Kiccha Sudeep: ಕಳೆದ ಕೆಲ ತಿಂಗಳಿಂದ ಕೆಸಿಸಿ(Kcc), ಸಿಸಿಎಲ್(Ccl) ಎಂದು ಕ್ರಿಕೆಟ್ ಬ್ಯಾಟ್, ಬಾಲು ಹಿಡಿದು ಬ್ಯುಸಿಯಾಗಿದ್ದ ಸುದೀಪ(Sudeep)ಮರಳಿ ಮ್ಯಾಕ್ಸ್(MAX) ಶೂಟಿಂಗ್ ಸೆಟ್‌ನತ್ತ ಮುಖ ಮಾಡಿದ್ದಾರೆ. ಇದರ ನಡುವೆ ಎಲೆಕ್ಷನ್ ಕಾವು ಜೋರಾಗಿದ್ದು, ಎಲ್ಲೇ ಹೋದ್ರು ರಾಜಕೀಯ ಪ್ರಚಾರಕ್ಕೆ ಬರೋದಿಲ್ವಾ, ಪ್ರಚಾರಕ್ಕೆ ಆಹ್ವಾನ ಬಂದಿಲ್ವಾ ಎಂಬ ಪ್ರಶ್ನೆಗಳು ಕಿಚ್ಚನನ್ನು ಎರಗಿ ಬರುತ್ತಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸುದೀಪ ನನಗೆ ಪ್ರಚಾರಕ್ಕೆ ಬನ್ನಿ ಎಂದು ಆಹ್ವಾನ ಬಂದಿಲ್ಲ. ಬಂದರೂ ನಾನು ಹೋಗೋದಿಲ್ಲ ಎಂದಿದ್ದಾರೆ.
ರಾಜಕರಣ ಅಂದ್ರೆ ಯಾವಾಗಲು ನಾನು ಸ್ವಲ್ಪ ದೂರನೇ ಇರ್ತಿನಿ. ಅದು ಅಲ್ಲದೇ ನನ್ನ ಫ್ಯಾನ್ಸ್, ಫ್ರೆಂಡ್ಸ್ ಮನೆಗೆ ನುಗ್ಗಿ ಹೊಡೆಯೋದೊಂದು ಬಾಕಿ ಇದೆ. ಕ್ರಿಕೆಟ್ ಕ್ರಿಕೆಟ್ ಅಂತ ಒಂದಷ್ಟು ದಿನ ಹೋಯ್ತು. ಈಗ ಶೂಟಿಂಗ್ ಬಿಟ್ಟು ಪ್ರಚಾರಕ್ಕೆ ಹೋದ್ರೆ ಏನಾದ್ರು ಹೆಚ್ಚು ಕಮ್ಮಿ ಆದ್ರು ಆಗುತ್ತೆ. ಆದ್ರಿಂದ ಮ್ಯಾಕ್ಸ್(MAX) ಶೂಟಿಂಗ್ ಮುಗಿಸುವುದರತ್ತ ಗಮನ ಹರಿಸುತ್ತಿದ್ದೇನೆ. ಹತ್ತರಿಂದ ಹದಿನೈದು ದಿನ ಶೂಟಿಂಗ್ ಮುಗಿದ್ರೆ ಮ್ಯಾಕ್ಸ್(MAX) ಚಿತ್ರೀಕರಣ ಮುಗಿದು ಹೋಗುತ್ತೆ ಎನ್ನುವ ಮೂಲಕ ಯಾವುದೇ ಪ್ರಚಾರಕ್ಕೂ ಹೋಗುವುದಿಲ್ಲ, ಕ್ರಿಕೆಟ್ ಆಟವೂ ಸದ್ಯಕ್ಕಿಲ್ಲ ಎಂದು ಕ್ಲಾರಿಟಿ ನೀಡಿದ್ದಾರೆ ಸುದೀಪ್.
ಅಭಿನಯ ಚಕ್ರವರ್ತಿ(Abhinaya Chakravarthi) ʻಮ್ಯಾಕ್ಸ್ ʼ(MAX) ಅವತಾರದಲ್ಲಿ ತೆರೆ ಮೇಲೆ ಬರೋದಕ್ಕೆ ಸಕಲ ರೀತಿಯಲ್ಲಿ ಸಜ್ಜಾಗುತ್ತಿದ್ದಾರೆ. ಮ್ಯಾಕ್ಸ್ ಟೀಸರ್, ಫಸ್ಟ್ ಲುಕ್ ನೋಡಿ ಸೈಕ್ ಆಗಿರೋ ಅಭಿಮಾನಿ ವೃಂದ ಮಾಕ್ಸ್ ಬಿಡುಗಡೆಯನ್ನೇ ಎದುರು ನೋಡುತ್ತಿದ್ದಾರೆ. ವಿಜಯ್ ಕಾರ್ತಿಕೇಯ ಆಕ್ಷನ್ ಕಟ್ ಹೇಳುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ.