Rashmika Mandanna: ಟಾಲಿವುಡ್ ಸೆನ್ಸೇಶನಲ್ ಸ್ಟಾರ್ ವಿಜಯ್ ದೇವರಕೊಂಡ(Vijay Deverakonda) ಹಾಗೂ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ(Rashmika Mandanna) ಸ್ನೇಹ ಎಂತದ್ದು ಅನ್ನೋದು ಬಿಡಿಸಿ ಹೇಳಬೇಕಿಲ್ಲ. ಇವರಿಬ್ಬರ ಮಧ್ಯೆ ಲವ್ವಿ-ಡವ್ವಿ ಇದೆ ಎಂದು ಎಷ್ಟೇ ಸುದ್ದಿಯಾದ್ರು ಇಬ್ಬರೂ ಆ ಬಗ್ಗೆ ಗುಟ್ಟು ಬಿಟ್ಟುಕೊಡುತ್ತಿಲ್ಲ. ಆದ್ರೆ ಸಿನಿಮಾ ಹಾಗೂ ಸಿನಿಮಾದಾಚೆ ಇಬ್ಬರ ಸ್ನೇಹ ಸದ್ಯಕ್ಕಂತು ಹಾಲಿನಷ್ಟೇ ಬಿಳುಪು. ಅದೀಗ ಮತ್ತೆ ಪ್ರೂವ್ ಆಗಿದೆ.
ಹೌದು, ವಿಜಯ ದೇವರಕೊಂಡ(Vijay Deverakonda) ಹಾಗೂ ಮೃಣಾಲ್ ಠಾಕೂರ್(Mrunal Thakur) ಅಭಿನಯದ ʻಫ್ಯಾಮಿಲಿ ಸ್ಟಾರ್́ ಸಿನಿಮಾ ಇದೇ ಏಪ್ರಿಲ್ 5ಕ್ಕೆ ಬಿಡುಗಡೆಯಾಗುತ್ತಿದೆ. ಚಿತ್ರದ ಟ್ರೇಲರ್ ನಿನ್ನೆ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಚಿತ್ರದ ಟ್ರೇಲರ್ ಶೇರ್ ಮಾಡಿರುವ ರಶ್ಮಿಕಾ ಮಂದಣ್ಣ ನನ್ನ ಡಾರ್ಲಿಗ್ಸ್‌ಗೆ ಹಾಗೂ ಸಿನಿಮಾಗೆ ತುಂಬಾ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ. ಪೋಸ್ಟ್ ನಲ್ಲಿ ರಶ್ ವಿಜಯ್ ದೇವರಕೊಂಡ ಹಾಗೂ ನಿರ್ದೇಶಕ ಪರಸುರಾಮ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಇದನ್ನು ಕಂಡ ನೆಟ್ಟಿಗರು ಇವರಿಬ್ಬರ ಸ್ನೇಹ ಎಷ್ಟು ಪರಿಶುದ್ದವಾದುದ್ದು ಎಂದು ಕಮೆಂಟ್ ಮಾಡುತ್ತಿದ್ದಾರೆ. ರಶ್ ವಿಶ್ ಮಾಡಿದಕ್ಕೆ ಖುಷ್ ಆಗಿರುವ ಸೆನ್ಸೇಶನ್ ಸ್ಟಾರ್ ಕ್ಯೂಟೆಸ್ಟ್ ಎಂದು ಹಾರ್ಟ್ ಎಮೋಜಿ ಹಾಕಿದ್ದಾರೆ.
ಪರಸುರಾಮ್ ನಿರ್ದೇಶನದ `ಗೀತ ಗೋವಿದಂ’ ಸಿನಿಮಾದಲ್ಲಿ ವಿಜಯ ದೇವರಕೊಂಡ(Vijay Deverakonda), ರಶ್ಮಿಕಾ(Rashmika) ಒಟ್ಟಿಗೆ ತೆರೆ ಹಂಚಿಕೊಂಡಿದ್ರು. ಸಿನಿಮಾ ಕೂಡ ಸೂಪರ್ ಸಕ್ಸಸ್ ಕಾಣ್ತು. ಅಲ್ಲಿಂದ ಈ ಮೂವರ ಸ್ನೇಹ ಇನ್ನಷ್ಟು ಗಟ್ಟಿಯಾಯ್ತು, ಆ ಸ್ನೇಹದಿಂದಲೇ ರಶ್ ನ್ಯಾಶನಲ್ ಸ್ಟಾರ್ ಆಗಿ ಬೆಳೆದರೂ ಅಹಂ ತೋರದೇ ವಿಶ್ ಮಾಡಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗಿದೆ.
ವಿಜಯ ದೇವರಕೊಂಡ(Vijay Deverakonda), ರಶ್ಮಿಕಾ(Rashmika) ಈ ವರ್ಷದ ಆರಂಭದಲ್ಲಿ ಮದುವೆಯಾಗುತ್ತಾರೆ ಎಂಬ ಸುದ್ದಿಗಳು ಟಾಲಿವುಡ್ ಅಂಗಳದಲ್ಲಿ ರೆಕ್ಕೆ ಪುಕ್ಕ ಕಟ್ಟಿಕೊಂಡು ಒಡಾಡಿತ್ತು. ಆದ್ರೆ ಈ ಜೋಡಿ ಮಾತ್ರ ಅದಕ್ಕೆಲ್ಲ ಕ್ಯಾರೆ ಎನ್ನದೇ ತಮ್ಮದೇ ಲೋಕದಲ್ಲಿ, ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.