Siddarth: ತಮಿಳು ನಟ ಸಿದ್ದಾರ್ಥ್(Siddarth) ಹಾಗೂ ನಟಿ ಅದಿತಿ ರಾವ್ ಹೈದರಿ(Aditi Rao Hydari) ಪ್ರೇಮ್ ಕಹಾನಿ ಎಲ್ಲರಿಗೂ ಗೊತ್ತೇ ಇದೆ. ಈ ಇಬ್ಬರು ಕಳೆದ ಮೂರ್ನಾಲ್ಕು ವರ್ಷದಿಂದ ರಿಲೇಶನ್‌ಶಿಪ್‌ನಲ್ಲಿದ್ರು. ಎಲ್ಲಾ ಕಡೆ ಬಹಿರಂಗವಾಗೇ ಓಡಾಡುತ್ತಿದ್ದ ಈ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಈ ಜೋಡಿಯ ಮದುವೆ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ.
ಸಿದ್ದಾರ್ಥ್(Siddarth) ಹಾಗೂ ಅದಿತಿ ರಾವ್ ಹೈದರಿ(Aditi Rao Hydari) ತೆಲಂಗಾಣದ ದೇವಸ್ಥಾನವೊಂದರಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. ಕೇವಲ ಅತ್ಯಾಪ್ತರ ಸಮ್ಮುಖದಲ್ಲಿ ನಡೆದ ಈ ಮದುವೆ ಸುದ್ದಿ ಈಗ ಎಲ್ಲಾ ಕಡೆ ಪಸರ್ ಆಗಿದೆ. ಕೆಲ ವರ್ಷಗಳಿಂದ ರಿಲೇಶನ್‌ಶಿಪ್‌ನಲ್ಲಿದ್ದ ಈ ಇಬ್ಬರಿಗೂ ಇದು ಎರಡನೇ ಮದುವೆ.
44 ವರ್ಷದ ಸಿದ್ದಾರ್ಥ್(Siddarth) 2007ರಲ್ಲಿಯೇ ಮೊದಲ ಪತ್ನಿಗೆ ವಿಚ್ಚೇದನ ನೀಡಿದ್ದಾರೆ, ಅದಿತಿ ರಾವ್ ಹೈದರಿ(Aditi Rao Hydari) ಕೂಡ ಮೊದಲ ಪತಿಯಿಂದ ಡಿವೋರ್ಸ್ ಪಡೆದುಕೊಂಡಿದ್ದಾರೆ. `ಮಹಾ ಸಮುದ್ರಂ’ ಸಿನಿಮಾ ಮೂಲಕ ಪರಿಚಿತವಾದ ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ರು. ಇದೀಗ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ʻಬಾಯ್ಸ್̧ʼ, ʻನುವೋಸ್ತಾನಂಟೆ ನೇನೋದ್ದಂಟಾನʼ, ʻಬೊಮ್ಮರಿಲುʼ ಸಿನಿಮಾ ಮೂಲಕ ಅಪಾರ ಖ್ಯಾತಿ ಗಳಿಸಿದ ನಟ ಸಿದ್ದಾರ್ಥ್(Siddharth). ತಮಿಳು ಜೊತೆ ತೆಲುಗು, ಹಿಂದಿ ಸಿನಿಮಾಗಳಲ್ಲೂ ನಟಿಸಿ ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಇತ್ತೀಚೆಗೆ ಸಿದ್ದಾರ್ಥ್ ನಟನೆಯ ʻಚಿತ್ತʼ ಸಿನಿಮಾ ಉತ್ತಮ ರಿವಿವ್ಯೂ ಜೊತೆಗೆ ಒಳ್ಳೆಯ ಕಲೆಕ್ಷನ್ ಕೂಡ ಮಾಡಿತ್ತು.