Allu Arjun: ನಟ ಅಲ್ಲು ಅರ್ಜುನ್(Allu Arjun) ಶೇರ್ ಮಾಡಿರೋ ಆ ಒಂದು ಪೋಸ್ಟ್ ಅವ್ರ ವರ್ಲ್ಡ್ ವೈಡ್ ಅಭಿಮಾನಿಗಳನ್ನು ಸಂತಸದಲ್ಲಿ ತೇಲಿಸಿದೆ. ʻಪುಷ್ಪʼ ಮೂಲಕ ಜಗತ್ ಪ್ರಸಿದ್ದಿ ಪಡೆದುಕೊಂಡಿರುವ ಬನ್ನಿ ಮುಕುಟಕ್ಕೆ ಮತ್ತೊಂದು ಕೀರ್ತಿಯ ಗರಿ ಸೇರಿದೆ. ಇದಕ್ಕೆ ಕಾರಣ ದುಬೈನ ʻಮೇಡಂ ಟುಸ್ಸಾಡ್ಸ್ ಮ್ಯೂಸಿಯಂʼನಲ್ಲಿ( Madame Tussauds Dubai) ನಿರ್ಮಾಣವಾದ ಮೇಣದ ಪ್ರತಿಮೆ.
ಪ್ರತಿಯೊಬ್ಬ ನಟನಿಗೂ ಇದು ಮೈಲಿಗಲ್ಲಿನ ಕ್ಷಣ ಎಂದಿರುವ ಅಲ್ಲು ಅರ್ಜುನ್ (Allu Arjun) ಸೋಶಿಯಲ್ ಮೀಡಿಯಾದಲ್ಲಿ ಮೇಣದ ಪ್ರತಿಮೆ ಜೊತೆ ನಿಂತಿರುವ ಫೋಟೋ ಹಂಚಿಕೊಂಡಿದ್ದಾರೆ. ಸ್ವತಃ ತಾವೇ ಪ್ರತಿಮೆ ಅನಾವರಣ ಮಾಡಿ ಎಲ್ಲರಿಗೂ ಕೃತಜ್ಞತೆ ತಿಳಿಸಿದ್ದಾರೆ. 2003ರಲ್ಲಿ ಇದೇ ದಿನ `ಗಂಗೋತ್ರಿ’ ಸಿನಿಮಾ ರಿಲೀಸ್ ಆಗಿತ್ತು ಇಂದೇ ನನ್ನ ಮೇಣದ ಪ್ರತಿಮೆ ಅನಾವರಣ ಮಾಡುತ್ತಿದ್ದೇನೆ. 21 ವರ್ಷಗಳ ಅವಿಸ್ಮರಣೀಯ ಪ್ರಯಾಣವಿದು. ಈ ಪ್ರಯಾಣದಲ್ಲಿರುವ ಪ್ರತಿಯೊಬ್ಬರಿಗೂ ನಾನು ಆಭಾರಿಯಾಗಿದ್ದೇನೆ ಎಂದು ಅಲ್ಲು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ದುಬೈನ ಮೇಡಂ ಟುಸ್ಸಾಡ್ಸ್ ಮ್ಯೂಸಿಯಂ(Madame Tussauds Dubai) ವಿವಿಧ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದ ವ್ಯಕ್ತಿಗಳಿಗೆ ಮೇಣದ ಪ್ರತಿಮೆ ಮಾಡಿ ಗೌರವ ಸೂಚಿಸುತ್ತದೆ. ʻಪುಷ್ಪʼ(Pushpa) ಸಿನಿಮಾದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಸ್ಟೈಲಿಶ್ ಸ್ಟಾರ್(Stylish Star) ಇದೀಗ ಮೇಡಂ ಟುಸ್ಸಾಡ್ಸ್ ಮ್ಯೂಸಿಯಂ ಗೌರವಕ್ಕೂ ಭಾಜನರಾಗಿದ್ದಾರೆ.
ಥೇಟ್ ಅಲ್ಲು ಅವತಾರದಲ್ಲಿರುವ ಮೇಣದ ಪ್ರತಿಮೆ ಕಂಡು ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಜೊತೆಗೆ ತಮ್ಮ ನೆಚ್ಚಿನ ನಟನಿಗೆ ಸಂದ ಗೌರವಕ್ಕೆ ಸಿಕ್ಕಾಪಟ್ಟೆ ಜಾಲಿ ಮೂಡ್‌ನಲ್ಲಿದ್ದಾರೆ. ಸದ್ಯ ಪುಷ್ಟ-2(Pushpa-2) ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಅಲ್ಲು ತೆರೆ ಮೇಲೆ ಫೈರ್ ಮಾಡಲು ರೆಡಿಯಾಗುತ್ತಿದ್ದಾರೆ.