಎಲ್ಲಾ ಇದ್ರು ದಾಸನ ಸರಳತೆ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ನೇರ ನುಡಿ, ನೇರ ನಡೆಯಿಂದ ಇಷ್ಟವಾಗೋ ದಾಸ ಸದಾ ತಮ್ಮ ಸರಳತೆಯಿಂದ ಅಭಿಮಾನಿಗಳ ಹೃದಯ ಲೂಟಿ ಮಾಡುತ್ತಾರೆ. ಇದೀಗ ಸೋಶೀಯಲ್ ಮೀಡಿಯಾಲ್ಲಿ ವೈರಲ್ ಆಗಿರೋ ಕೆಲ ಫೋಟೋಗಳು ದಾಸನ ಸಿಂಪ್ಲಿಸಿಟಿಗೆ ಮನಸೋಲುವಂತೆ ಮಾಡಿದೆ.
ಪುತ್ರ ವಿನೀಶ್, ಆತ್ಮೀಯ ಸ್ನೇಹಿತರೊಂದಿಗೆ ದಾಸ ಸಮಯ ಕಳೆದ ಫೋಟೋಗಳು ಅಭಿಮಾನಿಗಳ ಪೇಜ್ ಗಳಲ್ಲಿ ಹರಿದಾಡ್ತಿವೆ. ದಾಸ ಕೆರೆಯ ತಟದಲ್ಲಿ, ಹಸಿರು ಪರಿಸರದ ಮಧ್ಯೆ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಫೋಟೋಗಳು ವೈರಲ್ ಆಗಿವೆ. ದಾಸನ ಸರಳತೆ ಕಂಡು ಭಕ್ತಗಣ ಖುಷ್ ಆಗಿದೆ. ಹೌದು, ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ಫಾರ್ಮ್ ಹೌಸ್ ನಲ್ಲಿ ಆತ್ಮೀಯ ಸ್ನೇಹಿತರು ಹಾಗೂ ಮಗ ವಿನೀಶ್‌ನೊಂದಿಗೆ ಸಮಯ ಕಳೆದಿದ್ದಾರೆ ದರ್ಶನ್(Darshan). ಎತ್ತಿನ ಬಂಡಿ ಏರಿ ಮಗ ಹಾಗೂ ಸ್ನೇಹಿತರೊಂದಿಗೆ ರೈಡ್ ಹೋಗಿದ್ದಾರೆ.
ಫಾರ್ಮ್ ಹೌಸ್ ಸಮೀಪವಿರುವ ಕೆರೆಯವರೆಗೂ ಎತ್ತಿನ ಬಂಡಿ ಏರಿ ಹೊರಟ ದಚ್ಚು ಅಲ್ಲೇ ಸಮಯ ಕಳೆದಿದ್ದಾರೆ. ಸುತ್ತಲಿನ ಪರಿಸರಕ್ಕೆ ಮನಸೋತು ಮಲಗಿ ವಿಶ್ರಾಂತಿ ತೆಗೆದುಕೊಂಡಿದ್ದಾರೆ. ದರ್ಶನ್ ಎತ್ತಿನ ಬಂಡಿ ಓಡಿಸಿರುವ ವೀಡಿಯೋ, ಫೋಟೋಗಳು ವೈರಲ್ ಆಗಿದ್ದು, ದಾಸನ ಲೈಫ್ ಸ್ಟೈಲ್, ಸಿಂಪ್ಲಿಸಿಟಿ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.
ʻಕಾಟೇರʼ(Katera) ಸೂಪರ್ ಡೂಪರ್ ಸಕ್ಸಸ್ ಬಳಿಕ ದಚ್ಚು ರಿಲ್ಯಾಕ್ಸ್ ಮೂಡ್ ಜಾರಿದ್ರು. ಇದೀಗ ಮಿಲನ ಪ್ರಕಾಶ್ ನಿರ್ದೇಶನದ ʻಡೆವಿಲ್ʼ(Devil) ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮಿಲನ ಪ್ರಕಾಶ್, ದಚ್ಚು ಕಾಂಬಿನೇಶನ್ ಮೇಲೆ ಡಿ ಬಾಸ್ ಅಭಿಮಾನಿಗಳು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದು, ಈಗಾಗಲೇ ʻಡೆವಿಲ್ʼ ಜಪ ಮಾಡಲು ಆರಂಭಿಸಿದ್ದಾರೆ.