Balakrishna: ಟಾಲಿವುಡ್ ಚಿತ್ರರಂಗದ ಬ್ಲಾಕ್ ಬಸ್ಟರ್ ಸಿನಿಮಾ ಲೆಜೆಂಡ್(Legend) ತೆರೆಕಂಡು ಒಂದು ದಶಕ. ಬಾಲಯ್ಯ(Balayya) ಹಾಗೂ ಬೋಯಪಟಿ ಶ್ರೀನು(Boyapati Srinu) ಕಾಂಬಿನೇಶನ್‌ನಲ್ಲಿ ಬಂದ ಈ ಚಿತ್ರ ತೆಲುಗು ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದೆ. ದಾಖಲೆ ನಿರ್ಮಿಸಿರುವ ಚಿತ್ರದ ದಶಕದ ಸಂಭ್ರಮವನ್ನು ಚಿತ್ರತಂಡ ಸಿನಿಮಾ ರಿರಿಲೀಸ್ ಮಾಡುವ ಮೂಲಕ ಸಂಭ್ರಮಿಸಿದೆ.
ತೆಲುಗು ಚಿತ್ರರಂಗದಲ್ಲಿ ಈಗಲೂ ಅನೇಕ ರೆಕಾರ್ಡ್ ತನ್ನದಾಗಿಸಿಕೊಂಡಿರುವ ʻಲೆಜೆಂಡ್ʼ(Legend)ಸಿನಿಮಾ ಸತತ ಮೂರು ವರ್ಷ ಚಿತ್ರಮಂದಿರಲ್ಲಿ ಪ್ರದರ್ಶನ ಕಂಡಿದೆ. ʻಸಿಂಹʼ ಸಿನಿಮಾ ನಂತರ ಬೋಯಪಟಿ ಶ್ರೀನು ಜೊತೆ ಮತ್ತೆ ಕೈ ಜೋಡಿಸಿದ್ದ ಬಾಲಯ್ಯ(Balyya) ಜನಪ್ರಿಯತೆ ಈ ಸಿನಿಮಾ ಮೂಲಕ ಇನ್ನಷ್ಟು ಎತ್ತರಕ್ಕೆ ಬೆಳೆಯಿತು. ಈ ಇಬ್ಬರ ಕಾಂಬಿನೇಶನ್‌ನಲ್ಲಿ ಬಂದ ʻಸಿಂಹʼ, ʻಲೆಜೆಂಡ್ʼ ಹಾಗೂ ʻಅಖಂಡʼ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿವೆ. ಇದೀಗ ಹಿಸ್ಟರಿ ಕ್ರಿಯೇಟ್ ಮಾಡಿದ ಸಿನಿಮಾ ಮತ್ತೆ ತೆರೆಗೆ ಬರುತ್ತಿದೆ.
ʻಲೆಜೆಂಡ್ʼ(Legend) ಹತ್ತು ವರ್ಷ ಪೂರೈಸಿರುವ ಸಂಭ್ರಮದಲ್ಲಿ ಮಾತನಾಡಿರುವ ಬಾಲಯ್ಯ(Balayya) ಲೆಜೆಂಡ್ ಇಷ್ಟು ದೊಡ್ಡ ಹಿಟ್ ಕಾಣಲು ತೆಲುಗು ಪ್ರೇಕ್ಷಕರು ಕಾರಣ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಈ ಚಿತ್ರ ಎರಡು ಸೆಂಟರ್ ಗಳಲ್ಲಿ ನಾಲ್ಕು ಪ್ರದರ್ಶನದಂತೆ 400 ದಿನ ಪ್ರದರ್ಶನ ಕಂಡಿದೆ. 1116 ದಿನಗಳವರೆಗೆ 4 ಪ್ರದರ್ಶನದಂತೆ ತೆರೆಕಂಡ ದಕ್ಷಿಣ ಭಾರತದ ಏಕೈಕ ಸಿನಿಮಾ ʻಲೆಜೆಂಡ್ʼ ಎಂದು ಹೆಮ್ಮೆಯಿಂದ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
ಇದೇ ವೇಳೆ ಮಾತನಾಡಿದ ಬಾಲ್ಲಯ್ಯ(Balayya) ನಾನು ಪ್ರತಿ ಸಿನಿಮಾವನ್ನು ಹೊಸ ಸಿನಿಮಾದಂತೆ ನೋಡುತ್ತೇನೆ. ಈ ಚಿತ್ರದಲ್ಲಿ ಕುದುರೆಯೊಂದಿಗೆ ಗ್ಲಾಸ್ ಒಡೆಯುವ ದೃಶ್ಯವನ್ನು ಡ್ಯೂಪ್ ಇಲ್ಲದೇ ಮಾಡಿದ್ದೇನೆ. ನಿರ್ದೇಶಕರು ಡ್ಯೂಪ್ ಬಳಸಿ ಎಂದು ಹೇಳಿದರೂ, ಕೇಳದೇ ನನ್ನದೇ ಸ್ಟೈಲ್‌ನಲ್ಲಿ ಮಾಡಿದೆ ಎಂದು ಹಲವು ಇಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ನಿರ್ದೇಶಕ ಬೋಯಪಟಿ ಶ್ರೀನು( Boyapati Srinu) ಮಾತನಾಡಿ ನಮ್ಮ ಕಾಂಬಿನೇಶನ್‌ನಲ್ಲಿ ಬಂದ ʻಸಿಂಹʼ, ʻಲೆಜೆಂಡ್ʼ, ʻಅಖಂಡʼ ಸಿನಿಮಾಗಳು ಸಾಕಷ್ಟು ರೆಕಾರ್ಡ್ ಬ್ರೇಕ್ ಮಾಡಿವೆ. ಈ ಸಿನಿಮಾ ಮೂರು ವರ್ಷ ನಿರಂತರವಾಗಿ ಪ್ರದರ್ಶನ ಕಂಡಿದೆ. ಪ್ರತಿ ಸಿನಿಮಾ ಹಿಟ್ ಆದಾಗಲು ನಮ್ಮ ಜವಾಬ್ದಾರಿ ಹೆಚ್ಚಾಗುತ್ತದೆ ಎಂದಿದ್ದಾರೆ.