Nithin: ಟಾಲಿವುಡ್ ಪ್ರತಿಭಾವಂತ ನಟ ನಿತಿನ್(Nithin) ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ಸಮಯದಲ್ಲಿ ಅವರ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ʻತಮ್ಮುಡುʼ(Thammudu) ಸಿನಿಮಾ ಮೂಲಕ ಗೆಲುವಿನ ಹೊಸ ಇನಿಂಗ್ಸ್ ಆರಂಭಿಸುವ ತವಕದಲ್ಲಿದ್ದಾರೆ ನಿತಿನ್.
ತಮ್ಮುಡು(Thammudu) ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ರಿವೀಲ್ ಮಾಡಲಾಗಿದೆ. ನಿತಿನ್(Nithin) ಪೋಸ್ಟರ್ ಶೇರ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ʻಓ ಮೈ ಫ್ರೆಂಡ್́, ʻಮಿಡ್ಲ್ ಕ್ಲಾಸ್ ಅಬ್ಬಾಯ್, ವಕೀಲ್ ಸಾಬ್ ಸಿನಿಮಾ ಖ್ಯಾತಿಯ ನಿರ್ದೇಶಕ ಶ್ರೀರಾಮ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಕಾಂತಾರ ಸಿನಿಮಾ ಖ್ಯಾತಿಯ ನಟಿ ಸಪ್ತಮಿ ಗೌಡ(Sapthami Gowda) ನಿತಿನ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಬ್ಯಾಕ್ ಟು ಬ್ಯಾಕ್ ಸಿನಿಮಾ ಸೋಲಿನ ಸುಳಿಯಲ್ಲಿ ಸಿಲುಕಿರುವ ನಿತಿನ್(Nithin) ತಮ್ಮುಡು(Thammudu) ಸಿನಿಮಾ ಮೂಲಕ ಗೆಲುವು ಕಾಣುವ ನಿರೀಕ್ಷೆಯಲ್ಲಿದ್ದಾರೆ .ಮೂವತ್ತಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿರೋ ಟ್ಯಾಲೆಂಟೆಡ್ ಹೀರೋ ಸಿನಿಮಾ ಗೆಲುವಿನ ಸಂಖ್ಯೆ ಬೆರಳೆಣಿಕೆಯಷ್ಟು. 2020ರಲ್ಲಿ ತೆರೆಕಂಡ ʻಬೀಷ್ಮʼ ಸಿನಿಮಾ ನಂತರ ಯಾವುದೇ ಹಿಟ್ ಸಿನಿಮಾ ನೀಡಿಲ್ಲ ನಿತಿನ್. ಚೆಕ್, ರಂಗ್ ದೇ, ಮೇಸ್ಟ್ರೋ, ಎಕ್ಸ್ಟ್ರಾ ಆರ್ಡಿನರಿ ಸಿನಿಮಾ ಸೇರಿದಂತೆ ಬ್ಯಾಕ್ ಟು ಬ್ಯಾಕ್ ಐದು ಸಿನಿಮಾಗಳು ಹೀನಾಯ ಸೋಲು ಕಂಡಿವೆ. ಸತತ ಸೋಲು ನಿತಿನ್ ಸಿನಿ ಕೆರಿಯರ್‌ಗೂ ಉರುಳಾಗೋ ಸಾಧ್ಯತೆ ಇದೆ. ಇದ್ರಿಂದ ನಿತಿನ್ ಒಂದು ಬಿಗ್ ಬ್ರೇಕ್‌ಗಾಗಿ ಕಾಯುತ್ತಿದ್ದಾರೆ.
ಸದ್ಯ ನಿತಿನ್ ಅಭಿನಯದ ರಾಬಿನ್ ಹುಡ್ ಸಿನಿಮಾ ಬಿಡುಗಡೆಯಾಗಬೇಕಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದಲ್ಲಿ ಮೂಡಿಬಂದ ಈ ಚಿತ್ರಕ್ಕೆ ವೆಂಕಿ ಕುದುಮಲ ಆಕ್ಷನ್ ಕಟ್ ಹೇಳಿದ್ದಾರೆ. ಜಿ.ವಿ. ಪ್ರಕಾಶ್ ಸಂಗೀತ ನೀಡಿರುವ ಈ ಚಿತ್ರದ ಮೇಲೆ ನಿತಿನ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.