ಬುಧವಾರ, ಜುಲೈ 2, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

Kangana Ranaut: ಕಾಂಟ್ರವರ್ಸಿ ಕ್ವೀನ್‌ಗೆ ಸಿಕ್ತು ಬಿಜೆಪಿ ಟಿಕೆಟ್-‌ ಹೋಳಿ ಆಡಿ ಸಂಭ್ರಮಿಸಿದ ಕಂಗನಾ ರಣಾವತ್‌..!

Bharathi Javalliby Bharathi Javalli
26/03/2024
in Majja Special
Reading Time: 1 min read
Kangana Ranaut: ಕಾಂಟ್ರವರ್ಸಿ ಕ್ವೀನ್‌ಗೆ ಸಿಕ್ತು ಬಿಜೆಪಿ ಟಿಕೆಟ್-‌ ಹೋಳಿ ಆಡಿ ಸಂಭ್ರಮಿಸಿದ ಕಂಗನಾ ರಣಾವತ್‌..!

Kangana Ranaut: ಬಾಲಿವುಡ್‌ ಸ್ಟಾರ್‌ ನಟಿ, ರಾಷ್ಟ್ರ ಪ್ರಶಸ್ತಿ ವಿಜೇತೆ ಕಂಗನಾ ರಣಾವತ್(Kangana Ranaut) ಸದಾ ಸುದ್ದಿಯಲ್ಲಿರುವ ನಟಿ. ತಮ್ಮ ಅಧ್ಬುತ ನಟನೆಯಿಂದ ಅಪಾರ ಜನಪ್ರಿಯತೆ ಗಳಿಸಿಕೊಂಡಿರುವ ಈ ನಟಿ ಸಿನಿಮಾಗಳ ಜೊತೆ ಕಾಂಟ್ರವರ್ಸಿಯಲ್ಲೂ ಮುಂದಿರುತ್ತಾರೆ. ಕಾಂಟ್ರವರ್ಸಿ ಕ್ವೀನ್‌ ಎಂದೇ ಕರೆಸಿಕೊಳ್ಳೊ ಕಂಗನಾ ರಾಜಕೀಯ ಅಖಾಡಕೆ ಧುಮುಕಿದ್ದಾರೆ.

ಸದಾ ಒಂದಿಲ್ಲೊಂದು ಸ್ಟೇಟ್‌ಮೆಂಟ್ ನೀಡಿ ಸುದ್ದಿಯಾಗೋ ʻಕ್ವೀನ್‌ʼ ಕಂಗನಾ(Kangana) ಈ ಬಾರಿ ರಾಜಕೀಯ ವಿಚಾರವಾಗಿ ಟ್ರೆಂಡಿಂಗ್‌ ನಲ್ಲಿದ್ದಾರೆ. ಮೋದಿ, ಬಿಜೆಪಿ ನಡೆಯ ಪರ ಸದಾ ಬ್ಯಾಟಿಂಗ್‌ ಬೀಸುತ್ತಿದ್ದ ಕಂಗನಾಗೆ ಬಿಜೆಪಿಯಿಂದ ರಾಜಕೀಯ ಅಖಾಡಕ್ಕೆ ಎಂಟ್ರಿ ಸಿಕ್ಕಿದೆ. ಈ ಮೂಲಕ ʻತಲೈವಿʼ ಖ್ಯಾತಿಯ ನಟಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಹಲವರ ಲೆಕ್ಕಾಚಾರ ನಿಜವಾಗಿದೆ. ಇದೇ ಖುಷಿಯಲ್ಲಿ ಕಂಗನಾ ಹೋಳಿ ಆಡಿ ಸಂಭ್ರಮಿಸಿದ್ದಾರೆ.

ಅಂದ್ಹಾಗೆ‌, ಕಂಗನಾ ರಣಾವತ್(Kangana Ranaut) ತಮ್ಮ ಹುಟ್ಟೂರಾದ ಹಿಮಾಚಲ ಪ್ರದೇಶದಿಂದಲೇ ಎಂಪಿ(MP)ಸ್ಪರ್ಧಿಯಾಗಿ ಚುನಾವಣೆಗೆ ನಿಲ್ಲುತ್ತಿದ್ದಾರೆ, ಚುನಾವಣಾ ಕ್ಯಾಂಪೈನ್‌ ಆರಂಭಿಸಿರುವ ಕಂಗನಾ ಟಿಕೆಟ್‌ ಸಿಕ್ಕಿರುವ ಬಗ್ಗೆ ಹರುಷ ವ್ಯಕ್ತಪಡಿಸಿದ್ದಾರೆ. ʻನನ್ನ ಜನ್ಮ ಭೂಮಿ ನನ್ನನ್ನು ಮರಳಿ ಕರೆದಿದೆ, ನಾನು ನಿಜಕ್ಕೂ ಅದೃಷ್ಟಶಾಲಿ, ಇದು ನನ್ನ ಹಾಗೂ ಕುಟುಂಬದ ಭಾವನಾತ್ಮಕ ಕ್ಷಣವಾಗಿದೆʼ ಎಂದು ಸಂತಸ ಹಂಚಿಕೊಂಡಿದ್ದಾರೆ.

ಕ್ವೀನ್‌(Queen), ತಲೈವಿ ಸೇರಿದಂತೆ ಮಹಿಳಾ ಪ್ರಧಾನ ಚಿತ್ರ ಹಾಗೂ ಬಿಟೌನ್‌ ಸ್ಟಾರ್‌ ನಟರೊಂದಿಗೆ ಸ್ಕ್ರೀನ್‌ ಶೇರ್‌ ಮಾಡಿರುವ ಕಂಗನಾ(Kangana) ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಸಿಕ್ಕ ಯಶಸ್ಸು  ರಾಜಕೀಯ ಲೈಫ್‌ನಲ್ಲಿ ಸಿಗುತ್ತಾ ಕಾದು ನೋಡಬೇಕಿದೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
Nabha Natesh: ʻವಜ್ರಕಾಯʼ ನಟಿಯ ಕಂ ಬ್ಯಾಕ್‌ – ಎರಡೆರಡು ಸಿನಿಮಾಗೆ ಸಹಿ ಹಾಕಿದ ಇಸ್ಮಾರ್ಟ್‌ ಬ್ಯೂಟಿ

Nabha Natesh: ʻವಜ್ರಕಾಯʼ ನಟಿಯ ಕಂ ಬ್ಯಾಕ್‌ - ಎರಡೆರಡು ಸಿನಿಮಾಗೆ ಸಹಿ ಹಾಕಿದ ಇಸ್ಮಾರ್ಟ್‌ ಬ್ಯೂಟಿ

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.