Akshay Kumar: ಬಿಟೌನ್ ಅಂಗಳದ ಸ್ಟಾರ್ ನಟ ಅಕ್ಷಯ್ ಕುಮಾರ್ (Akshay Kumar) ʻಬಡೆ ಮಿಯಾನ್ ಛೋಟೆ ಮಿಯಾನ್ʼ ಸಿನಿಮಾ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಸಿನಿಮಾ ಪ್ರಮೋಷನ್ ಕೆಲಸದಲ್ಲಿ ತೊಡಗಿಕೊಂಡಿರುವ ಅಕ್ಷಯ್ ಇದೇ ಸಮಯದಲ್ಲಿ ತಮ್ಮ ಸಿನಿಮಾ ಸೋಲಿನ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ.
ಬಾಲಿವುಡ್ ಬ್ಯುಸಿಯೆಸ್ಟ್ ನಟ ಅಂದ್ರೆ ಅಕ್ಷಯ್ ಕುಮಾರ್(Akshay Kumar). ಒಂದಾದ ಮೇಲೆ ಒಂದು ಸಿನಿಮಾದಲ್ಲಿ ಸದಾ ಬ್ಯುಸಿಯಿರುವ ನಟ. ಸದ್ಯ ಟೈಗರ್ ಶ್ರಾಪ್(Tiger Shroff) ಜೊತೆಗೂಡಿ ನಟಿಸಿರುವ ʻಬಡೆ ಮಿಯಾನ್ ಛೋಟೆ ಮಿಯಾನ್́(Bade Miyan Chote Miyan) ಪ್ರಮೋಷನ್‌ನಲ್ಲಿ ತೊಡಗಿಕೊಂಡಿದ್ದಾರೆ. ಅಕ್ಷಯ್ ಅಭಿನಯದ ಸೆಲ್ಫಿ, ಮಿಶನ್ ರಾಣಿಗಂಜ್ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದ್ದು, ಗೆಲುವಿಗಾಗಿ ಎದುರು ನೋಡುತ್ತಿರುವ ಅಕ್ಕಿ ತಮ್ಮ ಸಿನಿಮಾಗಳ ಸೋಲಿನ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದಿದ್ದಾರೆ.
ನಾನು ಈ ಹಂತ ನೋಡುತ್ತಿರುವುದು ಇದೇ ಮೊದಲೇನಲ್ಲ. ನನ್ನ ವೃತ್ತಿ ಜೀವನದಲ್ಲಿ ನಿರಂತರ 16 ಸೋಲುಗಳನ್ನು ಕಂಡಿದ್ದೇನೆ. ಆಗ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಅಲ್ಲಿಯೇ ನಿಂತು ಕೆಲಸ ಮಾಡಿದೆ. ಈಗಲೂ ಅದೇ ಕೆಲಸವನ್ನು ಮಾಡುತ್ತಿದ್ದೇನೆ ಎಂದಿದ್ದಾರೆ ಅಕ್ಷಯ್ ಕುಮಾರ್(Akshay Kumar).
ಇದೇ ವೇಳೆ ಅಕ್ಕಿ(Akshay Kumar) ತಾವು ಒಂದೇ ರೀತಿಯ ಸಿನಿಮಾ ಮಾಡಲು ಇಷ್ಟ ಪಡೋದಿಲ್ಲ ಎಂದಿದ್ದಾರೆ. ಪ್ರತಿ ಬಾರಿ ಬೇರೆ ಬೇರೆ ಜಾನರ್ ಸಿನಿಮಾಗಳಲ್ಲಿ ನಟಿಸಲು ಬಯಸುತ್ತೇನೆ. ಒಂದೇ ರೀತಿಯ ಸಿನಿಮಾ ಮಾಡಲು ನನಗೆ ಬೋರ್ ಆಗುತ್ತದೆ. ʻಟಾಯ್ಲೆಟ್: ಏಕ್ ಪ್ರೇಮ್ ಕಥಾʼ, ʻಏರ್ ಲಿಫ್ಟ್ʼ, ʻರುಸ್ತುಂʼ ಹೀಗೆ ನನ್ನ ಯಾವುದೇ ಸಿನಿಮಾ ತೆಗೆದುಕೊಳ್ಳಿ ಒಂದೇ ರೀತಿ ಸಿನಿಮಾ ಮಾಡೋದಿಲ್ಲ. ಯಾವುದೇ ಸಿನಿಮಾ ಮಾಡಿದ್ರೂ ಕೂಡ ಕೆಲವೊಮ್ಮೆ ಯಶಸ್ಸು ಸಿಗುತ್ತೆ, ಕೆಲವೊಮ್ಮೆ ಯಶಸ್ಸು ಸಿಗೋದಿಲ್ಲ ಎಂದಿದ್ದಾರೆ ಅಕ್ಷಯ್.