Anupama Parameswran:ಪ್ರೇಮಂ ಸಿನಿಮಾ ಮೂಲಕ ಸಾಯಿ ಪಲ್ಲವಿಯಂತೆ ಬೆಳ್ಳಿ ತೆರೆ ಮೇಲೆ ಕಮಾಲ್ ಮಾಡಿದವರು ಅನುಪಮಾ ಪರಮೇಶ್ವರನ್ (Anupama Parameswran). ಈ ಸಿನಿಮಾ ನಂತರ ಅನುಪಮಾ ಸ್ಟಾರ್ ಚೇಂಜ್ ಆಯ್ತು. ಅಲ್ಲಿಂದ ಇಲ್ಲಿಯವರೆಗೆ ಅನುಪಮಾ ಸಿನಿ ಕೆರಿಯರ್ ಗ್ರಾಫ್ ಮೇಲ್ಮುಕವಾಗಿಯೇ ಸಾಗುತ್ತಿದೆ. ಇದೀಗ ಅನುಪಮ ಪರಮೇಶ್ವರನ್ ನಯಾ ಸಿನಿಮಾವೊಂದು ಬಿಡುಗಡೆಗೆ ಸಿದ್ದವಿದ್ದು, ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಕ್ಕಾಗಿ ಸುದ್ದಿಯಲ್ಲಿದ್ದಾರೆ ಅನುಪಮಾ.
ಅನುಪಮಾ(Anupama Parameswran) ಹಾಗೂ ಸಿದ್ದು ಜೊನ್ನಲಗಡ್ಡ(Siddu Jonnalagadda) ನಟಿಸಿರುವ ʻಟಿಲ್ಲು ಸ್ಕ್ವೇರ್ʼ(Tillu Square) ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ಅನುಪಮಾ ಸಖತ್ ಬೋಲ್ಡ್ ಅವತಾರದಲ್ಲಿ ಕಾಣಸಿಕ್ಕಿದ್ದು, ಚಿತ್ರದ ಟ್ರೈಲರ್ ರಿಲೀಸ್ ಆದಾಗ ಲಿಪ್ ಲಾಕ್ ಸೀನ್ ಬಗ್ಗೆ ಸಖತ್ ಟಾಕ್ ಕ್ರಿಯೇಟ್ ಆಗಿತ್ತು. ಈ ದೃಶ್ಯ ವೈರಲ್ ಕೂಡ ಆಗಿತ್ತು. ಇಲ್ಲಿಯವರೆಗೆ ನಟಿಸಿರುವ ಸಿನಿಮಾಗಳಲ್ಲಿ ಅನುಪಮಾ ಇಷ್ಟು ಬೋಲ್ಡ್ ಅವತಾರ ತಾಳಿರಲಿಲ್ಲ. ಆದ್ರಿಂದ ಈ ಬಗ್ಗೆ ನಟಿಗೆ ಸಾಕಷ್ಟು ಪ್ರಶ್ನೆ ಎದುರಾಗಿತ್ತು, ನೆಗೆಟಿವ್ ಕಮೆಂಟ್ಸ್ ಕೇಳಿ ಬಂದಿತ್ತು. ಈ ಬಗ್ಗೆ ಅನುಪಮಾ ಪ್ರತಿಕ್ರಿಯೆ ನೀಡಿದ್ದಾರೆ.
ಬೋಲ್ಡ್ ಸೀನ್‌ನಲ್ಲಿ ನಟಿಸಿದ್ದಾಳೆ ಎಂದು ಬೇರೆ ಬೇರೆ ರೀತಿ ಕಮೆಂಟ್ ಮಾಡುತ್ತಿದ್ದಾರೆ. ಈ ರೀತಿಯ ಸೀನ್‌ಗಳಲ್ಲಿ ನಟಿಸೋದು ಅಷ್ಟು ಸುಲಭವಲ್ಲ. ತೆರೆ ಮೇಲೆ ರೊಮ್ಯಾನ್ಸ್ ಮಾಡೋದು ಕಷ್ಟ. ಇಬ್ಬರು ವ್ಯಕ್ತಿಗಳು ಅನ್ಯೋನ್ಯವಾಗಿ, ಆಪ್ತವಾಗಿ ಇರೋದು ಖಾಸಗಿ ಕ್ಷಣ. ಆದರೆ ಅದನ್ನು ಸಿನಿಮಾಗಾಗಿ ನೂರು ಜನರ ಎದುರು ಮಾಡಬೇಕು. ಎಷ್ಟು ಮುಜುಗರವಾಗುತ್ತೆ ಗೊತ್ತಾ..? ನೋಡುವವರಿಗೆ ಓಹ್ ರೋಮ್ಯಾನ್ಸ್ ಮಾಡುತ್ತಾ, ಎಂಜಾಯ್ ಮಾಡ್ತಿದ್ದಾರೆ ಎನಿಸುತ್ತದೆ. ಅದು ಅಷ್ಟು ಸುಲಭವಲ್ಲ ಎಂದ್ದು ಅಳಲು ತೋಡಿಕೊಂಡಿದ್ದಾರೆ ಮಲಯಾಳಂ ಬೆಡಗಿ.