Shrinidhi Shetty:ಕೆಜಿಎಫ್(KGF)…ಕನ್ನಡ ಚಿತ್ರರಂಗಕ್ಕೆ ಹೊಸ ಇಮೇಜ್ ತಂದು ಕೊಟ್ಟ ಸಿನಿಮಾ. ಕನ್ನಡ ಸಿನಿಮಾನಾ..? ಎನ್ನುತ್ತಿದ್ದವರಿಗೆ ಉತ್ತರ ನೀಡಿದ ಸಿನಿಮಾ. ಗ್ಲೋಬಲ್ ಲೆವೆಲ್‌ನಲ್ಲಿ ಕ್ರೇಜ್ ಸೃಷ್ಟಿಸಿದ ಸಿನಿಮಾ.. ಪ್ಯಾನ್ ಇಂಡಿಯಾ ಸಿನಿಮಾವಾಗಿ ಹೊಸ ರೆಕಾರ್ಡ್ ಬರೆದ ಸಿನಿಮಾ..ಒಂದಾ..? ಎರಡಾ..? ಹೀಗೆ ಒಂದಾದ ಮೇಲೆ ಒಂದು ಹೊಸ ಮೈಲಿಗಲ್ಲು ಸೆಟ್ ಮಾಡಿದ ಸಿನಿಮಾ ಕೆಜಿಎಫ್. ಯಶ್(Yash), ಪ್ರಶಾಂತ್ ನೀಲ್(Prashanth Neel) ರಾತ್ರೋ ರಾತ್ರಿ ಸ್ಟಾರ್ ಆಗೋದ್ರ ಜೊತೆಗೆ ಈ ಸಿನಿಮಾದಲ್ಲಿ ನಟಿಸಿದವರೂ ಸ್ಟಾರ್ ಆಗಿ ಬಿಟ್ರು. ಹೀಗೆ ಕ್ರೇಜ್ ಸೃಷ್ಟಿಸಿದ್ದ ಸಿನಮಾದಲ್ಲಿ ಮೊದಲ ಬಾರಿ ನಾಯಕಿಯಾಗಿ ಬಣ್ಣ ಹಚ್ಚಿದವರು ನಾಯಕಿ ಶ್ರೀನಿಧಿ ಶೆಟ್ಟಿ(Shrinidhi Shetty).
ಹೌದು, ಕೆಜಿಎಫ್ ನಲ್ಲಿ ರಾಕಿಯ ರಾಣಿಯಾದವರು ರೀನಾ ಅಲಿಯಾಸ್ ಶ್ರೀನಿಧಿ ಶೆಟ್ಟಿ(Shrinidhi Shetty). 2016ರ ಮಿಸ್ ಸುಪ್ರನ್ಯಾಶನಲ್ ವಿಜೇತೆ. ಇದಾದ ನಂತರ ಸೀದಾ ಸೇರಿದ್ದು ಕೆಜಿಎಫ್(KGF) ಅಖಾಡಕ್ಕೆ. ಒಂದೇ ಬಾರಿಗೆ ಜಾಕ್ ಪಾಟ್ ಹೊಡೆದಿತ್ತು. ಬಹುಶಃ ಕೆಜಿಎಫ್ ಆರಂಭವಾದಾಗ ಶ್ರೀನಿಧಿ ಕೂಡ ಊಹಿಸಿರಲಿಲ್ಲ ಈ ಸಿನಿಮಾ ಅಷ್ಟು ಖ್ಯಾತಿ ತಂದುಕೊಡುತ್ತೆ ಎಂದು. ಕೆಜಿಎಫ್ ರಿಲೀಸ್ ಆಗುತ್ತಿದಂತೆ ರೀನಾ ಕ್ರೇಜ಼್ ಕೂಡ ಹೆಚ್ಚಾಯ್ತು. ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಶ್ರೀನಿಧಿ ಶೆಟ್ಟಿ ಖ್ಯಾತಿ ಗಳಿಸಿದ್ರು.
ಕೆಜಿಎಫ್-2(KGF-2) ಕೂಡ ಹ್ಯೂಜ಼್ ಸಕ್ಸಸ್ ತಂದು ಕೊಡ್ತು. ಇನ್ನೇನು ಶ್ರೀನಿಧಿ ಶೆಟ್ಟಿ(Shrinidhi Shetty) ಲಕ್ ಖುಲಾಯಿಸಿ ಬಿಡ್ತು ಎಂದು ಗಾಂದೀನಗರದ ಮಂದಿ ಭವಿಷ್ಯ ನುಡಿದಿದ್ರು. ಮಂಗಳೂರು ಬೆಡಗಿ, ಕನ್ನಡತಿ ಮೆರವಣಿಗೆ ಶುರು, ಕೈಗೆ ಸಿಗದಷ್ಟು ಅವಕಾಶ ಎಂದು ಎಲ್ಲರೂ ಮಾತಾಡೋಕೆ ಶುರು ಮಾಡಿದ್ರು. ಅಷ್ಟರಲ್ಲೇ ಕಾಲಿವುಡ್ ಅಂಗಳದಿಂದ ಆಫರ್ ಅರಸಿ ಬಂತು. ಚಿಯಾನ್ ವಿಕ್ರಮ್(Chiyaan Vikram) ಜೊತೆ ʻಕೋಬ್ರಾʼ(Cobra) ಸಿನಿಮಾದಲ್ಲಿ ನಟಿಸೋ ಸುವರ್ಣಾವಕಾಶವೂ ಒಲಿದು ಬಂದಿತ್ತು. ಆದ್ರೆ ಕೋಬ್ರಾ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡೋದ್ರಲ್ಲಿ ವಿಫಲವಾಯ್ತು.
ಹಾಗಾದ್ರೆ ಶ್ರೀನಿಧಿ ಶೆಟ್ಟಿ(Shrinidhi Shetty) ಬಳಿ ಇರುವ ಸಿನಿಮಾಗಳೆಷ್ಟು ಅಂತ ನೋಡಿದ್ರೆ ಕೇವಲ ಒಂದೇ ಒಂದು. ʻಕೋಬ್ರಾʼ ನಂತರ ಟಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟ ಕೆಜಿಎಫ್ ಬ್ಯೂಟಿ ʻತೆಲುಸು ಕದಾʼ(Telusu Kada) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಹೊರತು ಪಡಿಸಿ ಯಾವುದೇ ಸಿನಿಮಾಗಳು ಶ್ರೀನಿಧಿ ಖಾತೆಯಲ್ಲಿಲ್ಲ. 2018 ರಿಂದ ಇವರು ನಟಿಸಿದ ಸಿನಿಮಾಗಳ ಸಂಖ್ಯೇ ಕೇವಲ ನಾಲ್ಕು.
ಮೊದಲ ಚಿತ್ರವೇ ಪ್ಯಾನ್ ಇಂಡಿಯಾ ಸಿನಿಮಾ, ಊಹಿಸಲಾರದ ಸಕ್ಸಸ್, ಖ್ಯಾತಿ. ಇದೆಲ್ಲಾ ಇದ್ರು ಶ್ರೀನಿಧಿ ಶೆಟ್ಟಿ(Shrinidhi Shetty) ಸಿನಿ ಜರ್ನಿಯೇಕೋ ಮಂಕಾದಂತಿದೆ. ಸಿನಿರಂಗದಲ್ಲಿ ಶ್ರೀನಿಧಿ ಲಕ್ ಕೈ ಕೊಟ್ಟಂತಿದೆ. ಚಿಕ್ಕ ಪುಟ್ಟ ಹಿಟ್ ಕೊಟ್ಟ ಹೀರೋಯಿನ್‌ಗಳೆಲ್ಲ ಸಾಲು ಸಾಲು ಸಿನಿಮಾ ಲೈನ್‌ಅಪ್ ಇಟ್ಟುಕೊಂಡಿರುವಾಗ ಶ್ರೀನಿಧಿಗ್ಯಾಕೆ ಸಿನಿಮಾಗಳು ಸಿಗುತ್ತಿಲ್ಲ..?. ಹಾಗಾದ್ರೆ, ರೀನಾ ಕ್ರೇಜ್ ಮುಗಿದು ಹೋಯ್ತಾ..?. ಒಳ್ಳೆಯ ಸಬ್ಜೆಕ್ಟ್‌ಗಾಗಿ ಕಾದು ಕೂತಿದ್ದಾರಾ..? ಅನ್ನೋದೇ ಎಲ್ಲರ ಮಿಲಿಯನ್ ಡಾಲರ್ ಪ್ರಶ್ನೆ.