Taapsee Ponnu: ಬಾಲಿವುಡ್ (Bolluwood) ಅಂಗಳದಲ್ಲಿ ಸ್ಟಾರ್ ನಟ-ನಟಿಯರು ಒಬ್ಬರಾದ ಮೇಲೆ ಒಬ್ಬರು ಹಸೆಮಣೆ ಏರುತ್ತಿದ್ದಾರೆ. ಇದೀಗ ಆ ಲಿಸ್ಟ್‌ಗೆ ಹೊಸ ಸೇರ್ಪಡೆ ನಟಿ ತಾಪ್ಸಿ ಪನ್ನು. ಬಾಲಿವುಡ್ ಮಿಲ್ಕಿ ಬ್ಯೂಟಿ ತಾಪ್ಸಿ ಪನ್ನು(Taapsee Pannu) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾರಾ ಜೋಡಿಯ ಮದುವೆ ಅಂದ್ರೆ ಸೋಶಿಯಲ್ ಮೀಡಿಯಾದಲ್ಲಿ ಬಝ್ ಕ್ರಿಯೇಟ್ ಆಗಿರುತ್ತೆ. ಮದುವೆ ಎಲ್ಲಿ, ಸಂಗೀತ್ ಕಾರ್ಯಕ್ರಮ ಹೇಗ್ ನಡೆಯುತ್ತೆ, ಯಾರೆಲ್ಲ ಬರ್ತಾರೆ ಎಂಬಿತ್ಯಾದಿ ಸುದ್ದಿಗಳು ವೈರಲ್ ಆಗ್ತಿರುತ್ತೆ. ಇಲ್ಲವೇ ನಟ-ನಟಿಯರೇ ಈ ಬಗ್ಗೆ ಹಂಚಿಕೊಳ್ಳುತ್ತಾರೆ. ಆದ್ರೆ ತಾಪ್ಸಿ ಮದುವೆ ಸುದ್ದಿ ಮಾತ್ರ ಇದಕ್ಕೆ ಹೊರತಾಗಿದೆ.
36 ವರ್ಷದ ತಾಪ್ಸಿ ಪನ್ನು(Taapsee Pannu) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ ಡೆನ್ಮಾರ್ಕ್ ಮೂಲದ ಬಾಡ್ಮಿಂಟನ್ ಆಟಗಾರ ಮ್ಯಾಥ್ಯೂಸ್ ಬೋ(Mathias Boe) ಜೊತೆ ಸಪ್ತಪದಿ ತುಳಿದಿದ್ದಾರೆ. ಫ್ಯಾಮಿಲಿ ಹಾಗೂ ಆಪ್ತರ ಸಮ್ಮುಖದಲ್ಲಿ ಮಾರ್ಚ್ 23ರಂದು ತಾಪ್ಸಿ ಹಸೆಮಣೆ ಏರಿದ್ದಾರೆ. `ತಪ್ಪಡ್’ ಬೆಡಗಿಯ ಮದುವೆ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ತಾಪ್ಸಿ(Taapsee) ಬಾಲಿವುಡ್ ಸೆಲೆಬ್ರಿಟಿಗಳಿಲ್ಲದೆ ಬಹು ಆಪ್ತರ ಸಮ್ಮುಖದಲ್ಲಿ ಮದುವೆಯಾಗಿದ್ದು ವಿಶೇಷ. ತಾಪ್ಸಿ ಮದುವೆ ಸುದ್ದಿ ತಪ್ಪಡ್ ಚಿತ್ರದ ಸಹ ನಟನ ಮೂಲಕ ಪಸರ್ ಆಗಿದ್ದು, ರಾಜಸ್ಥಾನದ ಉದಯಪುರದಲ್ಲಿ ಇಬ್ಬರ ಮದುವೆ ನಡೆದಿದೆ.
2010ರಲ್ಲಿ ಜುಮ್ಮಂಡಿ ನಾಡಂ ತೆಲುಗು ಸಿನಿಮಾ ಮೂಲಕ ಸಿನಿ ಕೆರಿಯರ್ ಆರಂಭಿಸಿದ ತಾಪ್ಸಿ(Taapsee), ನಂತರದಲ್ಲಿ ಬಿ ಟೌನ್ ಅಂಗಳದಲ್ಲಿ ಸೆಟಲ್ ಆಗಿದ್ದಾರೆ. ತಮಿಳು ಚಿತ್ರಗಳಿಗೂ ಬಣ್ಣ ಹಚ್ಚಿರುವ ತಾಪ್ಸಿ, ತಪ್ಪಡ್(Thappad), ಮನ್ಮಮರ್ಜಿಯನ್, ಬದ್ಲಾ, ತಪ್ಪಡ್, ಪಿಂಕ್, ಜುಡ್ವಾ-2 ಡಂಕಿ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.